ನೂತನ ಕೊಪ್ಪಳ ಕಾರ್ಖಾನೆ ಬಾಧಿತ ರೈತ ಸಂಘ ಲಾಂಚನ ಅನಾವರಣ ಕಾರ್ಖಾನೆಗಳ ಗೂಂಡಾಗಿರಿ, ಬೆದರಿಕೆ ಸಹಿಸಲ್ಲ: ಅಲ್ಲಮಪ್ರಭು

ನೂತನ ಕೊಪ್ಪಳ ಕಾರ್ಖಾನೆ ಬಾಧಿತ ರೈತ ಸಂಘ ಲಾಂಚನ ಅನಾವರಣ  ಕಾರ್ಖಾನೆಗಳ ಗೂಂಡಾಗಿರಿ, ಬೆದರಿಕೆ ಸಹಿಸಲ್ಲ: ಅಲ್ಲಮಪ್ರಭು  Farmers' union affected by new Koppal factory unveils logo, factories' hooliganism, threats will not

ಲೋಕದರ್ಶನ ವರದಿ

         ಕೊಪ್ಪಳ 28:  ನಗರಸಭೆ ಆವರಣದಲ್ಲಿ 148ನೇ ದಿನದ ಬಲ್ಡೋಟ ತೊಲಗಿಸಿ, 22 ಕಾರ್ಖಾನೆ ಬಾಧಿತ ಹಳ್ಳಿಯ ಜನರ ಜೀವ ಉಳಿಸಿ, ಬಸಾಪುರ ಕೆರೆ ಸಾರ್ವಜನಿಕರಿಗೆ ಮುಕ್ತಗೊಳಿಸಿ, ತುಂಗಭದ್ರಾ ಜಲಾಶಯ ನದಿ ನೀರು ವಿಷಗೊಳಿಸಿದ ಕಾರ್ಖಾನೆಗಳನ್ನು ಸೀಜ್ ಮಾಡಬೇಕೆಂದು ನಡೆಸಿರುವ ಅನಿರ್ದಿಷ್ಟಾವಧಿ ಧರಣಿಯಲ್ಲಿ ನೂತನ ಕೊಪ್ಪಳ ಕಾರ್ಖಾನೆ ಬಾಧಿತ ರೈತ ಸಂಘ ಲಾಂಚನ ಅನಾವರಣಗೊಳಿಸಲಾಯಿತು.  

ಅವರು ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಮೂಲಕ ನೂತನವಾಗಿ ಅಸ್ತಿತ್ವಕ್ಕೆ ತರಲಿರುವ ರೈತ ಸಂಘದ ಲಾಂಛನ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ, ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು ಅವರು, ಕಾರ್ಖಾನೆ ಬಾಧಿತ 22 ಹಳ್ಳಿಗಳಲ್ಲಿ ಫ್ಯಾಕ್ಟರಿಗಳು ಮಾಲಿನ್ಯ ನಿಗ್ರಹ ಮಾಡಿ ತೋರಿಸಬೇಕು. ಇಲ್ಲವೆ ತಕ್ಷಣದಿಂದಲೇ ಕಾರ್ಖಾನೆ ಮುಚ್ಚಿ ಮಾಲಿನ್ಯ ಹೋಗಲಾಡಿಸಬೇಕು ಎಂದು ಆಗ್ರಹಿಸಿದರು. 

ಬಾಧಿತ ಹಳ್ಳಿಗಳಲ್ಲಿ ಕಾರ್ಖಾನೆಗಳು ಗೂಂಡಾಗಿರಿ ಮಾಡುತ್ತಾ ಬೆದರಿಕೆ ಒಡ್ಡುವುದು ಸಹಿಸಿಕೊಳ್ಳಲು ಸಾಧ್ಯವಿಲ್ಲ. ನಮ್ಮ ಪರಿಸರ ಹಾಳು ಮಾಡಿ ನಮ್ಮ ಜನಗಳ ಮೇಲೆ ಹಲ್ಲೆ ನಡೆಸಿದರೆ ತಕ್ಕ ಉತ್ತರವನ್ನು ಚಳವಳಿಯಿಂದ ಕೊಡೋಣ. ಧೈರ್ಯದಿಂದ ದಿಟ್ಟ ನಿಲುವು ತಳೆದು ಪರಿಸ್ಥಿತಿ ಎದುರಿಸೋಣ ಎಂದರು.  

ಬಾಧಿತ ಹಳ್ಳಿಗಳಾದ  ಹಿರೇಬಗನಾಳ, ಹಾಲವರ್ತಿ, ಕುಣಿಕೇರಿ, ಕಾಸನಕಂಡಿ, ಕುಣಿಕೇರಿ ತಾಂಡಾ, ಲಾಚನಕೇರಿ, ಗಿಣಿಗೇರಿ, ಬಸಾಪುರ ಗ್ರಾಮದ ರೈತರು ಲಾಂಚನ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ರೈತರು ತಮ್ಮ ಸಮಸ್ಯೆ ಕುರಿತು ಚರ್ಚಿಸಿದರು.  

ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ ಅವರು ಸಂಘದ ವ್ಯಾಪ್ತಿ, ಕಾರ್ಯಸೂಚಿ, ಅದರ ದೃಷ್ಟಿಕೋನದ ಕುರಿತು ವಿವರಣೆ ಕೊಟ್ಟು ಮಾತನಾಡಿದರು. ಸಂಚಾಲಕ ಮಂಜುನಾಥ ಜಿ. ಗೊಂಡಬಾಳ ಮಾತನಾಡಿ, ಲಾಂಛನದಲ್ಲಿ ರೈತನ ಸಮಗ್ರ ಹಕ್ಕು, ಬಾಧನೆ ಎಲ್ಲಾ ಅಡಗಿದೆ. ಇದನ್ನು ಅರ್ಥ ಮಾಡಿಕೊಂಡು ದೃಢವಾಗಿ ಸಂಘ ಕಟ್ಟಿ ಹೋರಾಡೋಣ, ರೈತರ ಐಕ್ಯತೆಗಾಗಿ, ರೈತರ ಹಕ್ಕುಗಳಿಗಾಗಿ, ಕಷ್ಟ ಸುಖಗಳನ್ನು ಅರಿಯಲು ಒಂದು ವೇದಿಕೆಯಾಗಿ ಜಂಟಿ ಕ್ರಿಯಾ ವೇದಿಕೆಯ ಭಾಗವಾಗಿ ರೈತ ಸಂಘ ಇರುತ್ತದೆ ಎಂದರು.  

ಈ ಸಂದರ್ಭದಲ್ಲಿ ಮಹಿಳಾ ನಾಯಕಿಯರಾದ ಜ್ಯೋತಿ ಎಂ. ಗೊಂಡಬಾಳ, ಕಾವ್ಯ ಪ್ರಸನ್ನ ಗಡಾದ, ಸೌಮ್ಯ ನಾಲ್ವಾಡ, ಬಾಲಕಿ ಅಕ್ಷರ ಎಂ. ಗೊಂಡಬಾಳ ಮಾತನಾಡಿದರು. ಮಾಲಾ ಬಡಿಗೇರ, ಸರೋಜಾ ಬಾಕಳೆ, ಶ್ವೇತಾ ಪಿ. ಅಕ್ಕಿ, ಮೂಕಪ್ಪ ಮೇಸ್ತ್ರಿ ಬಸಾಪುರ, ಯಮನೂರ​‍್ಪ ಹಾಲಳ್ಳಿ ಬಸಾಪುರ, ಗವಿಸಿದ್ದಪ್ಪ ಪುಟಗಿ ಹಿರೇಬಗನಾಳ, ಗಣೇಶ ವಿಶ್ವಕರ್ಮ ಹಿರೇಬಗನಾಳ, ಕಾಸನಕಂಡಿ ಗ್ರಾಮದ ಪಕೀರಗೌಡ ಗೊಂದಿಹೊಸಳ್ಳಿ, ಯಂಕಪ್ಪ ಕಬ್ಬೇರ, ಶ್ರೀನಿವಾಸ ಎಚ್‌. ವಿ, ಕುಣಿಕೇರಿ ಗ್ರಾಮದ ರಮೇಶ್ ಡಂಬ್ರಳ್ಳಿ, ಯಮನೂರ​‍್ಪ ಹಳ್ಳಿಕೇರಿ, ಹುಲುಗಪ್ಪ ಭೋವಿ, ಚೆನ್ನವೀರಯ್ಯ ಹಿರೇಮಠ, ಮಂಜುನಾಥ ಮಾಲಿಪಾಟೀಲ್,

          ಲಾಚನಕೇರಿ ಗ್ರಾಮದ ನಾಗರಾಜ ಕುಷ್ಟಗಿ, ಟೀಕ್ಯಾ ನಾಯ್ಕ್‌, ಮಂಗಳೇಶ ರಾಠೋಡ, ಹನುಮಂತ ಕಟಿಗಿ, ಗವಿಸಿದ್ದರಡ್ಡಿ ರಡ್ಡೇರ, ಮಾರ್ಕಂಡಯ್ಯ ಹಿರೇಮಠ, ಶಂಕ್ರ​‍್ಪ ಹಳ್ಳಿ, ಬಸವರಾಜ ಮೈನಳ್ಳಿ, ಸುಭಾನ್ ಸಾಬ್ ನೀರಲಗಿ, ನಾಗರಾಜ ಹಾಳಕೇರಿ, ಗ್ಯಾನೇಶ ಹ್ಯಾಟಿ ಭಾಗ್ಯನಗರ, ನಟರಾಜ ಸವಡಿ, ಮುಸ್ತಫಾ ಹಾಲವರ್ತಿ, ಪರಮೇಶ್ ಕುರಗಡ್ಡಿ, ಡಿ.ಎಂ. ಬಡಿಗೇರ , ಎಸ್‌.ಬಿ.ರಾಜೂರು, ಬಿ.ಜಿ.ಕರಿಗಾರ, ಜಿ.ಬಿ. ಪಾಟೀಲ್, ರವಿ ಕಾಂತನವರ, ಶಿವಾನಂದಯ್ಯ ಬೀಳಗಿಮಠ, ಶಾಂತಮ್ಮ ಅಂಗಡಿ, ರಾಜಶೇಖರ ಏಳುಬಾವಿ, ಸಿದ್ದಪ್ಪ ಗೊರವರ, ಗಂಗಾಧರ ಖಾನಾಪುರ, ವೈ. ಶರಣು ಶೆಟ್ಟರ್, ಸಾವಿತ್ರಿ ಮುಜುಮದಾರ, ಸತ್ಯನಾರಾಯಣ, ಇನ್ನು ಮುಂತಾದ ಗ್ರಾಮದ ರೈತರು ಇದ್ದರು.