ಕೊಪ್ಪಳ ವಿಶ್ವವಿದ್ಯಾಲಯದ ವಾಣಿಜ್ಯ ಮುಖ್ಯ ಆವರಣದಲ್ಲಿ ಆಹಾರ ಮೇಳ ಕಾರ್ಯಕ್ರಮ
Food fair program at Koppal University's main commercial campus
ಕೊಪ್ಪಳ 02: ಕೊಪ್ಪಳ ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದಿಂದ ಗುರುವಾರ ಮುಖ್ಯ ಆವರಣದಲ್ಲಿ ಆಹಾರ ಮೇಳ ನಡೆಯಿತು. ಆಹಾರ ಮೇಳದಲ್ಲಿ ವಿದ್ಯಾರ್ಥಿಗಳು 15 ಅಂಗಡಿಗಳನ್ನು ತೆರದು ಆಕರ್ಷಕ ಹೆಸರುಗಳನ್ನು ಇಟ್ಟು ರುಚಿ ಮತ್ತು ಶುಚಿಯಾದ ತಿಂಡಿ ತಿನಿಸುಗಳನ್ನು ತಯಾರು ಮಾಡಿ ಮಾರಾಟ ಮಾಡಿದರು. ಅಕ್ಕಿರೊಟ್ಟಿ, ರಾಗಿರೊಟ್ಟಿ, ಜೋಳದ ರೊಟ್ಟಿ, ಎಣ್ಣೆಗಾಯಿ, ವೆಜ್ ಬಿರಿಯಾನಿ, ವೆಜ್ ಕಬಾಬ್, ಒತ್ತು ಶಾವಿಗೆ, ವಿವಿಧ ಬಗೆಯ ಕಾಯಿ, ಕಡ್ಲೆ ಬೀಜ, ಬೇಳೆ ಒಬ್ಬಟ್ಟು, ರೆವೆ ಉಂಡೆ, ಗುಲಾಬ್ ಜಾಮೂನ್, ಟಿ-ಕಾಫಿ, ಮಜ್ಜಿಗೆ, ಪಾನಕ, ವಿವಿಧ ಬಗೆಯ ಹಣ್ಣಿನ ಜ್ಯೂಸ್ಗಳನ್ನು ಸ್ಥಳದಲ್ಲಿಯೇ ತಯಾರಿಸಿ ಸ್ಪರ್ಧಾತ್ಮಕ ಬೆಲೆಯಲ್ಲಿ ಮಾರಾಟ ಮಾಡಲಾಯಿತು.
ವಾಣಿಜ್ಯ ವಿಭಾಗದ ಉಪನ್ಯಾಸಕರಾದ ಅಲ್ತಾಪ್ ಹುಸೇನ್ ಮಾತನಾಡಿ, ಯುವ ಸಮೂಹ ಸರ್ಕಾರಿ ಕೆಲಸಕ್ಕಾಗಿ ಕಾಯದೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಹಾಗೂ ವಿರ್ದ್ಯಾರ್ಥಿಗಳಿಗೆ ಮಾರುಕಟ್ಟೆ ನಿರ್ವಹಣೆ, ನಾಯಕತ್ವ ಗುಣ, ಗುಂಪಿನಲ್ಲಿ ಕಾರ್ಯಾಚರಣೆ, ಹಣಕಾಸು ನಿರ್ವಹಣೆ, ವ್ಯವಹಾರ ಅನುಭವ, ಓದ್ಯೋಗಿಕ ಕೌಶಲ, ಪಾಲುದಾರಿಕೆ, ಕೊಳ್ಳುವಿಕೆ-ಮಾರುವಿಕೆ, ಲಾಭ-ನಷ್ಟ ಅಂಶಗಳನ್ನು ಕಲಿಸುವ ಪ್ರಾಥಮಿಕ ಉದ್ದೇಶದಿಂದ ಆಹಾರ ಮೇಳ ಆಯೋಜಿಸಲಾಗಿದೆ ಎಂದರು.ವಿದ್ಯಾರ್ಥಿಗಳು, ಉಪನ್ಯಾಸಕರು ಸೇರಿದಂತೆ ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 