ಸೆ.15ರಂದು ಮೆಡ್ಲೇರಿ ಗ್ರಾಮದಲ್ಲಿ ಉಚಿತ ಆರೋಗ್ಯ, ಓಷಧಿ ಹಾಗೂ ನೇತ್ರ ತಪಾಸಣಾ ಶಿಬಿರ
Free health, medicine, and eye check-up camp in Medleri village on September 15.
ಸೆ.15ರಂದು ಮೆಡ್ಲೇರಿ ಗ್ರಾಮದಲ್ಲಿ ಉಚಿತ ಆರೋಗ್ಯ, ಓಷಧಿ ಹಾಗೂ ನೇತ್ರ ತಪಾಸಣಾ ಶಿಬಿರ
ರಾಣೆಬೆನ್ನೂರ 11 : ತಾಲೂಕಿನ ಮೆಡ್ಲೇರಿ ಗ್ರಾಮದ ಕೋಟೆಯಲ್ಲಿರುವ ಕಾಲೋನಿಯಲ್ಲಿ ಸೆ.15ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 1.30ರವರೆಗೆ ಉಚಿತ ಆರೋಗ್ಯ ತಪಾಸಣೆ, ಓಷಧಿ ವಿತರಣೆ, ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರ ಆಯೋಜಿಸಲಾಗಿದೆ ಎಂದು ಹಾವೇರಿ ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಅಧ್ಯಕ್ಷ ಹಾಗೂ ಮಾಜಿ ಎಪಿಎಂಸಿ ಸದಸ್ಯ ಬಸವರಾಜ ಎಂ. ಹುಲ್ಲತ್ತಿ ತಿಳಿಸಿದರು.
ಗುರುವಾರ ನೀರೀಕ್ಷಣಾ ಮಂದಿರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಗ್ರಾಮದ ಶ್ರೀ ಗಜಾನನ ಉತ್ಸವದ ಅಂಗವಾಗಿ 28ನೇ ವರ್ಷದ ಶ್ರೀ ಗಜಾನನ ಉತ್ಸವದ ಪ್ರಯುಕ್ತ ಶ್ರೀ ಗಜಾನನ ಯುವಕ ಮಂಡಳಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗಳ ಸಹಯೋಗದಲ್ಲಿ ಶಿಬಿರ ಆಯೋಜಿಸಲಾಗಿದೆ ಎಂದರು.
ಶಿಬಿರದಲ್ಲಿ ನೇತ್ರ ತಜ್ಞೆ ಡಾ. ಲೇನಾ ಪಾಟೀಲ್, ಜನರಲ್ ತಜ್ಞ ಡಾ. ಗೀರೀಶ್ ಕೆಂಚಪ್ಪನವರ್, ್ತ್ಝ್ತೂಹ್ಕ್ಧಿಷ್ದಹಿಷದಿಳ್ಚ್ದಿ ತಜ್ಞೆ ಡಾ. ಚೇತನಾ ಜೆಪಿ ಸೇರಿದಂತೆ ತಜ್ಞ ವೈದ್ಯರು ಸಾರ್ವಜನಿಕರ ಆರೋಗ್ಯ ತಪಾಸಣೆ ನಡೆಸಲಿದ್ದಾರೆ.
ದಾನಿ ಅನಸೂಯಮ್ಮ ಮುರುಗೇಶಪ್ಪ ಹುಲ್ಲತ್ತಿ ಹಾಗೂ ಮಕ್ಕಳ ಸಹಕಾರದಿಂದ ಅಗತ್ಯ ಓಷಧಿಗಳನ್ನು ಉಚಿತವಾಗಿ ವಿತರಿಸಲಾಗುವುದು ಎಂದು ಬಸವರಾಜ್ ಹುಲ್ಲತ್ತಿ ತಿಳಿಸಿದರು.
ಶಿಬಿರದಲ್ಲಿ ನೇತ್ರ, ಕಿವಿ, ಮೂಗು ಹಾಗೂ ಗಂಟಲು ಸಂಬಂಧಿತ ಸಮಸ್ಯೆಗಳಿರುವವರು ತಪಾಸಣೆಗೆ ಒಳಗಾಗಬಹುದು. ತಪಾಸಣೆಗೆ ಬರುವಾಗ ಆಧಾರ್ ಕಾರ್ಡ, ಯಶಸ್ವಿನಿ ಕಾರ್ಡ, ಧರ್ಮಸ್ಥಳ ಆರೋಗ್ಯ ರಕ್ಷಣಾ ಕಾರ್ಡ್ ಸೇರಿದಂತೆ ಅನ್ವಯವಾಗುವ ವೈದ್ಯಕೀಯ ದಾಖಲೆಗಳನ್ನು ತರಬೇಕು ಎಂದು ಮನವಿ ಮಾಡಿದರು.
ಶಿಬಿರಕ್ಕೆ ಮುನ್ನಾ ದಿನವಾದ ಸೆ.14ರಂದು ಸಂಜೆ 5 ಗಂಟೆಯಿಂದ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಅವರು ಕೋರಿದರು.
ಹೆಚ್ಚಿನ ಮಾಹಿತಿಗಾಗಿ 98448 89906, 96860 53099 ಹಾಗೂ 70191 83644 ಸಂಪರ್ಕಿಸಬಹುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಡಾ. ಗೀರೀಶ್ ಕೆಂಚಪ್ಪನವರ್, ಚೆನ್ನಪ್ಪ ಎಡಚಿ, ವಿಜಯ್ ಕೆಳಗಿನಮನಿ, ಸುಮಿತ್ ಕಾಕೋಳ್, ಮೌನೇಶ್ ತಳವಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 