ಗಣೇಶ್ ದೇವೇಂದ್ರ್ಪ ಅವರ 60ನೇ ಜನ್ಮದಿನ ಆಚರಣೆ
Ganesh Devendra Pawar's 60th birthday celebration
ಲೋಕದರ್ಶನ ವರದಿ
ಹಾವೇರಿ 16: ಶೈಕ್ಷಣಿಕವಾಗಿ ಉಪಯೋಗಿಸುವ ಪೇನ್,ಪೆನ್ಸಿಲ್ ಹಾಗೂ ನೋಟ್ ಬುಕ್‌ಗಳನ್ನು ವಿತರಣೆ ಮಾಡುವ ಮೂಲಕ 60ನೇ ವರ್ಷದ ಜನ್ಮದಿನವನ್ನು ವಿಶಿಷ್ಟವಾಗಿ ಹಾಗೂ ಅರ್ಥಪೂರ್ಣ ಹುಟ್ಟು ಹಬ್ಬ ಆಚರಿಸಿಕೊಂಡ ಘಟನೆ ನಗರದಲ್ಲಿ ಜರುಗಿತು. ಇಲ್ಲಿನ ಇಜಾರಿ ಲಕಮಾಪುರದಲ್ಲಿರುವ ಜ್ಯೋತಿ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಯಲ್ಲಿ ಇಲ್ಲಿನ ಶಿವಯೋಗೇಶ್ವರ ನಗರದ 1ನೇ ಕ್ರಾಸ್‌ನಲ್ಲಿರುವ ಶ್ರೀ ಗಣೇಶ ಗ್ಯಾರೇಜ್ ಮಾಲಕರಾದ ಗಣೇಶ ದೇವೇಂದ್ರ್ಪ ತಿಳವಳ್ಳಿ ಅವರು ವಿಶಿಷ್ಟವಾಗಿ ಹುಟ್ಟು ಹಬ್ಬ ಆಚರಣೆಗೆ ಸಾಕ್ಷಿಯಾಗಿದ್ದಾರೆ. ನಿರಂತರ ಶ್ರಮಿಕರಾದ ಗಣೇಶ ತಿಳವಳ್ಳಿ ಅವರ 60ನೇ ಹುಟ್ಟುವನ್ನು ಮಗ ಕಿರಣ ತಿಳವಳ್ಳಿ ಹಾಗೂ ಕುಟುಂಬ ವರ್ಗದವರು ಸೇರಿಕೊಂಡು ದೇವರ ಸ್ವರೂಪಿ ಬುದ್ಧಿಮಾಂದ್ಯ ಮಕ್ಕಳ ಜೊತೆಗೆ ಕೇಕ್ ಕತ್ತರಿಸಿ, ಸಿಂಹಿ ಹಂಚಿ ಮಕ್ಕಳಿಗೆ ಶೈಕ್ಷಣಿಕವಾಗಿ ಉಪಯೋಗಿಸುವ ಪೇನ್,ಪೆನ್ಸಿಲ್ ಹಾಗೂ ನೋಟ್ ಬುಕ್‌ಗಳನ್ನು ವಿತರಣೆ ಮಾಡಲಾಯಿತು.
ಸೌಮ್ಯ ಸ್ವಭಾವದ ಗಣೇಶ ತಿಳವಳ್ಳಿ ಅವರು ಬಸವೇಶ್ವರ ಕಾಯಕವೇ ಕೈಲಾಸ ತತ್ವದಡಿ ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡವರು.ಮುಗ್ಧ ಮನೋಭಾವನೆಯ ಗಣೇಶ ತಿಳವಳ್ಳಿ ಅವರು ತಮ್ಮ ವೃತ್ತಿಯಲ್ಲಿ ಪ್ರಾಮಾಣಿಕತೆಯನ್ನು ಅವಳಡಿಸಿಕೊಂಡು ಎಲ್ಲರಿಗೂ ಒಳಿತು ಭಯಸುವ ಗುಣ ಉಳ್ಳವರಾದ ಅವರು ಬುದ್ಧಿಮಾಂದ್ಯ ಮಕ್ಕಳೊಂದಿಗೆ ತಮ್ಮ 60 ವರ್ಷದ ಹುಟ್ಟು ಹಬ್ಬ ಆಚರಣೆ ಅವರ ಸಾರ್ಥಕ ಬದುಕಿನ ಕ್ಷಣವಾಗಿ ಕಂಡು ಬಂದಿತು.ಮಕ್ಕಳು,ಕುಟುಂಬ ವರ್ಗದವರು ಹಾಗೂ ಹಿತೈಷಿಗಳು ಅವರ ಈ ವಿಶಿಷ್ಟ ಅರ್ಥಪೂರ್ಣ ಹುಟ್ಟು ಹಬ್ಬಕ್ಕೆ ಶುಭ ಹಾರೈಸಿ,ಅವರಿಗೆ ದೇವರು ಆರೋಗ್ಯ,ಆಯುಷ್ಯ ಹಾಗೂ ಸಿರಿ ಸಂಪತ್ತು ನೀಡಲಿ ಎಂದು ಶುಭ ಕೋರಿದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 