ಇಂದು ಕೊಪ್ಪಳಕ್ಕೆ ಚಲನಚಿತ್ರ ನಟ ಪ್ರಕಾಶ್ ರಾಜ್ ಆಗಮನ

ಇಂದು ಕೊಪ್ಪಳಕ್ಕೆ ಚಲನಚಿತ್ರ ನಟ ಪ್ರಕಾಶ್ ರಾಜ್ ಆಗಮನ Film actor Prakash Raj arrived in Koppal today


 ಕೊಪ್ಪಳ  23:  29 ರ ವರೆಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಧ್ಯಯನ ಹಾಗೂ ಪ್ರತಿರೋಧ ಪ್ರವಾಸ * ಖ್ಯಾತ ನಟ ಪ್ರಕಾಶ್ ರಾಜ್ ಸೇರಿದಂತೆ ಸಾಹಿತಿಗಳು, ಬುದ್ಧಿಜೀವಿಗಳ ಸಾಥ್ * ಆಯ್ದ 100 ಮತಗಟ್ಟೆಗಳಲ್ಲಿ ‘ನಾಗರಿಕ ಮತ ಕಾವಲು ಸಮಿತಿ’ಗಳಿಂದ ಪರಿಶೋಧನೆ * ಸೆಪ್ಟೆಂಬರ್ 30ಕ್ಕೆ ಬೆಂಗಳೂರಿನಲ್ಲಿ ‘ನಾಗರಿಕ ವರದಿ ಮತ್ತು ಒತ್ತಾಯ’ ಬಿಡುಗಡೆ ಮಾಡಲಿದ್ದಾರೆ,ದಿನಾಂಕ್ 24ರ ಗುರುವಾರ ಬೆಳಿಗ್ಗೆ 10:30 ಗಂಟೆಗೆ ನಗರದ ಮುಸ್ಲಿಂ ಶಾದಿ ಮಹಲ್ (ಸುನ್ನಿ) ಸಭಾ ಭವನ ದಲ್ಲಿ ಬಹಿರಂಗ ಸಭೆ ಏರಿ​‍್ಡಸಲಾಗಿದ್ದು ಸದರಿ ಸಭೆಯಲ್ಲಿ ಚಲನಚಿತ್ರ ನಟ ಚಿಂತಕ ಹೋರಾಟಗಾರ ಪ್ರಕಾಶ್ ರಾಜ್ ಕೊಪ್ಪಳಕ್ಕೆ ಆಗಮಿಸಿ ಬಹಿರಂಗ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ, ರಾಜ್ಯದಲ್ಲಿ ಎಸ್‌ಐಆರ್ (ವಿಶೇಷ ತೀವ್ರ ಪರಿಷ್ಕರಣೆ) ಪ್ರಕ್ರಿಯೆಯು ನೀರೀಕ್ಷೆಗೂ ಮೀರಿದ ಅನಾಹುತವನ್ನು ಸೃಷ್ಟಿಸಿದ್ದು, ಅರ್ಹ ಮತದಾರರ ಪ್ರಜಾತಾಂತ್ರಿಕ ಹಕ್ಕನ್ನು ಕಸಿಯುತ್ತಿದೆ ಎಂದು ಆರೋಪಿಸಿ,  

‘ಎಸ್‌ಐಆರ್ ವಿರೋಧಿ ಜನಪರ ಸಂಘಟನೆಗಳ ಹಾಗೂ ಜಾತ್ಯತೀತ ಪಕ್ಷಗಳ ಒಕ್ಕೂಟ’ವು ಸೆಪ್ಟೆಂಬರ್ 22 ರಿಂದ 29ರವರೆಗೆ ರಾಜ್ಯವ್ಯಾಪಿ "ಎಸ್‌ಐಆರ್ ಪರಿಶೋಧನೆ ಹಾಗೂ ಪ್ರತಿರೋಧ ಪ್ರವಾಸ" ಹಮ್ಮಿಕೊಂಡಿದೆ.ಅನರ್ಹಗೊಳಿಸುವಿಕೆ ಮತ್ತು ಅವ್ಯವಸ್ಥೆಯ ಆರೋಪ:ಎಸ್‌ಐಆರ್ ಪ್ರಕ್ರಿಯೆಯು ಅವೈಜ್ಞಾನಿಕ ಹಾಗೂ ಅಸಂವಿಧಾನಿಕವಾಗಿದ್ದು, ಮತದಾರರ ಪಟ್ಟಿಯಿಂದ ಈಗಾಗಲೇ ಲಕ್ಷಾಂತರ ಜನರನ್ನು ತೆಗೆದುಹಾಕಲಾಗಿದೆ ಹಾಗೂ ಸುಮಾರು 43 ಲಕ್ಷ ಮತದಾರರನ್ನು ’ಅನುಮಾನಾಸ್ಪದ’ ಎಂದು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಒಕ್ಕೂಟ ಆತಂಕ ವ್ಯಕ್ತಪಡಿಸಿದೆ.  

ಈ ಅಕ್ರಮಗಳು ಹಾಗೂ ಅನಾಹುತದ ವಾಸ್ತವಿಕ ಆಳ-ಅಗಲವನ್ನು ಪರೀಶೀಲಿಸಲು, ರಾಜ್ಯದ ಆಯ್ದ 100 ಬೂತ್‌ಗಳಲ್ಲಿ ‘ನಾಗರಿಕ ಮತ ಕಾವಲು ಸಮಿತಿ’ಗಳ ಮೂಲಕ ಮತ ಪರಿಶೋಧನಾ ಕಾರ್ಯ ನಡೆಸಲಾಗುತ್ತಿದೆ.ಮುಂಡಗೋಡಿನಿಂದ ಪ್ರತಿರೋಧ ಯಾತ್ರೆ ಆರಂಭ:ಸಂತ್ರಸ್ತರನ್ನು ನೇರವಾಗಿ ಭೇಟಿಯಾಗಿ ವಸ್ತುಸ್ಥಿತಿಯನ್ನು ಅರಿಯಲು ಮತ್ತು ಅಕ್ರಮಗಳ ಸಾಕ್ಷ್ಯಗಳನ್ನು ಒಟ್ಟುಗೂಡಿಸಲು ಈ ಪ್ರವಾಸ ಆಯೋಜಿಸಲಾಗಿದೆ. ಖ್ಯಾತ ನಟ ಪ್ರಕಾಶ್ ರಾಜ್, ಪ್ರಮುಖ ಸಾಹಿತಿಗಳು, ಚಿಂತಕರು ಹಾಗೂ ಹೋರಾಟಗಾರರು ಇದರಲ್ಲಿ ಭಾಗವಹಿಸಲಿದ್ದಾರೆ.ಈ ಪ್ರವಾಸವು ಸೆಪ್ಟೆಂಬರ್ 22ರಂದು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಿಂದ ಆರಂಭವಾಗಲಿದ್ದು, ಹುಬ್ಬಳ್ಳಿ, ವಿಜಯಪುರ, ಕಲಬುರಗಿ, ಯಾದಗಿರಿ, ರಾಯಚೂರು, ಬಳ್ಳಾರಿ,

ಕೊಪ್ಪಳ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಹಾಸನ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೊಡಗು, ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಸಂಚರಿಸಲಿದೆ.ಸೆಪ್ಟೆಂಬರ್ 30ರಂದು ಸರ್ಕಾರಕ್ಕೆ ವರದಿ ಸಲ್ಲಿಕೆ:ಪ್ರವಾಸ ಹಾಗೂ 100 ಬೂತ್‌ಗಳ ಪರಿಶೋಧನೆಯಿಂದ ಲಭ್ಯವಾದ ಮಾಹಿತಿಯನ್ನು ಆಧರಿಸಿ, ಸೆಪ್ಟೆಂಬರ್ 30ರಂದು ಬೆಂಗಳೂರಿನಲ್ಲಿ "ನಾಗರಿಕ ವರದಿ"ಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಲಾಗುವುದು. ಅಲ್ಲದೆ, ಮತದಾರರ ಮೂಲಭೂತ ಹಕ್ಕುಗಳ ರಕ್ಷಣೆಗೆ ಸರ್ಕಾರ ಕೈಗೊಳ್ಳಬೇಕಾದ ತುರ್ತು ಕ್ರಮಗಳ ಕುರಿತು "ನಾಗರಿಕ ಒತ್ತಾಯ"ವನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಒಕ್ಕೂಟ ತಿಳಿಸಿದೆ.ಪ್ರಜ್ಞಾವಂತ ನಾಗರಿಕರು ಈ ಆಂದೋಲನದಲ್ಲಿ ಕೈಜೋಡಿಸುವಂತೆ ಒಕ್ಕೂಟದ ಪ್ರಮುಖರಾದ ಜೆ.ಎಂ. ವೀರಸಂಗಯ್ಯ, ಬಿ.ಟಿ. ಲಲಿತಾ ನಾಯ್ಕ್‌, ಕೆ.ಎಲ್‌. ಅಶೋಕ್, ಯೂಸೂಫ್ ಕನ್ನಿ, ಕೆ. ಮಹಂತೇಶ್ ಸೇರಿದಂತೆ ಹಲವರು ಮನವಿ ಮಾಡಿದ್ದಾರೆ.