ಸಂಜೀವಕುಮಾರ ನೀರಲಗಿ ಅವರಿಗೆ ಸನ್ಮಾನ

ಸಂಜೀವಕುಮಾರ ನೀರಲಗಿ ಅವರಿಗೆ ಸನ್ಮಾನ  Felicitation of Sanjeevkumar Neeralagi


ಶಿಗ್ಗಾಂವಿ, ಸೆ. 22: ಹಾವೇರಿ ಜಿಲ್ಲಾ ಕಾಂಗ್ರೆಸ್ ಸಮಿತಿಗೆ ಸತತ ಎರಡನೇ ಬಾರಿಗೆ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಯಾದ ಸಂಜೀವಕುಮಾರ ನೀರಲಗಿ ಅವರನ್ನು ಶಿಗ್ಗಾಂವಿ-ಸವಣೂರ ಕ್ಷೇತ್ರದ ಶಾಸಕ ಅಹ್ಮದ್ಖಾನ್ ಪಠಾಣ್ ಗೌರವಿಸಿ ಸನ್ಮಾನಿಸಿದರು.  ಈ ಸಂದರ್ಭದಲ್ಲಿ ಮುನ್ನಾ ಅಹ್ಮದ್ಖಾನ್ ಪಠಾಣ್, ಗುಡ್ಡಪ್ಪ ಜಲದಿ, ಎಸ್‌.ಎಫ್‌. ಮಣಕಟ್ಟಿ, ಗೌಸಖಾನ್ ಮುನಶಿ, ಮಂಜುನಾಥ ತಿಮ್ಮಾಪುರ, ಅಣ್ಣಪ್ಪ ಲಮಾಣಿ, ಮುನ್ನಾ ಲಕ್ಷ್ಮೇಶ್ವರ, ಶಂಭು ನೇತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.