ಅರಣ್ಯಾಧಿಕಾರಿ, ಸಿಬ್ಬಂದಿಯವರಿಗೆ ಗ್ರಾಮ್ಥರಿಂದ ಸನ್ಮಾನ: ಅರಣ್ಯಾಧಿಕಾರಿ ಕಾರ್ಯಾಲಯದಲ್ಲಿ ಧ್ವಜಾರೋಹಣ ಕಾರ್ಯಕ್ರಮ
Forest Officer and staff honored by the villagers: Flag hoisting ceremony at the Forest Officer's of
ನೇಸರಗಿ, 16 ; ಸಮೀಪದ ಕೆ.ಎನ್. ಮಲ್ಲಾಪೂರದ ವಲಯ ಅರಣ್ಯಾಧಿಕಾರಿ ಕಾರ್ಯಾಲಯದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ಧ್ವಜಾರೋಹಣವನ್ನು ನೆರವೇರಿಸಿದ ವಲಯ ಅರಣ್ಯಾಧಿಕಾರಿ ಪ್ರಸನ್ನ ಬೆಲ್ಲದ ಮಾತನಾಡಿ, ಇಂದಿನ ಯುವಕರು ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ನೀಡಬೇಕು. ಅವರ ಸ್ಮರಣೆಯನ್ನು ಸದಾ ಮಾಡಬೇಕೆಂದರು.
ದೇಶನೂರ ಅರಣ್ಯದಲ್ಲಿ ಅರಣ್ಯ ಇಲಾಖೆಯಿಂದ ಶ್ರೀ ಕರೆಮ್ಮಾದೇವಿ ದ್ವಾರ ಬಾಗಿಲು ನಿರ್ಮಾಣ ಕಾರ್ಯ ಮಾಡಿರುವದಕ್ಕಾಗಿ ವಲಯ ಅರಣ್ಯಾಧಿಕಾರಿ ಪ್ರಸನ್ನ ಬೆಲ್ಲದ ಹಾಗೂ ಸಿಬ್ಬಂದಿಯನ್ನು ದೇಶನೂರ ಗ್ರಾಮಸ್ಥರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ದೇಶನೂರ ಗ್ರಾ.ಪಂ ಮಾಜಿ ಅಧ್ಯಕ್ಷ ದೀಪಕ್‌ಗೌಡ ಪಾಟೀಲ, ತಾ,ಪಂ ಮಾಜಿ ಸದಸ್ಯ ಶ್ರೀಶೈಲ ಕಮತಗಿ, ಅಶೋಕ ಬಿಜಗತ್ತಿ, ವಿಶಾಲಗೌಡ ಪಾಟೀಲ, ಸದೆಪ್ಪ ಕೊತ್ತಲ, ಬಾಳಪ್ಪ ಪಾಟೀಲ, ಶ್ರೀಶೈಲ್ ಕೊತ್ತಲ, ಕಲ್ಲಪ್ಪ ಕೋಟಗಿ, ಮಡಿವಾಳಪ್ಪ ಉಪ್ಪಿನ, ಪ್ರಕಾಶ ಮುಂಗರವಾಡಿ, ಹಾಗೂ ದೇಶನೂರ ಗ್ರಾಮಸ್ಥರು ವಲಯ ಅರಣ್ಯ ಇಲಾಖೆ ಸಿಬ್ಬಂದಿ ಇದ್ದರು.
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ 