ಬ್ರಿಟನ್ ವೋಲ್ವರ್ ಹ್ಯಾಂಪ್ಟನ್ ವಿಶ್ವವಿದ್ಯಾಲಯ ಅಧ್ಯಯನ ಪ್ರವಾಸಕ್ಕೆ ಮಹಿಳಾ ವಿವಿಯ ಐವರು ವಿದ್ಯಾರ್ಥಿನಿಯರ ಆಯ್ಕೆ

ಬ್ರಿಟನ್ ವೋಲ್ವರ್ ಹ್ಯಾಂಪ್ಟನ್ ವಿಶ್ವವಿದ್ಯಾಲಯ ಅಧ್ಯಯನ ಪ್ರವಾಸಕ್ಕೆ ಮಹಿಳಾ ವಿವಿಯ ಐವರು ವಿದ್ಯಾರ್ಥಿನಿಯರ ಆಯ್ಕೆ Five women's university students selected for study tour to Wolverhampton University, UK

ಲೋಕದರ್ಶನ ವರದಿ 

ವಿಜಯಪುರ 25: ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿ ಕರ್ನಾಟಕ ಸರ್ಕಾರ ಹಾಗೂ ಬ್ರಿಟಿಷ್ ಕೌನ್ಸಿಲ್ ಸಹಯೋಗದಲ್ಲಿ ಆಯೋಜಿಸಿರುವ ಸ್ಕಾಲರ್ಸ್‌ ಫಾರ್ ಓಟ್ ಸ್ಟ್ಯಾಂಡಿಂಗ್ ಅಂಡರ್ ಗ್ರ್ಯಾಜುಯೇಟ್ ಟ್ಯಾಲೆಂಟ್ ಮತ್ತು ಕ್ಲೈಮೇಟ್ ರೆಸಿಲೆಯನ್ಸ್‌ ಸೀಟೀಸ್, ಲೀಡರಶಿಪ್ ಹಾಗೂ ಇಕ್ಟಿಟಿ ಕಾರ್ಯಕ್ರಮಗಳ ಅಂಗವಾಗಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಐವರು ವಿದ್ಯಾರ್ಥಿನಿಯರು ಹಾಗೂ ಒಬ್ಬ ನೋಡಲ್ ಅಧಿಕಾರಿ ಇಂಗ್ಲೆಂಡ್ನ ವೋಲ್ವಹ್ಯಾಂರ​‍್್ಟನ್ ವಿಶ್ವವಿದ್ಯಾಲಯಕ್ಕೆ ಶೈಕ್ಷಣಿಕ ಅಧ್ಯಯನ ಪ್ರವಾಸಕ್ಕಾಗಿ ಆಯ್ಕೆಯಾಗಿದ್ದಾರೆ. 

ಜೂನ್ 27ರಿಂದ ಜುಲೈ 11ರವರೆಗೆ ನಡೆಯಲಿರುವ ಈ ಪ್ರತಿಷ್ಠಿತ ಅಂತರರಾಷ್ಟ್ರೀಯ ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಹಿಂದಿ ವಿಭಾಗದ ಮುಖ್ಯಸ್ಥೆ ಹಾಗೂ ಕಲಾ ನಿಕಾಯದ ಡೀನ್ ಪ್ರೊ.ರಾಜು ಬಾಗಲಕೋಟ ಅವರು ನೋಡಲ್ ಅಧಿಕಾರಿಯಾಗಿ ಪಾಲ್ಗೊಳ್ಳಲಿದ್ದಾರೆ. ವಿದ್ಯಾರ್ಥಿನಿಯರಾದ ಕಲ್ಪನಾ ರಾಠೋಡ್, ಅಶ್ವಿನಿ ಕಾಳೇಕರ್, ಐಶ್ವರ್ಯ ಪಾಟೀಲ, ಶಾಹೀನ್ ಬಿರಾದಾರ ಹಾಗೂ ಅಕ್ಷತಾ ಕುಲಕರ್ಣಿ ಅವರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಲಿದ್ದಾರೆ. 

ಈ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿನಿಯರಿಗೆ ಅಂತರರಾಷ್ಟ್ರೀಯ ಶೈಕ್ಷಣಿಕ ವಾತಾವರಣ, ನಾಯಕತ್ವ ಕೌಶಲ್ಯ, ಹವಾಮಾನ ಸ್ಥೈರ್ಯ, ನಗರಾಭಿವೃದ್ಧಿ, ಸಮಾನತೆ ಹಾಗೂ ಜಾಗತಿಕ ಸವಾಲುಗಳ ಕುರಿತು ನೇರ ಅನುಭವ ಮತ್ತು ಅರಿವು ಪಡೆಯುವ ಅವಕಾಶ ದೊರೆಯಲಿದೆ. ವಿದೇಶಿ ವಿಶ್ವವಿದ್ಯಾಲಯಗಳೊಂದಿಗೆ ಸಂವಾದ, ಅಧ್ಯಯನ ಮತ್ತು ಅನುಭವಗಳ ವಿನಿಮಯದ ಮೂಲಕ ಅವರಲ್ಲಿ ಸಂಶೋಧನಾ ಮನೋಭಾವ, ನವೀನ ಚಿಂತನೆ ಹಾಗೂ ಜಾಗತಿಕ ದೃಷ್ಟಿಕೋನ ವೃದ್ಧಿಯಾಗಲಿದೆ. 

ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ ಅವರು ಸಂತಸ ವ್ಯಕ್ತಪಡಿಸಿ, “ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರು ಇಂತಹ ಪ್ರತಿಷ್ಠಿತ ಅಂತರರಾಷ್ಟ್ರೀಯ ಕಾರ್ಯಕ್ರಮಕ್ಕೆ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿಯಾಗಿದೆ. ಈ ಅವಕಾಶವನ್ನು ವಿದ್ಯಾರ್ಥಿನಿಯರು ಸದುಪಯೋಗಪಡಿಸಿಕೊಂಡು ಶೈಕ್ಷಣಿಕ ಮತ್ತು ವೈಯಕ್ತಿಕ ಬೆಳವಣಿಗೆಯಲ್ಲಿ ಹೊಸ ಸಾಧನೆಗಳನ್ನು ಮಾಡಲಿದ್ದಾರೆ. ಅವರು ಗಳಿಸುವ ಅನುಭವಗಳು ಇತರ ವಿದ್ಯಾರ್ಥಿನಿಯರಿಗೂ ಪ್ರೇರಣೆಯಾಗಲಿವೆ” ಎಂದು ತಿಳಿಸಿದ್ದಾರೆ.