ಜಗಜ್ಯೋತಿ ಬಸವಣ್ಣನವರ ಜಯಂತಿಯನ್ನು ಅವರ ಭಾವಚಿತ್ರಕ್ಕೆ ಪುಷ್ಪಚರಣೆ

ಜಗಜ್ಯೋತಿ ಬಸವಣ್ಣನವರ ಜಯಂತಿಯನ್ನು ಅವರ ಭಾವಚಿತ್ರಕ್ಕೆ ಪುಷ್ಪಚರಣೆ Floral tributes to Jagajyoti Basavanna's portrait on his birth anniversary

ಹಾವೇರಿ 21 : ತಾಲೂಕೀನ ನೆಲೋಗಲ್ ಗ್ರಾಮದ ನೂತನವಾಗಿ ನಿರ್ಮಾಣವಾದ ಸರಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ ಜಗಜ್ಯೋತಿ ಬಸವಣ್ಣನವರ ಜಯಂತಿಯನ್ನು ಅವರ ಭಾವಚಿತ್ರಕ್ಕೆ ಪುಷ್ಪಚರಣೆ ಮಾಡುವುದರ ಮೂಲಕ ಆಚರಣೆ ಮಾಡಲಾಯಿತು.ಕಾಲೇಜಿನ ಆಡಳಿತ ಅಧಿಕಾರಿ ಬಿರೇಶ ಎನ್ ನೆಟಗಲ್ಲಣ್ಣನವರ  ಬಸವಣ್ಣನವರ ಸಮಾಜದ ಅಕುಂಡೊಂಕುಗಳಾದ ಅಸ್ಪುಶ್ಯತೆ ಅಸಾಮಾನತೆಯ ಜಾತಿ ವ್ಯವಸ್ಥೆ ಅಂದಭಕ್ತಿ ಅನಿಷ್ಟ ಪದ್ದತಿಗಳು ಹೋಗಲಾಡಿಸಲು ವಚನ ಸಾಹಿತ್ಯದ ಮೂಲಕ ತಿದ್ದಿ ಸುಧಾರಣೆ ತಂದು ಕೊಡುವಲ್ಲಿ ಬಸವಣ್ಣನವರು ವಿಶ್ವ ಗುರುಗಳಾಗಿದ್ದಾರೆ ಎಂದು ಮಾತನಾಡಿದರು.

ಕಾಯಕವೆ ಕೈಲಾಸ ದಯವೆ ಧರ್ಮದ ಮೂಲ ಎಂದು ಮನಕೂಲಕ್ಕೆ ಮಹಾ ಸಂದೇಶವನ್ನು ಸಾರಿದರು ಬಸವಣ್ಣನವರು ಸಮಾನತೆಗಾಗಿ ಶ್ರಮಿಸಿದರು ಎಂದು ಅವರ ಜೀವನ ಚರಿತ್ರೆ ಆದರ್ಶ ತತ್ವಗಳ ಕುರಿತು ಮಾತನಾಡಿದರು.ಈ ಸಂಧರ್ಭದಲ್ಲಿ ಕಾಲೇಜಿನ ಪ್ರಾನಶುಪಾಲಾರದ್ ಅಶ್ವಿನ್ ಕುಮಾರ್ ಸೋಮಣ್ಣನವರ, ಉಪನ್ಯಾಸಕರುಗಳಾದ ಸದಾನಂದ ಎಚ್, ಮಾಲತೇಶ್ ಎಸ್ ಎಚ್, ಸಂಗಮೇಶ್ ಜಮಖಂಡಿ, ಚೈತ್ರಾ ಸಿ ಸಿ, ಹಾಗೂ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.