ಥ್ರಿಲ್ಲರ್, ಹಾರರ್, ದೈವಭಕ್ತಿಯ ‘ಕೊಹಿನೂರು’ ಚಿತ್ರೀಕರಣ ಆರಂಭ
Filming begins for thriller, horror, devotional 'Kohinoor'
ಲೋಕದರ್ಶನ ವರದಿ
ಬೆಂಗಳೂರು: ಎಸ್ ಪಿ ಜಿ ಸಿನಿಮಾಸ್ ಅವರ ‘ಕೊಹಿನೂರು’ ಚಿತ್ರದ ಅಡಿ ಬರಹ ‘ದ ಮಿರಾಕಲ್ ಡೈಮಂಡ್’ ಎಂಬ ಕನ್ನಡ ಚಲನಚಿತ್ರದ ಮುಹೂರ್ತ ಸಮಾರಂಭವು ಹಾರೋಹಳ್ಳಿಯ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಥ್ರಿಲ್ಲರ್, ಹಾರರ್,ದೈವಭಕ್ತಿ ಮತ್ತು ಶಕ್ತಿಯನ್ನು ಒಳಗೊಂಡಿರುವ ಚಿತ್ರಕ್ಕೆ ಪ್ರಿಯದರ್ಶನ, ಸಂತೋಷ್ ಕ್ಯಾಮರಾಗುಂಡಿ ಒತ್ತುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರೆ, ಭಾನುಮತಿ ಗಜೇಂದ್ರ ಕ್ಲಾಪ್ ಮಾಡಿದರು. ಮುಹೂರ್ತಕ್ಕೆ ಆಗಮಿಸಿದ ಗಣ್ಯರು ಚಿತ್ರ ತಂಡಕ್ಕೆ ಶುಭ ಕೋರಿದರು. ಚಿತ್ರದಲ್ಲಿ ಒಟ್ಟು ಐದು ಹಾಡುಗಳು, ನಾಲ್ಕು ಸಾಹಸ ದೃಶ್ಯಾವಳಿಗಳಿವೆ. ಈಗ ಸತತ ಚಿತ್ರೀಕರಣ ನಡೆಸುತ್ತಿದ್ದು ಒಂದೇ ಹಂತದಲ್ಲಿ ಚಿತ್ರೀಕರಣವನ್ನು ಮುಗಿಸುವ ಯೋಜನೆಯನ್ನು ಹಾಕಿದ್ದೇವೆ.ಈ ಕಥೆಯನ್ನು ಚಿತ್ರಮಂದಿರದಲ್ಲೇ ಪ್ರೇಕ್ಷಕರು ನೋಡಬೇಕು ಎನ್ನುವ ಉದ್ದೇಶದಿಂದ ಇಲ್ಲಿ ಅದರ ಸಾರ ಹೇಳುತ್ತಿಲ್ಲ ಸಧ್ಯ ಹಾರೋಹಳ್ಳಿಯ ಸುತ್ತಮುತ್ತ ಚಿತ್ರೀಕರಣ ನಡೆಸಿದ್ದೇವೆ ಎಂದು ನಿರ್ದೇಶಕರಾದ ಕೆ ಸುರೇಶ್ ಗೋಸ್ವಾಮಿ ಹೇಳಿದರು.
ತಾರಾಗಣದಲ್ಲಿ ಭಾವನ, ರುದ್ರಾಕ್ಷ , ಜೀವನ್, ಹಿಮ, ನವೀನ್, ತನು, ಪ್ರಸಾದ್,ಸುನಿಲ್ ಕುಮಾರ್, ಶ್ರೀಕಾಂತ್,ವಿನಯ್, ಇ ಎಸ್. ರವಿ, ಮಾದೇಗೌಡ, ತ್ಯಾಗ ಮೊದಲಾದವರು ಅಭಿನಯಿಸುತ್ತಿದ್ದು , ಕ್ಯಾಮೆರಾ ರಾಜ ಶಿವಶಂಕರ್, ಈ ಚಿತ್ರದ ಚಿತ್ರದ ಕಥೆ ಬರೆಯುವದರೊಂದಿಗೆ ರಾಜಂ ಅರ್. ಇ ಗಜೇಂದ್ರ ಅವರು ನಿರ್ಮಾಪಕರೂ ಆಗಿದ್ದಾರೆ. ಸಾಹಸ ನಿರ್ದೇಶನ ಸುಪ್ರೀಂ ಸುಬ್ಬು, ಸಂಗೀತ ದಿವಾಕರ್, ಸಂಕಲನ ದುರ್ಗಾ ಪ್ರಸಾದ್, ಪತ್ರಿಕಾ ಸಂಪರ್ಕ ಕಾರ್ತಿಕ ಸುಧನ್ , ಡಾ. ಪ್ರಭು ಗಂಜಿಹಾಳ, ಡಾ. ವೀರೇಶ ಹಂಡಿಗಿ, ಸುರೇಶ, ಧೀರನ್ ,ಆನಂದ್, ಹರಿಹರನ್ ಬಿ.ಪಿ ಸಹನಿರ್ದೇಶಕರಾಗಿದ್ದು, ಸಹ ನಿರ್ಮಾಪಕರಾಗಿ ಪ್ರಿಯಾ ದರ್ಶನ ರವರು ಬಂಡವಾಳ ಹೂಡಿದ್ದಾರೆ. ಚಿತ್ರವನ್ನು ಆದಷ್ಟು ಬೇಗ ತೆರೆಗೆ ತರುವದಾಗಿ ನಿರ್ಮಾಪಕರು ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 