ಜುಗೂಳದಲ್ಲಿ ಉಚಿತ ಆರೋಗ್ಯ ಶಿಬಿರ ಸಂಪನ್ನ ; 150 ಕ್ಕೂ ಅಧಿಕ ಶಿಬಿರಾರ್ಥಿಗಳಿಗೆ ಲಾಭ..!
Free health camp concludes in Jugula; over 150 participants benefit!
ಕಾಗವಾಡ 26: ತಾಲೂಕಿನ ಜುಗೂಳ ಗ್ರಾಮದ ತ್ರಿನೇತ್ರ ಗಜಾನನ ಮಂಡಳದ ವತಿಯಿಂದ ಮಿರಜದ ಸ್ಪಂದನ ಹೃದಯಾಲಯ ಮತ್ತು ಸೂಪರ್ ಸ್ಪೆಶಾಲಿಸ್ಟ್ ಆಸ್ಪತ್ರೆಯ ಸಹಯೋಗದೊಂದಿಗೆ ಕೃಷ್ಣಮಾಯಿ ಮಂದಿರದಲ್ಲಿ ಶನಿವಾರ ದಿ.26 ರಂದು ಉಚಿತ ಆರೋಗ್ಯ ತಪಾಸಣೆ ಶಿಬಿರ ಸಂಪನ್ನಗೊಂಡಿತು.ಶಿಬಿರದಲ್ಲಿ ಭಾಗವಹಿಸಿದ 150 ಕ್ಕೂ ಅಧಿಕ ಜನರಿಗೆ ಇಸಿಜಿ, ಬಿಪಿ, ಶುಗರ್, ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳು, ಅರ್ಥೋ ಸೇರಿದಂತೆ ಇತರೇ ಕಾಯಿಲೆಗಳ ಪರೀಕ್ಷೆ ನಡೆಸಲಾಗಿತು.
ಈ ವೇಳೆ ಸ್ಪಂದನ ಹೃದಯಾಲಯದ ನಿರ್ದೇಶಕ ಡಾ. ರಿಯಾಜ ಮುಜಾವರ ಮಾತನಾಡಿ, ಆಯುಷ್ಮಾನ್ ಭಾರತ, ಆರೋಗ್ಯ ಕರ್ನಾಟಕ ಯೋಜನೆ ಯಡಿಯಲ್ಲಿ ಶಿಬಿರಲ್ಲಿ ಮತ್ತು ನಮ್ಮ ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗಿದ್ದು, ಪ್ರತಿಯೊಬ್ಬರ ಕರ್ನಾಟಕ ಸರ್ಕಾರದ ಯೋಜನೆಗಳ ಲಾಭ ಪಡೆದುಕೊಳ್ಳಬೇಕೆಂದು ತಿಳಿಸಿದರು.ಈ ವೇಳೆ ಸ್ಪಂದನ ಆಸ್ಪತ್ರೆಯ ವೈದ್ಯರಾದ ಡಾ. ರಿಯಾಜ ಮುಜಾವರ, ಡಾ. ಅರ್ಬಾಜ ಮೌಲ್ವಿ, ಡಾ. ಮನಿಷಾ ರಣದೇವಿ, ಸ್ವಪ್ನಿಲ ಬೋರಗಾವೆ, ನಿಹಾಲ ಬಾಲದಾರ, ಸಚಿನ ಖರಪೆ, ಅಪ್ಸಾನಾ ಮುಲ್ಲಾ, ಅತುಲ ಕೋಳೇಕರ, ಸಾಹಿಲ ಮುಲ್ಲಾ, ಫಜಲ ಬುಜುರಗ ಸೇರಿದಂತೆ ತ್ರಿನೇತ್ರ ಗಜಾನನ ಮಂಡಳದ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಗಣೇಶ ವಿಸರ್ಜನೆ ವೇಳೆ ದುರಂತ : ಬೆಳಗಾವಿಯ ಯುವಕ ನೀರಲ್ಲಿ ಮುಳುಗಿ ಸಾವು
ಚನ್ನಮ್ಮ ಪ್ರತಿಮೆ ಪ್ರತಿಷ್ಠಾಪನೆಗೆ ನವೆಂಬರ 1ರ ಗಡುವು ನೀಡಿದ ಕನ್ನಡ ಸಂಘಟನೆಗಳು
ಎನ್ಒಸಿ ನೀಡಲು ಲಂಚ : ಖಾನಾಪುರ ತಾಲೂಕು ಆರೋಗ್ಯಾಧಿಕಾರಿ ಲೋಕಾಯುಕ್ತ ಬಲೆಗೆ
ಅರ್ಧಕ್ಕೆ ನಿಂತ ಚನ್ನಮ್ಮ ಪ್ರತಿಮೆ ಕಾಮಗಾರಿ: ಅವ್ಯವಹಾರದ ಶಂಕೆ : ಲೆಕ್ಕ ಕೊಡಿ ಹೋರಾಟಕ್ಕೆ ಕನ್ನಡ ಹೋರಾಟಗಾರರು ಸಜ್ಜು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ 