ರೈತರ ಜಮೀನುಗಳಿಗೆ ಒಂದೇ ರೀತಿ ಬೆಲೆ ನಿಗದಿ ಮಾಡಿ ಪರಿಹಾರ ಒದಗಿಸಬೇಕು: ಶಂಕರಗೌಡ ಹಿರೇಗೌಡ

ರೈತರ ಜಮೀನುಗಳಿಗೆ ಒಂದೇ ರೀತಿ ಬೆಲೆ ನಿಗದಿ ಮಾಡಿ ಪರಿಹಾರ ಒದಗಿಸಬೇಕು:  ಶಂಕರಗೌಡ ಹಿರೇಗೌಡ Farmers' lands should be priced uniformly and compensation should be provided: Shankaragowda Hiregow

ದೇವರಹಿಪ್ಪರಗಿ  03: ತಾಲ್ಲೂಕಿನ ಜಾಲವಾದ ಗ್ರಾಮದಲ್ಲಿ ಆರ್‌.ಎಫ್‌.ಝಡ್ ಕಂಪನಿ ಮಾಲೀಕರು ರೈತರ ಜಮೀನುಗಳಿಗೆ ಪರಿಹಾರ ನೀಡುವಲ್ಲಿ ತಾರತಮ್ಯ ಎಸಗಿದ್ದಾರೆ, ಎಲ್ಲಾ ರೈತರಿಗೆ ಒಂದೇ ದರ ನಿಗದಿ ಮಾಡಿ ಪರಿಹಾರ ಒದಗಿಸಬೇಕು ಅಲ್ಲಿಯವರೆಗೆ ಕೆಲಸ ಬಂದ್ ಮಾಡಲು ತಹಶೀಲ್ದಾರ ನಿಂಗಣ್ಣ ಬಿರಾದಾರ ಅವರಿಗೆ ಸೂಚನೆ ನೀಡಿದ್ದರು.ತಾಲ್ಲೂಕಿನ ಜಾಲವಾದ ಗ್ರಾಮದಲ್ಲಿ ಗುರುವಾರ 11ನೇ ದಿನದ ರೈತ ಸಂಘ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ರೈತರ ಧರಣಿ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿ ಮಾತನಾಡಿದ ಅವರು, ಗ್ರಾಮದಲ್ಲಿ ಆರ್‌.ಎಫ್‌.ಝಡ್ ಕಂಪನಿ ಮಾಲೀಕರು ದಲ್ಲಾಳಿಗಳು ರೈತರಿಗೆ ನ್ಯಾಯಯುತ ಬೆಲೆ ನೀಡಲು ಒತ್ತಾಯ ಮಾಡಿದರು.

ಸುಮಾರು 20 ಜನ ರೈತರಿಂದ 69 ಎಕರೆ ಜಮೀನು ಖರೀದಿಸಿದ್ದು ಕೆಲ ರೈತರಿಗೆ ಎಕರೆಗೆ 28 ಲಕ್ಷ ನೀಡಿದ್ದಾರೆ, ಇನ್ನು ಕೆಲ ಜನರಿಗೆ 16 ಲಕ್ಷ ನೀಡಿದ್ದಾರೆ. ಎಲ್ಲಾ ಒಂದೇ ತರನಾದ ಜಮೀನುಗಳಿಗೆ ಈ ರೀತಿಯ ಬೆಲೆ ನಿಗದಿ ಮಾಡಿದ್ದು ರೈತರಿಗೆ ಅನ್ಯಾಯ ಎಸಗಿದ್ದಾರೆ. ಕೂಡಲೇ ಕಂಪನಿಯವರು ರೈತರ ಜಮೀನುಗಳಲ್ಲಿ ಕೆಲಸ ನಿರ್ವಹಿಸುತ್ತಿರುವುದನ್ನು ಬಂದ್ ಮಾಡಿ ರೈತರಿಗೆ ಒಂದೇ ರೀತಿಯಾಗಿ ಪರಿಹಾರ ಒದಗಿಸಬೇಕು ಅಲ್ಲಿಯವರೆಗೆ ಕಂಪನಿಯವರಿಗೆ ನೋಟಿಸ್ ನೀಡಿ ಎಂದು ತಹಶೀಲ್ದಾರ್ ಅವರಿಗೆ ಸೂಚನೆ ನೀಡಿದರು.

ಸಂದರ್ಭದಲ್ಲಿ ಉತ್ತರ ಕರ್ನಾಟಕದ ರೈತ ಸಂಘದ ಅಧ್ಯಕ್ಷರಾದ ಶಂಕರಗೌಡ ಹಿರೇಗೌಡ ಅವರು ಮಾತನಾಡಿ ರೈತರ ಜಮೀನುಗಳಿಗೆ ಒಂದೇ ರೀತಿ ಬೆಲೆ ನಿಗದಿ ಮಾಡಿ ಪರಿಹಾರ ಒದಗಿಸಬೇಕು. ಜಮೀನು ಕಳೆದುಕೊಂಡ ರೈತರ ಕುಟುಂಬದ ಒಬ್ಬರಿಗೆ ಕೆಲಸ ನೀಡಬೇಕು ಎಂದು ಒತ್ತಾಯಿಸಿದರು.ಇದೇ ಸಂದರ್ಭದಲ್ಲಿ ಮುಖಂಡರುಗಳಾದ ಭೀಮರಾಯ ಮನಗೂಳಿ, ಚಾಂದ ಇನಾಮದಾರ, ಮಡು ದಳವಾಯಿ, ಶಿವರಾಜ ನೀರಲಗಿ, ಪ್ರಧಾನಿ ನೀರಲಗಿ, ಈರ​‍್ಪ ನಡುಗೇರಿ, ಸಲೀಂ ಮುಲ್ಲಾ, ಅಲ್ಲಾಬಾಕ್ಷ ಇನಾಮದಾರ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಹಾಗೂ ರೈತರು ಉಪಸ್ಥಿತರಿದ್ದರು.