೪೦ ವರ್ಷಗಳ ಅಂಚೆ ಸೇವೆ ಸಲ್ಲಿಸಿದ ನಿವೃತ್ತ ಅಂಚೆ ನೌಕರರಿಗೆ ಸನ್ಮಾನ
Felicitation of retired postal employees who served for 40 years.
ಸವಣೂರು, ಜು. ೩: ರಾಷ್ಟ್ರೀಯ ಅಂಚೆ ನೌಕರರ ದಿನಾಚರಣೆಯ ಅಂಗವಾಗಿ ಅಧ್ಯಾಪಕ ನಗರದ ನಿವೃತ್ತ ಅಂಚೆ ನೌಕರ ಚಂದ್ರಶೇಖರ ಪೂಜಾರ ಅವರ ೪೦ ವರ್ಷಗಳ ಸೇವೆಯನ್ನು ಸ್ಮರಿಸಿ ಕಲ್ಪವೃಕ್ಷ ಮಹಿಳಾ ಮಂಡಳಿಯಿAದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಂಡಳಿಯ ಸದಸ್ಯರು ಚಂದ್ರಶೇಖರ ಪೂಜಾರ ದಂಪತಿಗೆ ಶಾಲು ಹೊದಿಸಿ, ಫಲಕ ನೀಡಿ ಗೌರವಿಸಿದರು.
ಮಂಡಳಿಯ ಅಧ್ಯಕ್ಷೆ ಮಂಜುಳಾ ಶಿವಲಿಂಗಯ್ಯ ಮಾತನಾಡಿ, ಅಂಚೆ ಇಲಾಖೆ ದೇಶದ ಅತ್ಯಂತ ವಿಶ್ವಾಸಾರ್ಹ ಸಂಸ್ಥೆಯಾಗಿದ್ದು, ಮೊಬೈಲ್ ಮತ್ತು ಇಂಟರ್ನೆಟ್ ಯುಗದಲ್ಲಿಯೂ ಅಂಚೆ ಸಿಬ್ಬಂದಿ ಜನರ ಮನೆಬಾಗಿಲಿಗೆ ಸೇವೆ ತಲುಪಿಸುತ್ತಿರುವುದು ಶ್ಲಾಘನೀಯ ಎಂದರು.
ಸದಸ್ಯೆ ವೆಂಕಮ್ಮ ಹೊಳೆಮ್ಮನವರ ಮಾತನಾಡಿ, ದೂರದ ಊರುಗಳಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳು ಹಾಗೂ ಕುಟುಂಬಗಳ ನಡುವೆ ಪತ್ರಗಳ ಮೂಲಕ ಸಂಪರ್ಕ ಬೆಸೆಯುವಲ್ಲಿ, ಹಣದ ಆದೇಶ ಮತ್ತು ಮಹತ್ವದ ದಾಖಲೆಗಳನ್ನು ತಲುಪಿಸುವಲ್ಲಿ ಅಂಚೆ ಸಿಬ್ಬಂದಿ ವಹಿಸಿದ ಪಾತ್ರ ಅನನ್ಯವಾಗಿದೆ. ಮಳೆ-ಚಳಿ ಲೆಕ್ಕಿಸದೆ ಕರ್ತವ್ಯನಿಷ್ಠೆಯಿಂದ ಸೇವೆ ಸಲ್ಲಿಸುತ್ತಿರುವ ಅಂಚೆ ನೌಕರರ ಸೇವೆ ಸದಾ ಸ್ಮರಣೀಯ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಶಾಂತಮ್ಮ ಗಾಣಿಗೇರ, ಮಾಲತೇಶ ಎಚ್., ಶಿಲ್ಪಾ ಹೊಳೆಮ್ಮನವರ ಸೇರಿದಂತೆ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ 