ಮಾಜಿ ಶಾಸಕ ಅರುಣ್ ಕುಮಾರ ಮಾತಿನಿಂದ ತಮಗೇನು ನೋವಾಗಿಲ್ಲ : ಆದರೆ ತಂದೆ ಕೆ.ಬಿ. ಕೋಳಿವಾಡ ಅವರ ಹೆಸರು ಉಲ್ಲೇಖಿಸಿದ್ದು ನೋವಾಗಿದೆ - ಪ್ರಕಾಶ್ ಕೋಳಿವಾಡ

 ಮಾಜಿ ಶಾಸಕ ಅರುಣ್ ಕುಮಾರ ಮಾತಿನಿಂದ ತಮಗೇನು ನೋವಾಗಿಲ್ಲ : ಆದರೆ ತಂದೆ ಕೆ.ಬಿ. ಕೋಳಿವಾಡ ಅವರ ಹೆಸರು ಉಲ್ಲೇಖಿಸಿದ್ದು ನೋವಾಗಿದೆ - ಪ್ರಕಾಶ್ ಕೋಳಿವಾಡ  Former MLA Arun Kumar's words did not hurt me: But mentioning his father K.B. Koliwada's name hurt m

ಲೋಕದರ್ಶನ ವರದಿ 

ಮಾಜಿ ಶಾಸಕ ಅರುಣ್ ಕುಮಾರ ಮಾತಿನಿಂದ ತಮಗೇನು ನೋವಾಗಿಲ್ಲ : ಆದರೆ ತಂದೆ ಕೆ.ಬಿ. ಕೋಳಿವಾಡ ಅವರ ಹೆಸರು ಉಲ್ಲೇಖಿಸಿದ್ದು ನೋವಾಗಿದೆ - ಪ್ರಕಾಶ್ ಕೋಳಿವಾಡ  

     ರಾಣೇಬೆನ್ನೂರು 23: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರ ಆದೇಶದಂತೆ ತಾವು, ಮೂಲ  ಕಾಂಗ್ರೆಸ್ ಆಸ್ತಿಯಾಗಿರುವ, ಇಂದಿನ ಬಿಜೆಪಿ ಕಾರ್ಯಾಲಯ ಹೊಂದಿರುವ ಕಚೇರಿ ಆಸ್ತಿಯನ್ನು ಮರಳಿ ಪಡೆಯಲು  ಬಿಜೆಪಿ ಕಾರ್ಯಾಲಯ, ಕುರಿತು ದೂರು ದಾಖಲಿಸಲಾಗಿದೆ ಹೊರತು ಮತ್ಯಾವ ಉದ್ದೇಶವಿಲ್ಲ, ಎಂದು ಶಾಸಕ ಪ್ರಕಾಶ್ ಕೋಳಿವಾಡ ಸ್ಪಷ್ಟಪಡಿಸಿದರು. ಅವರು, ಇಂದು  ತಮ್ಮ ಗ್ರಹಸಭಾದಲ್ಲಿ ಆಯೋಜಿಸಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.  

   ನಗರಸಭೆಯಲ್ಲಿ ನಡೆಯಬಹುದಾದ ಸಾಮಾನ್ಯ ಸಭೆಯ ಮುನ್ನಾ ದಿನವೇ  ಕುರಿತು  ಉಪಾಧ್ಯಕ್ಷ  ಮಣಿ ಪವಾರ್, ಪಕ್ಷದ ಅಧ್ಯಕ್ಷ ಮಂಜುನಾಥ್ ಕಾಟಿ ಅವರೊಂದಿಗೆ ತಾವು ಚರ್ಚಿಸಿ, ಯಾವುದೇ ಜಾತಿ, ಮತ,ಭೇದ, ಭಾವ, ಪಕ್ಷ, ತಾರತಮ್ಯ ಎಣಿಸದೆ,  ನಗರ ಅಭಿವೃದ್ಧಿಗೆ ಮುಂದಾಗಬೇಕೆಂದು ಮನವಿ ಮಾಡಿದ್ದೆ. ಅದಕ್ಕೆ ಎಲ್ಲರೂ ಒಪ್ಪಿಕೊಂಡಿದ್ದರು ಹಿಗಿದ್ದರೂ,ಮರು ದಿವಸ ಸಭೆಗೆ ಬಾರದೆ ಗೈರಾಗಿ ಸಭೆ  ನಡೆಯದಂತಾಯ್ತು. ಇದು ವಿಪರ್ಯಾಸ.  ಸಭೆ ನಡೆಯದಂತಾಗಲು, ಸದಸ್ಯರು ಗೈರಾಗಲು  ನಿಖರವಾದ ಕಾರಣ ತಮಗೆ ಗೊತ್ತಿಲ್ಲ. ಅದು ಅವರ ಪಕ್ಷಕ್ಕೆ ಬಿಟ್ಟ ವಿಚಾರ ಇದರಿಂದ ಅನಾವಶ್ಯಕವಾಗಿ, ಗದ್ದಲಕ್ಕೆ ಕಾರಣವಾದಂತಾಗಿದೆ. ಎಂದರು.      

       ಹೇಳಿಕೆ, ಕೇಳಿಕೆ ಗೊಂದಲ ರಾಜಕಾರಣ ತಾವು ಮಾಡಲು ಬಂದಿಲ್ಲ. ವಿವಾದವು ತಮಗೆ ಬೇಕಾಗಿಲ್ಲ. ವಿವಾದ ರಹಿತ, ವೈಚಾರಿಕ ಚಿಂತನೆಯಲ್ಲಿ ರಾಣೆಬೆನ್ನೂರು ಮತ್ತು ತಾಲೂಕು ಸಮಗ್ರ ಅಭಿವೃದ್ಧಿಗೆ ನನ್ನ ಚಿಂತನೆಯಾಗಿದೆ ಎಂದರು.     ಬಿಜೆಪಿ ಕಚೇರಿ ಹೊಂದಿರುವ ಜಮೀನು ಜಿದ್ದಿಗೆ ಬಿದ್ದು ಪಡೆಯಲು ನನ್ನ ಮನಸಿಲ್ಲ. ಕಾಂಗ್ರೆಸ್ ಕಚೇರಿಗೆ ಈಗಾಗಲೇ ನಿವೇಶನ ಹೊಂದಲು   ಹೊಂದಲು, ಪಡೆಯಲು,ಪ್ರಯತ್ನ ನಡೆಸಿದ್ದೇನೆ. ಇದೇ ಜಮೀನು ಬೇಕೆಂಬ ಹಟ ನನಗಿಲ್ಲ.ಆ ಕುರಿತು ನ್ಯಾಯಾಲಯದ ತೀಪು ನಿರ್ಧರಿಸಲಿದೆ ಎಂದರು.        ನಾನು ಹಣ ಮಾಡಲು ರಾಜಕೀಯಕ್ಕೆ ಬಂದಿಲ್ಲ.  

        ನನಗೆ ನನ್ನದೇ ಆದಂತ ಉದ್ಯಮಗಳಿವೆ. ಇಲ್ಲಿ ಹಣ ಮಾಡುವ ಉದ್ದೇಶ ನನಗಿಲ್ಲ. ಓಸಿ, ಇಸ್ಪೀಟ್, ಜುಗಾರಿ, ಗಾಂಜಾ ಮತ್ತಿತರೆ ಅಕ್ರಮ ಚಟುವಟಿಕೆಗಳು, ನಡೆಸದಂತೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಾಕಷ್ಟು ಬಾರಿ ಚರ್ಚಿಸಿದ್ದೇನೆ. ಅನಾವಶ್ಯಕವಾಗಿ ಈ ಕುರಿತು ಮಾತನಾಡುವುದು ಸರಿಯಲ್ಲ ಈಗಾಗಲೇ ಅದರ ಕಡಿವಾಣಕ್ಕೆ ಸೂಚಿಸಿದ್ದೇನೆ ಎಂದರು. 28ರಂದು ನಗರಸಭೆ ಸಾಮಾನ್ಯ ಸಭೆ ನಡೆಯಲಿದೆ. ಅಂದು ಎಲ್ಲ ಸದಸ್ಯರು ಯಾವುದೇ ರಾಜಕೀಯ ತಾರತಮ್ಯ ಮಾಡದೆ  ಪಕ್ಷಾತೀತವಾಗಿ  ಬೇದ, ಬಾವ, ಮತ್ತು ವೈಯಕ್ತಿಕ ರಾಜಕೀಯ ದ್ವೇಷ ಇಟ್ಟುಕೊಳ್ಳದೆ ಸಭೆಗೆ ಬನ್ನಿ ಅಂದು, ಎಲ್ಲ ಕ್ರಿಯಾಯೋಜನೆಗಳನ್ನು ಓಮ್ಮತದಿಂದ, ಠರಾವು ಪಾಸ್ ಮಾಡಿ ಅಭಿವೃದ್ಧಿಗೆ ಮುಂದಾಗೋಣ ಎಂದು ಕರೆ ನೀಡಿದರು.     

         ಬರುವ ನವೆಂಬರ್ 1 ರಂದು ತಮ್ಮ ತಂದೆಯವರ ಹುಟ್ಟುಹಬ್ಬ ಇದೆ. ಅತ್ಯಂತ ಸರಳವಾಗಿ ಯಾವುದೇ ಆಡಂಬರವಿಲ್ಲದೇ ಆಚರಿಸಲು ನಿರ್ಧರಿಸಲಾಗಿದೆ. ಕೆ. ಬಿ. ಕೋಳಿವಾಡ ಅವರ ಜನ್ಮ ದಿನೋತ್ಸವದ ನಿಮಿತ್ತ ,ಪಿ.ಕೆ. ಕೆ. ಸಂಸ್ಥೆಯಿಂದ ಜನಸಾಮಾನ್ಯರ ಅನುಕೂಲತೆಗಾಗಿ  ಶ್ರದ್ಧಾಂಜಲಿ ವಾಹನ, ಅವರೇ ಜಾರಿಗೆ ತಂದಿರುವ ಕೆ ಬಿ ಕೋಳಿವಾಡ  ಚಾರಿಟೇಬಲ್ ಟ್ರಸ್ಟ್‌ ಹಸ್ತಾಂತರಿಸಲಾಗುವುದು ಎಂದರು.         ಪಿ.ಕೆ.ಕೆ ಸಂಸ್ಥೆಯಿಂದ ಕಳೆದ 5 ವರ್ಷಗಳಿಂದ ನಿರುದ್ಯೋಗ ಮುಕ್ತ ರಾಣೆಬೆನ್ನೂರು ತಾಲೂಕು ಮಾಡುವ ನಿರ್ಧಾರದಂತೆ ಮಾಡುವ ನಿರ್ಧಾರದಂತೆ ಉದ್ಯೋಗ ಮೇಳಗಳನ್ನು ಆಯೋಜಿಸುತ್ತ ಬಂದಿದ್ದೇವೆ.  

             ಈ ಬಾರಿ, ರಾಣೆಬೆನ್ನೂರು ನಗರದಲ್ಲಿ ಬೃಹತ್ ಉದ್ಯೋಗ ಮೇಳವನ್ನು ಸರಕಾರದ ಸಹಯೋಗದೊಂದಿಗೆ ಮಾಡಲು ಸಿದ್ಧತೆ ನಡೆಸಿದ್ದೇವೆ. ಅದು ಜಿಲ್ಲಾಮಟ್ಟದ ಉದ್ಯೋಗ ಮೇಳವಾಗಿದೆ. ನವೆಂಬರ್ 15ರಂದು ಮೇಳ ನಡೆಯಲಿದ್ದು, ನೂರಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಭಾಗವಹಿಸಲಿವೆ ಎಂದರು. ತಾಲೂಕಿನಲ್ಲಿ ಕಲಾ ನಾಲ್ಕು ಕೋಟಿ ರೂ ವೆಚ್ಚದಲ್ಲಿ, ಗ್ರಾಮೀಣ ಮಟ್ಟದಲ್ಲಿ ಶೈಕ್ಷಣಿಕ ಪ್ರಗತಿಗಾಗಿ ಸರ್ಕಾರ ಜಾರಿಗೆ ತಂದಿರುವ ಸಂಪೂರ್ಣ ಡಿಜಿಟಲೀಕರಣ ಕರ್ನಾಟಕ ಪಬ್ಲಿಕ್ ಶಾಲೆಗಳು ಪ್ರಾರಂಭವಾಗಲಿದೆ. ಹರನಗಿರಿ, ಹಿರೇಬಿದರಿ ಮತ್ತು ಇಟಿಗಿ ಗ್ರಾಮಾಂತರದಲ್ಲಿ ಪ್ರಾರಂಭಿಸಲಾಗುವುದು ಎಂದರು.      

      ಎಫ್ ಓ, ರೈತ ಉತ್ಪಾದಕ ಸಂಸ್ಥೆ ಆರಂಭಿಸಲಾಗುವುದು ಇದರಲ್ಲಿ ಸಾವಿರ ಸದಸ್ಯರು, ತಲಾ ಸಾವಿರ ರೂಗಳು ವಂತಿಗೆ ನೀಡುತ್ತಾರೆ ಅವರೇ ಸದಸ್ಯರು. ಪ್ರತಿ ರೈತರ ಅಭಿವೃದ್ಧಿಗಾಗಿ ಈ ಸಂಸ್ಥೆ ಕೆಲಸ ಮಾಡುತ್ತದೆ ಸದ್ಯ  ಕಾಕೋಳು, ಗಂಗಾಪುರ ಮತ್ತು ಹರನಗಿರಿ ರೈತರು ಕಾರ್ಯ ನಿರ್ವಹಿಸುತ್ತಾರೆ  ಎಂದು ಯೋಜನೆಯನ್ನು  ವಿವರಿಸಿದರು. ಮಾಧ್ಯಮದವರ ಹತ್ತು ಹಲವು ಪ್ರಶ್ನೆಗಳಿಗೆ ಮಾರ್ಮಿಕವಾಗಿ ಉತ್ತರಿಸಿದ, ಶಾಸಕ ಪ್ರಕಾಶ ಕೋಳಿವಾಡ ಅವರು, ಸಂವಿಧಾನದಲ್ಲಿ  ಮಹಾನ್ ನಾಯಕರ, ಸಂತರ, ಶರಣರ,, ಧಾರ್ಷನಿಕರ  ಯೋಧರ ಮತ್ತಿತರ ಸಾಧಕರ ವೃತ್ತಗಳು, ಮತ್ತು ಹಾಗೂ  ಮೂರ್ತಿಗಳನ್ನು ಅಳವಡಿಸಲು ತಮ್ಮದೇನು ಅಭ್ಯಂತರವಿಲ್ಲ. ಆದರೆ, ಅಂಬೇಡ್ಕರ್,ಬುದ್ದ, ಬಸವಣ್ಣ, ಚೆನ್ನಮ್ಮ, ರಾಯಣ್ಣ ಇತರರು ಒಂದು ಜಾತಿ ಮತ್ತು ಧರ್ಮಕ್ಕೆ ಸೀಮಿತವಾದವರಲ್ಲ. ಅವರನ್ನು ಒಂದು ಸಮುದಾಯಕ್ಕೆ ಮಾತ್ರ ಮೀಸಲಲ್ಲಾ ಅವರೆಲ್ಲ ವಿಶ್ವದ ದಾರ್ಶನಿಕರು. ಎನ್ನುವುದನ್ನು ನಾವೆಲ್ಲರೂ ಸೂಕ್ಷ್ಮತೆಯಿಂದ ಅರ್ಥಮಾಡಿಕೊಳ್ಳಬೇಕಾಗಿದೆ ಎಂದರು.       ನಗರೋತ್ತಾನ  ಯೋಜನೆ, ಈಗಾಗಲೇ ಜಾರಿಯಲ್ಲಿದ್ದು 19 ಕೋಟಿ ಹಣ ಅದಕ್ಕೆ ಮೀಸಲಾಗಿದೆ. ಕಾಮಗಾರಿ ವಿಳಂಬಕ್ಕೆ ಗುತ್ತಿಗೆದಾರನ, ನಿರ್ಲಕ್ಷತನ ಕಾರಣ. ಅದಕ್ಕಾಗಿ ಸಂಬಂಧಿಸಿದ ಮಂತ್ರಿಗಳೊಂದಿಗೆ ತಾವು ಮಾತನಾಡಿದ್ದು ಕೂಡಲೇ ಒಂದು ವರ್ಷದ ಅವಧಿಯಲ್ಲಿ ಕಾಮಗಾರಿ  ಮುಕ್ತಾಯ ಕಾಣಲಿದೆ ಎಂದರುಚಿ