ನೀರಾವರಿ ಕಾಲುವೆ ಜಾಲದ ರೈತರಗೋಳು ತಪ್ಪಿಲ್ಲ..! ಪರಿಹಾರ ಕಲ್ಪಿಸಲು ಅರವಿಂದ ಕುಲಕರ್ಣಿ ಆಗ್ರಹ
Farmers' grievances over irrigation canal network are not wrong..! Arvind Kulkarni demands a solutio
ಲೋಕದರ್ಶನ ವರದಿ
ವಿಜಯಪುರ 04 : ಸಕಾಲಕ್ಕೆ ಕ್ಲೋಜರ್ ಕಾಮಗಾರಿ ನಡೆಸಿ ಕಾಲುವೆ ಕೊನೆ ಭಾಗದ ರೈತರಿಗೆ ನೀರು ತಲುಪುವಂತೆ ಕ್ರಮಕೈಗೊಳ್ಳಲು ಒತ್ತಾಯಿಸಿ ಶನಿವಾರ ಅಖಂಡ ಕರ್ನಾಟಕ ರೈತ ಸಂಘ (ರಿ) ಪದಾಧಿಕಾರಿಗಳು ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಮೂಲಕ ಕೆಬಿಜೆಎನ್‌ಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯದ ವ್ಯಾಪ್ತಿಗೆ ಬರುವ ಎಲ್ಲ ಕಾಲುವೆಗಳಲ್ಲಿ ತುಂಬಿಕೊಂಡಿರುವ ಹೂಳು ಹಾಗೂ ಗಿಡಗಂಟಿಗಳನ್ನು ತೆರವುಗೊಳಿಸುವ ಕ್ಲೋಸರ್ ಕಾಮಗಾರಿಯನ್ನು ಸಕಾಲಕ್ಕೆ ಪ್ರಾರಂಭಿಸಿ ಸರಾಗವಾಗಿ ಕಾಲುವೆ ಜಾಲಕ್ಕೆ ನೀರು ಹರಿಸಿದಾಗ ಕಾಲುವೆ ಕೊನ ಅಂಚಿನವರೆಗೂ ನೀರು ತಲುಪುವಂತೆ ನೋಡಿಕೊಳ್ಳಬೇಕು.
ಪ್ರತಿ ವರ್ಷ ಕ್ಲೋಸರ್ ಕಾಮಗಾರಿ ಸರಿಯಾಗಿ ಆಗುತ್ತಿಲ್ಲ. ಕಾಲುವೆಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸುವ ಮುನ್ನವೇ ಟೆಂಡರ್ ಕರೆದು ಎಲ್ಲ ಸಿದ್ಧತೆಗಳನ್ನು ಮೊದಲೆ ತಯಾರಿ ಮಾಡಿಕೊಂಡಿರಬೇಕು. ಒಡೆದ ಕಾಲುವೆಗಳ ದುರಸ್ತಿ, ಕಾಲುವೆಗಳಲ್ಲಿ ತುಂಬಿದ ಹೂಳು, ಮುಳ್ಳು ಕಂಟಿಗಳ ತೆರವುಗೊಳಿಸುವುದು ಸೇರಿದಂತೆ ಕ್ಲೋಸರ್ ಕಾಮಗಾರಿಯಡಿ ನಡೆಯುತ್ತವೆ ಹಲವಾರು ವರ್ಷಗಳಿಂದ ಅನುದಾನ ಕೊರತೆಯಿಂದ ಕ್ಲೋಸರ್ ಕಾಮಗಾರಿಗೆ ಗ್ರಹಣ ಆವರಿಸಿತ್ತು ಕಳೆದ ವರ್ಷ ಕೆಲವು ಕಡೆ ಕಾಮಗಾರಿ ಮಾಡಿದ್ದರು.
ಆದರೆ ಅದು ಕೂಡ ಸರಿಯಾದ ರೀತಿಯಲ್ಲಿ ಆಗಲಿಲ್ಲ. ಆಲಮಟ್ಟಿ ಎಡದಂಡೆ ಕಾಲುವೆಯ 5ನೇ ವಿತರಣಾ ಕಾಲುವೆಯ 2ನೇ ಮತ್ತು 3ನೇ ಲ್ಯಾಟರಲ್ ಗಳನ್ನು ನಿರ್ಮಿಸಿದ ನಂತರ ಇಲ್ಲಿಯವರೆಗೂ ದುರಸ್ತಿ ಕೆಲಸ ಮಾಡಿಲ್ಲ ಇದರಿಂದ ಅಂದಾಜು ಸಾವಿರಾರು ರೈತರ ಜಮೀನುಗಳಿಗೆ ಸಕಾಲಕ್ಕೆ ನೀರು ದೊರೆತಿಲ್ಲ ಇದನ್ನು ಆ ಭಾಗದ ರೈತರು ಅಧಿಕಾರಿಗಳ ಗಮನಕ್ಕೆ ತಂದರೂ ಕೂಡ ಕ್ರಮ ಕೈಗೊಂಡಿಲ್ಲ.
ಲಾಲ್ ಬಹದ್ದೂರ್ ಶಾಸ್ತ್ರೀ ಜಲಾಶಯದ ನೀರಿನ ಮಟ್ಟ 519-60 ಮೀಟರ್ ಎತ್ತರದಲ್ಲಿ 123.081 ಟಿಎಂಸಿ ನೀರು ಸಂಗ್ರಹದ ಸಾಮರ್ಥ್ಯ ಇರುವ ಜಲಾಶಯ ಪ್ರತಿ ವರ್ಷ ಭರ್ತಿಯಾದರೂ ಕೂಡ ಜಿಲ್ಲೆಯ ರೈತರಿಗೆ ಕೇಳಿದ ಸಂದರ್ಭದಲ್ಲಿ ನೀರು ಕೊಡಲಾಗುತ್ತಿಲ್ಲ. ಜಿಲ್ಲೆಯಲ್ಲಿ 2.30 ಲಕ್ಷ ಹೆಕ್ಟರ್ ಪ್ರದೇಶ ನೀರಾವರಿಗೆ ಒಳಪಟ್ಟಿದ್ದರೂ ಕೂಡ ಕಾಲುವೆ ಜಾಲದ ರೈತರಗೋಳು ತಪ್ಪಿಲ್ಲ. ನಾನಾ ಕಾಲುವೆಗಳ ಬಹುತೇಕ ವಿತರಣಾ ಕಾಲುವೆಗಳಲ್ಲಿ ಅಪಾರ ಪ್ರಮಾಣದ ಹೂಳು, ಮುಳ್ಳು-ಕಂಟಿಗಳು ಬೆಳೆದಿವೆ.
ನೀರು ಮುಂದೆ ಸಾಗದೆ ಇರುವುದರಿಂದ ಅಲ್ಲೇ ಶೇಖರಣೆಗೊಂಡು ರೈತರ ಜಮೀನುಗಳಿಗೆ ನುಗ್ಗಿ ಬಿತ್ತನೆ ಮಾಡಿದ ಎಲ್ಲ ಬೆಳೆಗಳು ನೀರಿನಲ್ಲಿ ಕೊಳೆತು ಹೋಗಿ ಸಾಕಷ್ಟು ಪ್ರಮಾಣ ಹಾನಿಯಾದ ಉದಾಹರಣೆಗಳಿವೆ. ಸಾಕಷ್ಟು ಹೂಳು ತುಂಬಿಕೊಂಡಿದೆ ಹೀಗಾಗಿ ಕಾಲುವೆಗಳ ಕೊನೆಯಂಚಿನ ಜಮೀನುಗಳಿಗೆ ನೀರು ಸರಾಗವಾಗಿ ಹರಿಯುತ್ತಿಲ್ಲ. ಇದರಿಂದ ಕಾಲುವೆ ನಿರ್ಮಿಸಿದ್ದರೂ ಪ್ರಯೋಜನವಿಲ್ಲದಂತಾಗಿದೆ.
ಕಾಲುವೆ ಅಕ್ಕಪಕ್ಕದ ರಸ್ತೆಗಳು ಮುಳ್ಳುಕಂಟಿಗಳಿಂದ ಆವರಿಸಿದ್ದರಿಂದ ರೈತರು ಜಮೀನುಗಳಿಗೆ ಹೋಗಲು ಕೂಡ ಪರದಾಡುವಂತಾಗಿದೆ ಇದು ಪ್ರತಿ ವರ್ಷ ರೈತರಿಗೆ ದೊಡ್ಡ ಸವಾಲಾಗಿದೆ. ಆದ್ದರಿಂದ ಕಾಲುವೆಗಳಿಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಿ ತಕ್ಷಣ ಕ್ಲೋಸರ್ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಆದರೆ ಅಧಿಕಾರಿಗಳು ತಡವಾಗಿ ಟೆಂಡರ್ ಕರೆದು ನೀರು ಹರಿಸುವ ಸಮಯದಲ್ಲಿ ಕಾಮಗಾರಿ ಆರಂಭಿಸುತ್ತಾರೆ ಇದರಿಂದ ಉದ್ದೇಶಿತ ಕ್ಲೋಸರ್ ಕಾಮಗಾರಿ ಪೂರ್ಣಗೊಳ್ಳುವುದಿಲ್ಲ. ಇದರಿಂದ ಕೋಟ್ಯಂತರ ಹಣ ಅನಾವಶ್ಯಕವಾಗಿ ಹಾಳಾಗಿ ಹೋಗುತ್ತಿವೆ. ಆದ ಕಾರಣ ಈ ಭಾರಿ ಕಾಲುವೆಗಳಿಗೆ ನೀರು ಕಾಲುವೆಗಳಿಗೆ ನೀರು ಹರಿಸುವುದನ್ನು ನಿಲ್ಲಿಸಿದ ತಕ್ಷಣ ಕಾಮಗಾರಿ ಪ್ರಾರಂಭಿಸಿ ಕಾಲುವೆ ಕೊನೆ ಅಂಚಿನವರೆಗೂ ನೀರು ತಲುಪುವಂತೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬಸವನ ಬಾಗೇವಾಡಿ ತಾಲೂಕಾಧ್ಯಕ್ಷ ಉಮೇಶ ವಾಲೀಕಾರ, ಜಿಲ್ಲಾ ಸಂಚಾಲಕ ಪಾಂಡು ಹ್ಯಾಟಿ, ಬಸವನ ಬಾಗೇವಾಡಿ ತಾಲೂಕಾ ಉಪಾಧ್ಯಕ್ಷ ಹೊನಕೇರೆಪ್ಪ ತೆಲಗಿ, ಸೋಮೇಶ ನಾಗರೆಡ್ಡಿ, ಮಲ್ಲನಗೌಡ ಮೇಟಿ, ಮಾಳಪ್ಪ ಪೂಜಾರಿ, ಲಂಕೇಶ ತಳವಾರ, ಸಂಗು ಚಲವಾದಿ, ಸಿದ್ದು ಹಿರೇಮಠ, ಮಲ್ಲಿಕಾರ್ಜುನ ಭಜಂತ್ರಿ, ಮಡಿವಾಳಪ್ಪ ನಾಗರೆಡ್ಡಿ, ಶ್ರೀಶೈಲ ಕುರಣದ, ವಿಠ್ಠಲ ಬಿರಾದಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 