ಜು.18ರಂದು ಉಚಿತ ಎಲುಬು ಮತ್ತು ಕೀಲು ತಪಾಸಣಾ ಶಿಬಿರ

ಜು.18ರಂದು ಉಚಿತ ಎಲುಬು ಮತ್ತು ಕೀಲು ತಪಾಸಣಾ ಶಿಬಿರ  Free Bone and Joint Check-up Camp on July 18

ಲೋಕದರ್ಶನ ವರದಿ 

ಕಂಪ್ಲಿ, ಜು.11: ಪಟ್ಟಣದ ಸಾಂಸ್ಕೃತಿಕ ಸಂಸ್ಕೃತ ಪಾಠಶಾಲೆಯಲ್ಲಿ ಅಕ್ಕಮಹಾದೇವಿ ಮಹಿಳಾ ಮಂಡಳಿಯ ವತಿಯಿಂದ ಜುಲೈ 18ರಂದು ಉಚಿತ ಎಲುಬು ಮತ್ತು ಕೀಲು ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಮಹಿಳಾ ಮಂಡಳಿಯ ಅಧ್ಯಕ್ಷೆ ಡಾ. ಶಾರದಾ ಜಗನ್ನಾಥ ಹಿರೇಮಠ ತಿಳಿಸಿದ್ದಾರೆ.  

ಶನಿವಾರ ಸ್ಥಳೀಯ ಸಾಂಸ್ಕೃತಿಕ ಸಂಸ್ಕೃತ ಪಾಠಶಾಲೆಯ ಅಕ್ಕಮಹಾದೇವಿ ದೇವಸ್ಥಾನದ ಆವರಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಣೆಬೆನ್ನೂರಿನ ಖ್ಯಾತ ಅಸ್ಥಿ ತಜ್ಞ ಡಾ. ಸಂಜೀವ್ ಎಂ. ಮುದ್ರಿ ಅವರ ನೇತೃತ್ವದಲ್ಲಿ ಎಲುಬು, ಕೀಲು ಸಂಬಂಧಿತ ಕಾಯಿಲೆಗಳು ಹಾಗೂ ಮೂಳೆ ಮುರಿತ ಸಮಸ್ಯೆಗಳ ಕುರಿತು ಉಚಿತ ತಪಾಸಣೆ ಮತ್ತು ಚಿಕಿತ್ಸಾ ಸಲಹೆ ನೀಡಲಾಗುವುದು ಎಂದರು.  

ಕಂಪ್ಲಿ ಸೇರಿದಂತೆ ತಾಲ್ಲೂಕಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಅವರು ಮನವಿ ಮಾಡಿದರು.  ಹೆಚ್ಚಿನ ಮಾಹಿತಿಗಾಗಿ ಡಾ. ಶಾರದಾ ಹಿರೇಮಠ (ಮೊ. 9986789272), ಕಾರ್ಯದರ್ಶಿ ಟಿ. ಸುಮಂಗಲಾ (ಮೊ. 8971825142) ಹಾಗೂ ಪುಷ್ಪಾ (ಮೊ. 8310990272) ಅವರನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.  

ಈ ಸಂದರ್ಭದಲ್ಲಿ ಕಾರ್ಯದರ್ಶಿ ಬಿ. ಸುಮಂಗಲಾ, ಉಪ ಕಾರ್ಯದರ್ಶಿ ಬಿ.ಎಂ. ಪುಷ್ಪಾ, ಸದಸ್ಯೆಯರಾದ ವಾಲಿ ಶಕುಂತಲಾ, ಉಮಾ ಕೋಟೆ, ಅರವೀ ಅನುಪಮಾ, ಟಿ. ಸುಜಾತಾ, ಪಾಠಶಾಲೆಯ ಪ್ರಾಚಾರ್ಯ ಘನವಠ ಶಾಸ್ತ್ರಿ, ಪಿ.ಎಸ್‌. ಬಸವರಾಜ್, ವೆಂಕಟೇಶರೆಡ್ಡಿ ಹಾಗೂ ಇತರರು ಉಪಸ್ಥಿತರಿದ್ದರು.