ಸುಪ್ರಸಿದ್ಧ ಸ್ಥಳ ಕಾಗಿನೆಲೆ ಅಭಿವೃದ್ಧಿ ಪಡಿಸಲು ರೈತ ಸಂಘ ಸಿಎಂಗೆ ಮನವಿ
Farmers' association appeals to CM to develop famous place Kaginele
ಬ್ಯಾಡಗಿ 15: ಪ್ರವಾಸಿ ತಾಣವಾದ ಕಾಗಿನೆಲೆಯನ್ನು ಅಭಿವೃದ್ಧಿ ಪಡಿಸುವಂತೆ ಜಿಲ್ಲಾ ರೈತ ಸಂಘದ ಅಧ್ಯಕ್ಷ ಎಂ.ಎನ್.ನಾಯಕ ಅವರ ನೇತೃತ್ವದಲ್ಲಿ ಪ್ರತಿಭಟನೆ ಮಾಡಿ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಉಪ ತಹಶೀಲ್ದಾರ ಸಿದ್ದಲಿಂಗಪ್ಪ ಮಲ್ಲಾಡದ ಅವರ ಮೂಲಕ ಮನವಿ ಸಲ್ಲಿಸಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಎಂ.ಎನ್. ನಾಯಕ ಮಾತನಾಡಿ ರಾಜ್ಯದಲ್ಲಿ ಕಾಗಿನೆಲೆ ಸುಪ್ರಸಿದ್ಧ ಸ್ಥಳವಾಗಿದ್ದು, ಪ್ರತಿದಿನ ನೂರಾರು ವಾಹನ ಪ್ರಾವಾಸಿಗರು ಕಾಗಿನೆಲೆಗೆ ಭೇಟಿ ನೀಡುತ್ತಿದ್ದಾರೆ. ಕಾಗಿನೆಲೆ ಗ್ರಾಮದಲ್ಲಿ ವಾಹನಗಳು ಸುಗಮವಾಗಿ ಸಂಚರಿಸಲು ರಸ್ತೆಗಳು ಇಕ್ಕಟ್ಟಾಗಿದ್ದು, ಬರುವ ಪ್ರವಾಸಿಗರಿಗೆ ಕಿರಿ ಕಿರಿ ಉಂಟು ಮಾಡುತ್ತಿವೆ. ರಸ್ತೆ ಹದಗೆಟ್ಟಿರುವುದರಿಂದ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಈ ಬಗ್ಗೆ ಜನಪ್ರತಿನಿಧಿಗಳಾಗಲಿಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸದೇ ನಿರ್ಲಕ್ಷ್ಯ ತಾಳಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ತಾಲೂಕಿನ ಜನಪ್ರತಿನಿಧಿಗಳು ಈ ಭಾಗದ ಸಮಸ್ಯೆ ಕೇಳಲು ಈವರೆಗೂ ಬಂದಿಲ್ಲ. ಈ ಭಾಗದ ಜನರ ಜೀವನ ಅಸ್ತವ್ಯಸ್ತವಾಗಿದೆ. ದಿನನಿತ್ಯ ಈ ರಸ್ತೆಯಲ್ಲಿ ಓಡಾಡುವಂತಹ ಪ್ರವಾಸಿಗರು ವಿದ್ಯಾರ್ಥಿಗಳು ಹಾಗೂ ಜನರು ತಮ್ಮ ಜೀವವನ್ನು ಕೈಲಿಟ್ಟುಕೊಂಡು ತಿರುಗಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರುಆದ್ದರಿಂದ ಗ್ರಾಮದ ಶ್ರೀ ಕನಕದಾಸ ಸರ್ಕಾಲದಿಂದ ಶ್ರೀ ಚೆನ್ನಕೇಶವ ದೇವಸ್ಥಾನದವರೆಗೆ ರಸ್ತೆ ಅಗಲೀಕರಣವಾಗಬೇಕು.
ಇಕ್ಕೆಲಗಳಲ್ಲಿ ಪಕ್ಕಾ ಗಟಾರ ನಿರ್ಮಾಣ ಮಾಡಬೇಕು. ಟಿಪ್ಪು ಸುಲ್ತಾನ ಸರ್ಕಲ್ ನಿರ್ಮಾಣ ಮಾಡಬೇಕು. ಸ್ಥಳೀಯ ಪ್ರವಾಸಿ ಮಂದಿರದ ಹಿಂದೆ ಕಟ್ಟಲಾಗಿರುವ ಹೊಸ ಮನೆಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು. ಶೀಘ್ರದಲ್ಲಿಯೇ ನಮ್ಮೆಲ್ಲ ಬೇಡಿಕೆಗಳನ್ನು ಈಡೇರಿಸದೇ ಹೋದಲ್ಲಿ ಮುಂದಿನ ದಿನ ಉಗ್ರ ಹೋರಾಟ ಮಾಡಲಾಗುವುದೆಂದು ಎಚ್ಚರಿಸಿದರು.ಪ್ರತಿಭಟನಾಕಾರರು ರಸ್ತೆಯ ತಗ್ಗು ಗುಂಡಿಗಳಲ್ಲಿ ಗಿಡನೆಟ್ಟು,ಉಪತಹಸೀಲ್ದಾರ್ ಕಚೇರಿಗೆ ಬಂದು ಕೆಲ ಸಮಯ ಧರಣಿ ನಡೆಸಿ ಮನವಿ ನೀಡಿದರು. ಪ್ರತಿಭಟನೆಯಲ್ಲಿ ಜಿಲ್ಲಾ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು. ಮುಖಂಡರಾದ ಸಾಧಿಕ್ ಕಲ್ಲಾಪುರ್, ಮಾಲ್ತೇಶ್ ಕಟ್ಟಿಮನಿ, ಅಶೋಕ್ ವರ್ದಿ, ಮೊಲಾಲಿ ಮುಲ್ಲಾ, ಎಸ್ ಇಂಗಳಗುಂದಿ, ವಕೀಲರಾದ ಅಲ್ಪಾಜ್ ಮತ್ತಿಹಳ್ಳಿ, ಏ ದಡ್ಡಿಕೊಪ್ಪಿ ಸೇರಿದಂತೆ ನೂರಾರು ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 