ರೈತರು ಸಾಲ ಮರುಪಾವತಿಗೆ ಆದ್ಯತೆ ನೀಡಲಿ: ದೊಡ್ಡಕೇಶವರಡ್ಡಿ
Farmers should prioritize loan repayment: Doddakeshavareddy
ಬಳ್ಳಾರಿ, ಆ.29: ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತ, ಬಳ್ಳಾರಿ ಇದರ 2025-26ನೇ ಸಾಲಿನ ಮಹಾಜನ ಸಭೆ ನಗರದ ಬ್ಯಾಂಕ್ ಕಚೇರಿಯಲ್ಲಿ ಶುಕ್ರವಾರ ನಡೆಯಿತು. ಬ್ಯಾಂಕ್ ಅಧ್ಯಕ್ಷ ವಿ. ದೊಡ್ಡಕೇಶವರಡ್ಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 2025-26ನೇ ಸಾಲಿನ ಆಡಳಿತ ವರದಿಯನ್ನು ಮಂಡಿಸಲಾಯಿತು. ಕಾರ್ಯಸೂಚಿಯಲ್ಲಿದ್ದ 15 ವಿಷಯಗಳನ್ನು ಚರ್ಚಿಸಿ, ಸಭೆಯ ಸದಸ್ಯರ ಅನುಮೋದನೆ ಪಡೆಯಲಾಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಬ್ಯಾಂಕ್ ಅಧ್ಯಕ್ಷ ವಿ. ದೊಡ್ಡಕೇಶವರಡ್ಡಿ, ತಾಲ್ಲೂಕಿನ ರೈತರು ಬ್ಯಾಂಕ್ನಿಂದ ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿಸುವ ಮೂಲಕ ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ಸಾಲವನ್ನು ಸಮಯಕ್ಕೆ ಸರಿಯಾಗಿ ಮರುಪಾವತಿಸಿದ ಸದಸ್ಯರನ್ನು ಅಭಿನಂದಿಸಿದ ಅವರು, ಮಹಾಜನ ಸಭೆಯನ್ನು ಯಶಸ್ವಿಗೊಳಿಸಿದ ಎಲ್ಲ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು. ಬ್ಯಾಂಕ್ ವ್ಯವಸ್ಥಾಪಕ ಎ. ದೀಪಕ್ ಕುಮಾರ್ ಸಭೆಯ ನಿರೂಪಣೆ ನಡೆಸಿದರು. ನಿರ್ದೇಶಕ ದಮೂರು ಷಣ್ಮುಖ ಸ್ವಾಗತಿಸಿದರು.
ಸಭೆಯಲ್ಲಿ ಉಪಾಧ್ಯಕ್ಷ ದೇವಣ್ಣ ಗೊಲ್ಲೇರ ನಾಗೇನಹಳ್ಳಿ, ಆಡಳಿತ ಮಂಡಳಿ ನಿರ್ದೇಶಕರಾದ ಬಿ. ಚಂದ್ರಶೇಖರ (ಕಮ್ಮರಬೇಡು), ಬಿ. ಜಗದೀಶ ಗೌಡ (ಬಾಣಾಪುರ), ಎಲ್. ಗೋವಿಂದ ನಾಯ್ಕ (ಬೆಳಗಲ್ಲು), ದಮೂರು ಷಣ್ಮುಖ (ಕೊಲಗಲ್ಲು), ಆರ್. ಲಕ್ಷ್ಮೀನಾರಾಯಣ (ಕಾಕಲೂರು ತೋಟ), ಕರಡಿ ನಾಗರಾಜ (ಚಾಗನೂರು), ತುಳಸಪ್ಪ (ಯರಗುಡಿ), ಲತಾ ಎ. (ಬಳ್ಳಾರಿ), ವಿ. ಗಂಗಮ್ಮ (ಕೊರ್ರಗುಂದಿ), ಕೆ. ವರಬಸಪ್ಪ (ಶ್ರೀಧರಗಡ್ಡೆ), ಕೆ. ರಾಘವೇಂದ್ರ (ಬಳ್ಳಾರಿ), ಕೆ. ಪಾಲಾಕ್ಷಿ ರೆಡ್ಡಿ (ಬಳ್ಳಾರಿ) ಹಾಗೂ ಕಸ್ಕಾಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ಸಿ. ಮಂಜುನಾಥ ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 