ಜಿ.ಜಿ.ದ್ಯಾವನಗೌಡ್ರ ಅವರ ಕುಟುಂಭದ ಶುಭ ವಿವಾಹ ಕಾರ್ಯಕ್ರಮ

ಜಿ.ಜಿ.ದ್ಯಾವನಗೌಡ್ರ ಅವರ ಕುಟುಂಭದ ಶುಭ ವಿವಾಹ ಕಾರ್ಯಕ್ರಮ GG Dyavan Gowdra's family auspicious wedding event

           ಹುಬ್ಬಳ್ಳಿ 17: ಅದರಗುಂಚಿ ಗ್ರಾಮದ ಗಣ್ಯರು, ನವೀನ ಮೀಡಿಯಾ ಸೊಲುಸನ್ಸ ಮಾಲಿಕರು, ಪಂಚಮಸಾಲಿ ಸಮಾಜದ ಮುಖಂಡರು, ಆತ್ಮೀಯರಾದ ಜಿ.ಜಿ.ದ್ಯಾವನಗೌಡ್ರ ಅವರ ಕುಟುಂಭದ ಶುಭ ವಿವಾಹ ಕಾರ್ಯಕ್ರಮ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಗ್ರಾಮದ ಸತೀಶ ಕಲ್ಯಾಣ ಮಂಟಪದಲ್ಲಿ ಅದ್ಧೂರಿಯಾಗಿ ನೇರವೇರಿತು.ನವ ವಧುವರರಾದ ಐಶ್ವರ್ಯ್‌ ಹಾಗೂ ಪ್ರಮೋದ ಅವರಿಗೆ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಸದಸ್ಯರು ಗ್ರಂಥ ನೀಡಿ ಶುಭ ಕೋರಿದರು.  ಹಲವಾರು ಗಣ್ಯರು ಭಾಗವಹಿಸಿ ಶುಭಾಶೀರ್ವದಿಸಿದರು. ಭಾವಿ ಜೀವನ ಯಶಸ್ವಿಯಾಗಿ ನೆರವೆರಲಿ ಎಂದು ಶುಭ ಕೋರಿದರು. 

       ವ್ಹಿ.ಆರ್‌.ಎಲ್‌. ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ಧೇಶಕ ಡಾ. ಆನಂದ ಸಂಕೇಶ್ವರ, ಮಾಜಿ ಶಾಸಕ ಎಸ್‌.ಐ.ಚಿಕ್ಕನಗೌಡ್ರ, ಸೋಹನ್ ಸುರೇಶ್ ಹೊರಕೇರಿ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ,  ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ,ಗುರುಸಿದ್ದಗೌಡ ಗಿ. ದ್ಯಾವನಗೌಡ್ರ, ಶಶಿಕಲಾ ದ್ಯಾವನಗೌಡ್ರ, ನವೀನಗೌಡ್ರ ದ್ಯಾವನಗೌಡ್ರ, ಸುಮಿತ್ರಾ, ಶಿವಾನಂದ ಬ. ಬೈಲೂರ, ಮಾಲತೇಶ ಗುಡೇನಕಟ್ಟಿ, ಸಂಭಾಜಿ ಕಲಾಲ, ರವಿಚಂದ್ರ ಬಾಲೆಹೊಸೂರ, ಪ್ರೊ ಎನ್‌.ಆರ್‌.ಬಾಳಿಕಾಯಿ, ಗುರುಸಿದ್ದಪ್ಪ ಬಡಿಗೇರ ಸೇರಿದಂತೆ ದ್ಯಾವನಗೌಡ್ರ ಹಾಗೂ ಬೈಲೂರ ಬಂಧುಗಳು, ಗೆಳೆಯರು, ಮುಂತಾದವರು ಭಾಗವಸಿದ್ದರು.