ಕೊಡಂಗಲ್ ರಾಜ್ಯ ಹೆದ್ದಾರಿ ನಿರ್ಮಾಣಕ್ಕೆ ಆಗ್ರಹಿಸಿ ರೈತರ ಹೋರಾಟ

ಕೊಡಂಗಲ್ ರಾಜ್ಯ ಹೆದ್ದಾರಿ ನಿರ್ಮಾಣಕ್ಕೆ ಆಗ್ರಹಿಸಿ ರೈತರ ಹೋರಾಟ Farmers' protest demanding the construction of the Kodangal State Highway

ಲೋಕದರ್ಶನ ವರದಿ 

  ಸಿಂದಗಿ  16; ಕೊಡಂಗಲ್ ರಾಜ್ಯ ಹೆದ್ದಾರಿ ರಸ್ತೆ ಕಾಮಗಾರಿ ಆಗ್ರಹಸಿ ಹಾಗೂ ರೈತರ ಹಕ್ಕಿಗಾಗಿ ಬೃಹತ್ ರಾಜ್ಯ ಹೆದ್ದಾರಿ ರಸ್ತೆ ತಡೆ ಹೋರಾಟ ರೈತರ ನ್ಯಾಯಸಮ್ಮತ ಬೇಡಿಕೆಗಳ ಪರವಾಗಿ ತಾಲೂಕಿನ ಡಂಬಳ ಕ್ರಾಸ್‌ನಲ್ಲಿ  ರಾಜ್ಯ ಹೆದ್ದಾರಿ ರಸ್ತೆ ತಡೆದು ಪ್ರತಿಭಟನೆ ನಡೆಸಿ ತಹಶೀಲ್ದಾರ ಕರೇಪ್ಪ ಬೆಳ್ಳಿ ಅವರ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದರು.  ಈ ಸಂದರ್ಭದಲ್ಲಿ ಮಾಜಿ ಶಾಸಕ ರಮೇಶ ಭೂಸನೂರ  ಮಾತನಾಡಿ, ಸಿಂದಗಿಯಿಂದ ಶಹಾಪೂರದವರೆಗೆ ರಸ್ತೆ ಸಂಪೂರ್ಣ ಹದಿಗೆಟ್ಟು ಗುಂಡಿಗಳಿಂದ ತುಂಬಿ ಪ್ರತಿದಿನ ಅಪಘಾತಗಳು ಸಂಭವಿಸುವುದು ಸರ್ವೇ ಸಾಮನ್ಯವಾಗಿದ್ದು ಕೂಡಲೆ ರಾಜ್ಯ ಸರಕಾರ ಎಚ್ಚೆತ್ತು ಕೊಂಡು ಕೊಡಂಗಲ್ ರಾಜ್ಯ ಹೆದ್ದಾರಿ ನಿರ್ಮಾಣ ಮಾಡಲೇಬೇಕೆಂದು ಹಾಗು ರೈತರು ತಮ್ಮ ಜಮೀನಗಳಲ್ಲಿ ಬಿತ್ತನೆ ಮಾಡಿ ಒಂದು ತಿಂಗಳು ಕಳೆದರು.

ಮಳೆ ಬರದೆ ಬರಗಾಲ ಉಂಟಾಗಿ ಬೆಳೆಗಳು ನೀರಿಲ್ಲದೆ ಒಣಗೆ ಹೋಗುತ್ತಿದ್ದು ಹಾಗೂ ದನ ಕರುಗಳಿಗೆ ಕುಡಿಯಲು ನೀರಿಲ್ಲದೆ ಸಾಯುವ ಪರಸ್ಥಿತಿ ಎದುರಾಗಿ ಪರಿಸ್ಥಿತಿ ಹೇಳತಿರವಾಗಿದೆ. ಅದಕಾರಣ ಕ್ಯಾನಲುಗಳಿಗೆ ಆದಷ್ಟು ಬೇಗ ನೀರು ಹರಿಸಬೇಕು ಎಂದು ಒತ್ತಾಯಿಸಿದ ಅವರು, ಈ ಕಾಂಗ್ರೆಸ್ ಬುರೆಡೆ ಸರ್ಕಾರ ಸುಳ್ಳಿನ ಸರ್ಕಾರ ರಸ್ತೆ ಮಾಡುವುದಾಗಿ ನಂಬಿಕೆ ದ್ರೋಹ ಮಾಡಿರುವ ಸರ್ಕಾರ ರೈತರ ಬೆಳೆಗಳಿಗೆ ನೀರು ಕೊಡಲಾರದೆ ಮೋಸ ಮಾಡುತ್ತಿರುವ ಸರ್ಕಾರ ರೈತರಿಗೆ ಕೂಡಲೇ ಬೆಳೆ ಪರಿಹಾರ ಹೆಕ್ಟರಿಗೆ ಐವತ್ತು ಸಾವಿರ ರೂಪಾಯಿ ಮದ್ಯಂತರ ಪರಿಹಾರ ನೀಡುವಂತೆ ಆಗ್ರಹಿಸಿದರು. ಮಂಡಲ ಅಧ್ಯಕ್ಷ ಸಂತೋಷ ಪಾಟೀಲ ಕೂಡಲೇ ಕೊಡಂಗಲ್ ರಾಜ್ಯ ಹೆದ್ದಾರಿ ಆಗಬೇಕು ರೈತರ ಜಮೀನುಗಳಿಗೆ ನೀರು ಬೀಡಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಪವಾಸ ಸತ್ಯಾಗ್ರಹ ಮಾಡಬೇಕಾಗುತ್ತದೆ ಎಂದು ಏಚ್ಚರಿಕೆ ನೀಡಿದರು.