ವಿದ್ಯುತ್ ಖಾಸಗಿಕರಣ ವಿರೋಧಿಸಿ ರೈತ ಸಂಘಟನೆಗಳು ಆಗ್ರಹ
Farmers' organizations protest against electricity privatization
ತಾಳಿಕೋಟಿ 24: ವಿದ್ಯುತ್ ತಿದ್ದುಪಡಿ ಮಸೂದೆ-2025, ಸಮಾನಂತರ ವಿದ್ಯುತ್ ವಿತರಣಾ ಪರವಾನಿಗೆ ಹಾಗೂ ವಿದ್ಯುತ್ ಕ್ಷೇತ್ರದ ಖಾಸ್ಗೀಕರಣ ಕ್ರಮಗಳನ್ನು ತಕ್ಷಣ ಹಿಂಪಡೆಯುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಹಾಗೂ ಮಹಿಳಾ ವಿಭಾಗದ ತಾಲೂಕ ಘಟಕದ ವತಿಯಿಂದ ತಹಸಿಲ್ದಾರ್ ಮೂಲಕ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಇಂಧನ ಸಚಿವರು ಹಾಗೂ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಕಾರ್ಯದರ್ಶಿಗಳಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ಮನವಿ ಪತ್ರದಲ್ಲಿ ವಿದ್ಯುಸೇವೆ ಸಾರ್ವಜನಿಕರ ಮೂಲಭೂತ ಅಗತ್ಯವಾಗಿದ್ದು ಅದರ ಖಾಸಗಿಕರಣದಿಂದ ವಿದ್ಯುತ್ತರ ಏರಿಕೆ, ರೈತರಿಗೆ ನೀಡಲಾಗುತ್ತಿರುವ ಸಬ್ಸಿಡಿ ಮತ್ತು ಉಚಿತ ವಿದ್ಯುತ್ ಯೋಜನೆಗಳಿಗೆ ಧಕ್ಕೆಯಾಗುವ ಸಾಧ್ಯತೆ ಇದೆ. ಅಲ್ಲದೆ ಸಾವಿರಾರು ನೌಕರರ ಉದ್ಯೋಗ ಭದ್ರತೆಗೂ ಕುತ್ತು ಉಂಟಾಗಲಿದ್ದು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾದ ಈ ಕ್ರಮವನ್ನು ಸರ್ಕಾರ ಈ ಕೂಡಲೇ ಹಿಂಪಡೆಯಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ರೈತ ಸಂಘ ತಾಳಿಕೋಟಿ ಘಟಕಾಧ್ಯಕ್ಷ ಶ್ರೀಶೈಲ ವಾಲಿಕಾರ, ಮಹಿಳಾ ಅಧ್ಯಕ್ಷೆ ಸುಜಾತಾ ಅವಟಿ, ಸದಸ್ಯರಾದ ಲಿಂಗರಾಜ ಮೇಟಿ, ಬಿ ಎನ್ ಪಾಟೀಲ, ಶ್ರೀಶೈಲ್ ಸಜ್ಜನ, ಶಂಕರ್ಪ ಟಕ್ಕಳಕಿ, ಮಲ್ಲಪ್ಪ ಮುದ್ನೂರ, ಅಪ್ಪಯ್ಯ ಕರ್ಕಳಿ ಮಠ, ರಮೇಶಗೌಡ ವಡ್ಡೋಡಗಿ, ಭೀಮಣ್ಣ ಸಜ್ಜನ, ಶ್ರೀಶೈಲ ಸಂಗಾಪೂರ, ಬಾಬು ತಾಳಿಕೋಟಿ, ಲಕ್ಷ್ಮಪ್ಪ ಚಲವಾದಿ, ದೇವರೆಡ್ಡಿ ಬಿರಾದಾರ, ದೇವರಾಜ ಕುಲಕರ್ಣಿ, ಬಸವರಾಜ ವಾಲೀಕರ, ಅಶೋಕಗೌಡ ಪಾಟೀಲ, ಸಿದ್ದು ತಳವಾರ, ದೇವೇಂದ್ರ್ಪಗೌಡ ಪಾಟೀಲ, ಸಂಗಣ್ಣ ಸಜ್ಜನ, ಡಿ.ಎ.ಪೀರಾಪೂರ, ರಾಜುಗೌಡ ಕರ್ಕಳ್ಳಿ ಹಾಗೂ ಮಹಿಳಾ ಸದಸ್ಯರು ಇದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 