ಬೆಳೆ ವಿಮೆ ಪರಿಹಾರದಲ್ಲಿ ತಾರತಮ್ಯ ಖಂಡಿಸಿ ರೈತರ ಮನವಿ
Farmers' appeal condemning discrimination in crop insurance compensation
ಬ್ಯಾಡಗಿ 14 : ಹವಾಮಾನ ಆಧಾರಿತ ಬೆಳೆಗಳ ಬೆಳೆವಿಮೆ ಪರಿಹಾರದಲ್ಲಿ ತಾರತಮ್ಯ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘದ ಹಸಿರು ಸೇನೆ ತಾಲ್ಲೂಕು ಘಟಕದ ವತಿಯಿಂದ ಇಂದು ತಹಶೀಲ್ದಾರ್ ಮೂಲಕ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಾಗೂ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರಿಗೆ ರೈತರು ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ಹಸಿರು ಸೇನೆಯ ಜಿಲ್ಲಾ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಬಳ್ಳಾರಿ, 2025ಹಿ26 ಸಾಲಿನ ಹವಾಮಾನ ಆಧಾರಿತ ಬೆಳೆಗಳಾದ ಶೇಂಗಾ, ಮೆಣಸಿನಕಾಯಿ, ಮಾವು, ಅಡಿಕೆ ಸೇರಿದಂತೆ ವಿವಿಧ ಬೆಳೆಗಳಿಗೆ ವಿಮಾ ಪರಿಹಾರದಲ್ಲಿ ತಾರತಮ್ಯ ಉಂಟಾಗಿದೆ ಎಂದು ಆರೋಪಿಸಿದರು.
ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ರೈತರ ಖಾತೆಗೆ ವಿಮಾ ಪರಿಹಾರ ಜಮೆಯಾಗಿದ್ದರೆ, ಇನ್ನೂ ಕೆಲವು ಕಡೆ ಕಡಿಮೆ ಮೊತ್ತದ ಪರಿಹಾರ ಮಾತ್ರ ಪಾವತಿಸಲಾಗಿದೆ. ಈ ವ್ಯತ್ಯಾಸಕ್ಕೆ ಕಾರಣವೇನು ಎಂಬುದನ್ನು ವಿಮಾ ಕಂಪನಿಗಳು ಟರ್ಮ್ ಶೀಟ್ ಹಾಗೂ ಹವಾಮಾನ ವರದಿ ಆಧಾರದಲ್ಲಿ ರೈತರ ಸಮ್ಮುಖದಲ್ಲಿ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.
ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ ಗಂಗಣ್ಣ ಮಾತನಾಡಿ, ರೈತರು ಬೆಳೆ ವಿಮೆ ನೋಂದಣಿ ಹಾಗೂ ಪರಿಹಾರಕ್ಕೆ ಸಂಬಂಧಿಸಿದ ದಿನಾಂಕಗಳನ್ನು ಅಧಿಕಾರಿಗಳು ಸ್ಪಷ್ಟವಾಗಿ ನಿಗದಿಪಡಿಸಬೇಕು. ಟರ್ಮ್ ಶೀಟ್ ಅವಧಿ ಮುಗಿದ ಬಳಿಕ 45 ದಿನಗಳೊಳಗೆ ಲೆಕ್ಕಾಚಾರ ಮಾಡಿ ಪರಿಹಾರದೊಂದಿಗೆ ಬಡ್ಡಿಯನ್ನೂ ಪಾವತಿಸಬೇಕೆಂಬ ಮಾರ್ಗಸೂಚಿ ಇದ್ದರೂ, ಅಧಿಕಾರಿಗಳು ಪರಿಹಾರದ ಹಣ ಮಾತ್ರ ಜಮಾ ಮಾಡಿದ್ದು ಬಡ್ಡಿ ನೀಡಿಲ್ಲ. ರೈತರಿಗೆ ಕೂಡಲೇ ಬಡ್ಡಿ ಮೊತ್ತವನ್ನೂ ಪಾವತಿಸಬೇಕು ಎಂದು ಆಗ್ರಹಿಸಿದರು.
ಆಗಸ್ಟ್ 17ರೊಳಗೆ ವಿಮಾ ಪರಿಹಾರದ ತಾರತಮ್ಯ ಸರಿಪಡಿಸದಿದ್ದರೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಬಾಗೇವಾಡಿ ತಾಲ್ಲೂಕು ಘಟಕದ ನೇತೃತ್ವದಲ್ಲಿ ತಹಶೀಲ್ದಾರ್ ಕಚೇರಿ ಹಾಗೂ ತೋಟಗಾರಿಕೆ ಇಲಾಖೆ ಎದುರು ಉಗ್ರ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಅಧ್ಯಕ್ಷರಾದ ರುದ್ರಗೌಡ, ಕಾಡನಗೌಡ, ಚಿಕ್ಕಪ್ಪ, ಛತ್ರದ, ಮೌನೇಶ್ ಕುಮಾರ್, ಶಿವರುದ್ರ್ಪ ಮೂಡೇರ, ಜಾನ್ ಪುನೀತ್, ಪ್ರಕಾಶ್ ಸಿದ್ದಪ್ಪನವರ, ಬಸವರಾಜ್ ಕುಮಾರ್, ಅಶೋಕ್ ಶೀಡೇನೂರ, ಸುಭಾಷ್ ಬನ್ನಿಹಟ್ಟಿ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 