ಸ್ವಾತಂತ್ರ್ಯ ತ್ಯಾಗ ಮತ್ತು ಬಲಿದಾನದ ಫಲ: ಡಾ. ಪ್ರವೀಣ ಖನ್ನೂರ

ಸ್ವಾತಂತ್ರ್ಯ ತ್ಯಾಗ ಮತ್ತು ಬಲಿದಾನದ ಫಲ: ಡಾ. ಪ್ರವೀಣ ಖನ್ನೂರ  Freedom is the fruit of sacrifice and martyrdom: Dr. Praveen Khannur


ರಾಣೇಬೆನ್ನೂರು, ಆ.21: ದೇಶಕ್ಕೆ ಸ್ವಾತಂತ್ರ್ಯ ದೊರೆತಿರುವುದು ಲಕ್ಷಾಂತರ ದೇಶಾಭಿಮಾನಿಗಳ ತ್ಯಾಗ ಮತ್ತು ಬಲಿದಾನದ ಫಲವಾಗಿದೆ ಎಂದು ಖನ್ನೂರ ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಪ್ರವೀಣ ಖನ್ನೂರ ಹೇಳಿದರು.  

ಶಾಲಾ ಆವರಣದಲ್ಲಿ ಇತ್ತೀಚೆಗೆ ನಡೆದ 80ನೇ ಸ್ವಾತಂತ್ರ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇಂದಿನ ವಿದ್ಯಾರ್ಥಿಗಳೇ ಭವ್ಯ ಭಾರತದ ಭವಿಷ್ಯದ ನಾಗರಿಕರಾಗಿದ್ದು, ಸ್ವಾತಂತ್ರ್ಯದ ಮಹತ್ವವನ್ನು ಅರಿತು ದೇಶ, ರಾಷ್ಟ್ರ ಹಾಗೂ ನಾಡಿನ ಬಗ್ಗೆ ಪ್ರೀತಿ ಬೆಳೆಸಿಕೊಂಡು ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ಅಳವಡಿಸಿಕೊಂಡು ಮುನ್ನಡೆಯಬೇಕು ಎಂದರು.  

ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾ. ಶೈಲಶ್ರೀ ಪಿ. ಖನ್ನೂರ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿ, ದೇಶದ ರಕ್ಷಣೆಗಾಗಿ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಪ್ರಾಣ ತ್ಯಾಗ ಮಾಡಿದ ವೀರಯೋಧರ ಸ್ಮರಣೆ ನಿತ್ಯೋತ್ಸವವಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.  ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಮನೀಷ ಅಜರಬಿ ಸೇರಿದಂತೆ ಮುಖ್ಯೋಪಾಧ್ಯಾಯರು, ಶಿಕ್ಷಕರು ಹಾಗೂ ಸಾವಿರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.