ಶಿರಗುಪ್ಪಿಯಲ್ಲಿ ಕಬ್ಬಿನ ಹೊಲಕ್ಕೆ ಬೆಂಕಿ..! ಅಪಾರ ಪ್ರಮಾಣದ ಹಾನಿ..!!
Fire in a sugarcane field at Shiraguppi! Massive damage!
ಲೋಕದರ್ಶನ ವರದಿ
ಕಾಗವಾಡ: ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಬೆಳೆದು ನಿಂತ ಕಬ್ಬಿನ ಹೊಲಕ್ಕೆ ಬೆಂಕಿ ತಗುಲಿ ಸುಮಾರು 9 ಎಕರೆಗಿಂತಲೂ ಹೆಚ್ಚಿನ ಬೆಳೆದ ಕಬ್ಬು ಸುಟ್ಟು ಭಸ್ಮವಾದ ಘಟನೆ ಮಂಗಳವಾರ ದಿ. 01 ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಸಂಭವಿಸಿದೆ. ಈ ಘಟನೆಯಿಂದ ಶಿರಗುಪ್ಪಿ ಗ್ರಾಮದ ಸರ್ವೆ ನಂ. 01 ಮತ್ತು 06 ರಲ್ಲಿಯ ಶಿವಾನಂದ ಪಾಟೀಲ, ಸುಶೀಲಾಬಾಯಿ ಪಾಟೀಲ, ಸದಾನಂದ ಪಾಟೀಲ, ಈರಗೌಡಾ ಪಾಟೀಲ, ಶೇಖರ ಪಾಟೀಲ ಮತ್ತು ಸಮರ್ಥ ಪಾಟೀಲ ಇವರ ಮಾಲಿಕತ್ವದ 9 ಎಕರೆ ಕಬ್ಬು ಸಂಪೂರ್ಣ ಸುಟ್ಟು ಹೋಗಿದೆ. ಗ್ರಾಮದ ಬಳಿ ಇರುವ ಈ ಜಮೀನುಗಳಲ್ಲಿ ವಿದ್ಯುತ್ ತಂತಿ ನೇತಾಡುತ್ತಿದ್ದು,
ಈ ಕುರಿತು ಹೆಸ್ಕಾಂ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಈಗ ಅದೇ ತಂತಿಗೆ ವಿದ್ಯುತ್ ಶಾರ್ಟ ಸರ್ಕ್ಯೂಟ್ನಿಂದ ಬೆಳೆದು ನಿಂತ ನಮ್ಮ ಕಬ್ಬು ಮತ್ತು ಹನಿ ನೀರಾವರಿಯ ಪೈಪ್ಗಳು ಹೀಗೆ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ ಎಂದು ರೈತ ಈರಗೌಡಾ ಪಾಟೀಲ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಉಗಾರ ಸಕ್ಕರೆ ಕಾರ್ಖಾನೆ ಮತ್ತು ಚಿಕ್ಕೋಡಿ ಸಿಬಿಕೆಎಸ್ಎಸ್ ಕಾರ್ಖಾನೆಯ ಅಗ್ನಿಶಾಮಕ ದಳಗಳು ಬೆಂಕಿಯನ್ನು ನಂದಿಸಲು ಶ್ರಮಿಸಿ, ನಿಯಂತ್ರಣಕ್ಕೆ ತಂದಿವೆ. ಸದ್ಯ ಯಾವುದೇ ಕಾರ್ಖಾನೆಗಳ ಕಬ್ಬು ನುರಿಸುವ ಹಂಗಾಮು ಪ್ರಾರಂಭವಿಲ್ಲದ ಕಾರಣ ಈ ಸುಟ್ಟ ಕಬ್ಬುನ್ನು ಎಲ್ಲಿಗೆ ಸಾಗಿಸಿವುದು ಎಂಬುದೇ ರೈತರಿಗೆ ದೊಡ್ಡ ಪ್ರಶ್ನೆಯಾಗಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 