ವಿದ್ಯಾರ್ಥಿಗಳ ಪ್ರತಿಭೆಗೆ ಪ್ರೇರಣೆ ಪ್ರತಿಭಾ ಕಾರಂಜಿ : ಶ್ರೀಕಾಂತ
Fountain of Talent is an inspiration for students' talent: Srikanth
ಶಿಗ್ಗಾವಿ 13: ಮಕ್ಕಳ್ಳಲ್ಲಿರುವ ಪ್ರತಿಭೆಯನ್ನು ಪಾಲಕರು, ಶಿಕ್ಷಕರು, ಶಿಕ್ಷಣ ಪ್ರೇಮಿಗಳು ಗುರುತಿಸಿ ಪ್ರೋತ್ಸಾಹಿಸಬೇಕೆಂದು ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಹೇಳಿದರು. ತಾಲೂಕಿನ ಕಬನೂರ ಗ್ರಾಮದಲ್ಲಿ ಬನ್ನೂರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿ ಜೀವನದಲ್ಲಿ ಹೊಸ ಹೊಸ ಅನ್ವೇಷಣೆ ಕೌಶಲ್ಯ ಕ್ರಿಯಾತ್ಮಕ ಚಟುವಟಿಕೆ ಬೆಳೆಸಿಕೊಂಡಾಗ ಮಾತ್ರ ವ್ಯಕ್ತಿತ್ವ ವಿಕಸನ ಸಾಧ್ಯ ಜೊತೆಗೆ ಪರಿಪೂರ್ಣ ವ್ಯಕ್ತಿಯಾಗಲು ಸಾಧ್ಯ ಈ ದಿಸೆಯಲ್ಲಿ ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಯನ್ನು ಹೊರಹಾಕಿ ಸಾಧಕರಾಗಬೇಕು ಎಂದು ಹೇಳಿದರು. ಎಸ್ ಡಿ ಎಂ ಸಿ ಅಧ್ಯಕ್ಷ ಈರ್ಪ ಚಿಂಚಲಿ ಅಧ್ಯಕ್ಷತೆವಹಿಸಿದ್ದರುಈ ಸಂದರ್ಭದಲ್ಲಿ ಬಿ. ಶ್ರೀನಿವಾಸ ಊರಿನ ಪ್ರಮುಖರಾದ ಬಸವರಾಜ ಜಕ್ಕಣ್ಣವರ, ಶಿವಪ್ಪ ಜಕ್ಕಣ್ಣವರ, ಗದಿಗೆಪ್ಪ ಗುಂಡಣ್ಣವರ, ಸೋಮಪ್ಪ ಕಾಳಿ ,ನಾಗಪ್ಪ ಚಿಂಚಲಿ, ಚನ್ನಬಸಪ್ಪ ಗುಂಡಣ್ಣವರ, ಗಂಗಾಧರ ಗುಂಡಣ್ಣವರ, ಉಪನ್ಯಾಸಕ ಧರ್ಮರಾಜ ಬಿಂದಲಗಿ, ಅಶೋಕ್ ಓಲೇಕಾರ್, ಶಿವಾನಂದ ಕಮಡೊಳ್ಳಿ, ಬಸವರಾಜ್ ಲಂಗೋಟಿ ಅಧಿಕಾರಿಗಳು, ಶಿಕ್ಷಕರು,ಬಿ. ಆರ್. ಪಿ.ಹಾಗೂ ಸಿ. ಆರ್. ಪಿ ವಿದ್ಯಾರ್ಥಿಗಳು ಇದ್ದರು.
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ 