ಉಳೇನೂರು ಗ್ರಾಮದಲ್ಲಿ ರೈತರ ಶಿಬಿರ
Farmers' camp in Ulenur village
ಕಾರಟಗಿ 24: ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ರೈತ ಕೃಷಿ ಕಾರ್ಮಿಕರ ಶಿಬಿರ ಉಳೇನೂರು ಇಂದು ಎ.ಐ.ಕೆ.ಕೆ.ಎಂ.ಎಸ್ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯ ವತಿಯಿಂದ ಉಳೇನೂರು ಗ್ರಾಮದಲ್ಲಿ ರೈತರ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಸಂಘದ ರಾಜ್ಯ ಕಾರ್ಯದರ್ಶಿ ಭಗವಾನ್ ರೆಡ್ಡಿ ಅವರು ಮಾತನಾಡುತ್ತಾ ಇಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತರುತ್ತಿವೆ. ರೈತರ ಫಲವತ್ತಾದ ಕೃಷಿ ಭೂಮಿಯನ್ನು ಕೈಗಾರಿಕೆಗಳಿಗಾಗಿ ವಶಪಡಿಸಿಕೊಂಡು, ರೈತರನ್ನು ದಿವಾಳಿಯನ್ನಾಗಿ ಮಾಡಲು ಹೊರಟಿವೆ.
ಇತ್ತೀಚೆಗೆ ಕೇಂದ್ರ ಬಿಜೆಪಿ ಸರ್ಕಾರ ಬೀಜ ಕಾಯ್ದೆಯನ್ನು ಜಾರಿಗೆ ತರುವುದರ ಮೂಲಕ ಬೀಜಗಳ ಮೇಲಿನ ಸಂಪೂರ್ಣ ಹಿಡಿತವನ್ನು ಏಕಸೌಮ್ಯ ಬಂಡವಾಳಶಾಹಿ ಕಂಪನಿಗಳ ಕೈಗೊಪ್ಪಿಸುತ್ತಿದೆ ಮತ್ತು ನರೇಗಾ ಯೋಜನೆ ತಿದ್ದುಪಡಿ ಮಾಡಿ, ಜಿ ರಾಮ್ ಜಿ ಅನ್ನುವ ಯೋಜನೆಯ ಹೆಸರಿನ ಮೇಲೆ ಗ್ರಾಮೀಣ ಭಾಗದ ಕೂಲಿ ಕಾರ್ಮಿಕರಿಗೆ ಸಿಗುತ್ತಿದ್ದ ಕನಿಷ್ಠ ಜೀವನ ಭದ್ರತೆಯನ್ನು ಕಿತ್ತುಕೊಳ್ಳಲು ಮುಂದಾಗಿದೆ, ಹಾಗಾಗಿ ಇಂದು ರೈತರು ಮತ್ತು ಕೃಷಿ ಕಾರ್ಮಿಕರು ಇಂತ ಜನ ವಿರೋಧಿ, ರೈತ ಕಾರ್ಮಿಕ ವಿರೋಧಿ ಸರ್ಕಾರಗಳ ನೀತಿಗಳ ವಿರುದ್ಧ ಬಲಿಷ್ಠ ಚಳುವಳಿ ಕಟ್ಟಲು ಮುಂದಾಗಬೇಕು ಎಂದು ಕರೆ ನೀಡಿದರು.ಈ ಸಂದರ್ಭದಲ್ಲಿ ಸಂಘದ ರಾಜ್ಯ ಸಮಿತಿ ಸದಸ್ಯರು ಈ.ಹನುಮಂತಪ್ಪ, ರಾಜ್ಯ ಸಮಿತಿಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಗೋವಿಂದ್, ಊರಿನ ಮುಖಂಡರಾದ ಹೊನ್ನೂರ್ಪ, ದ್ಯಾವಣ್ಣ ವೇದಿಕೆ ಮೇಲಿದ್ದರು.
ನಂತರ 40 ಜನರನ್ನು ಒಳಗೊಂಡ ಸಂಘಟನೆಯ ಗ್ರಾಮ ಘಟಕವನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಅಂಜನಪ್ಪ ಹಳ್ಳಳ್ಳಿ ಉಪಾಧ್ಯಕ್ಷರುಗಳಾಗಿ ಬಸವರಾಜಪ್ಪ, ಹೊನ್ನೂರ್ಪಪಾಳೆ, ಮುಕ್ಕಣ್ಣ ಪಾಳೇ,ಗಾದಿಲಿಂಗಪ್ಪ ಕುರುಬರ, ಸಿದ್ದಪ್ಪ ನಾಯಕ್, ದೇವರಾಜ್ ಕಟ್ಟಿಮನಿ, ರಮೇಶ್ ಕಾರಟಿಗಿ, ದೇವರಾಜ್ ನಾಯಕ್, ಕಾರ್ಯದರ್ಶಿಯಾಗಿ ದೊಡ್ಡ ಬಸವ,ಸಹ ಕಾರ್ಯದರ್ಶಿಯಾಗಿ ಯಮನೂರ್ಪ ಸೇರಿದಂತೆ 40 ಕ್ಕೂ ಹೆಚ್ಚು ಸದಸ್ಯರನ್ನು ಒಳಗೊಂಡ ಬಲಿಷ್ಠ ವಾದ ಗ್ರಾಮ ಘಟಕವು ರಚನೆಯಾಯಿತು. ಉಳೇನೂರಿನ ಸುತ್ತಮುತ್ತಲಿನ ಹಲವಾರು ರೈತ ಪ್ರತಿನಿಧಿಗಳು ಶಿಬಿರದಲ್ಲಿ ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 