ಶಿವನೂರಿನಲ್ಲಿ ಮಾಯು ಗುಬ್ಬಾಯಿ ದೇವಿಯ ಜಾತ್ರೆ ಸಂಭ್ರಮ

ಶಿವನೂರಿನಲ್ಲಿ ಮಾಯು ಗುಬ್ಬಾಯಿ ದೇವಿಯ ಜಾತ್ರೆ ಸಂಭ್ರಮ Festivities of Goddess Mayu Gubbayi at Shivanuru

ಸಂಬರಗಿ04 : ಗ್ರಾಮದಲ್ಲಿ ರೋಗರು ಜಿನಗಳು ದೂರವಾಗಿ, ಉತ್ತಮ ಮಳೆಯಾಗಿ, ಜನರು ಸುಖ-ಶಾಂತಿಯಿಂದ ಬದುಕಲಿ ಎಂಬ ಸಂಕಲ್ಪದೊಂದಿಗೆ ಶಿವನೂರಿನಲ್ಲಿ ಮಾಯುಗುಬ್ಬಾಯಿ ದೇವಿಯ ವಾರ್ಷಿಕ ಜಾತ್ರೆಯನ್ನು ಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.  

ಜಾತ್ರೆಯ ಅಂಗವಾಗಿ ದೇವಿಯ ಬಂಡಿಗೆ ಅರ್ಚಕ ಗೌಡಪ್ಪ ಅವರು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ನೂರಾರು ಮಹಿಳೆಯರ ಸಮ್ಮುಖದಲ್ಲಿ ದೇವಿಗೆ ನೈವೇದ್ಯ ಅರ​‍್ಿಸಿ, ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ವಿಶೇಷ ಪೂಜೆಯ ನಂತರ ಸಂಪ್ರದಾಯದಂತೆ ದೇವಿಯ ಬಂಡಿಯನ್ನು ಗ್ರಾಮದ ಗಡಿ ಹೊರಗೆ ಕೊಂಡೊಯ್ದು ಬಿಡಲಾಯಿತು.  ದೇವಿಯ ದರ್ಶನಕ್ಕಾಗಿ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಭಕ್ತರು ಬೆಳಗ್ಗೆಯಿಂದ ಸಂಜೆವರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪೂಜೆ ಸಲ್ಲಿಸಿದರು.  

ಜಾತ್ರೆಗೆ ಮುನ್ನ ಮಂಗಳವಾರದಿಂದ ಶುಕ್ರವಾರದವರೆಗೆ ಐದು ದಿನಗಳ ಕಾಲ ಗ್ರಾಮದಲ್ಲಿ ಉಪವಾಸ ಹಾಗೂ ವಿಶೇಷ ಆಚರಣೆಗಳನ್ನು ಪಾಲಿಸಲಾಯಿತು. ಈ ಅವಧಿಯಲ್ಲಿ ಗ್ರಾಮದಲ್ಲಿ ವಾಹನ ಸಂಚಾರ ಹಾಗೂ ಕೆಲವು ದೈನಂದಿನ ಚಟುವಟಿಕೆಗಳಿಗೆ ಸಂಪ್ರದಾಯಬದ್ಧ ನಿರ್ಬಂಧಗಳನ್ನು ವಿಧಿಸಲಾಗಿತ್ತು. ಐದನೇ ದಿನವಾದ ಮಂಗಳವಾರ ದೇವಿಯ ಜಾತ್ರೆಯ ಸಮಾರೋಪದ ಅಂಗವಾಗಿ ಬಂಡಿ ಬಿಡುವ ಸಂಪ್ರದಾಯವನ್ನು ನೆರವೇರಿಸಲಾಯಿತು.