ವಿವಿಧ ಬೆಡಿಕೆಗಳಿಗೆ ಆಗ್ರಹಿಸಿ ರೈತ ಸಂಘದಿಂದ ಮನವಿ
Farmers' Association appeals for various benefits
ವಿವಿಧ ಬೆಡಿಕೆಗಳಿಗೆ ಆಗ್ರಹಿಸಿ ರೈತ ಸಂಘದಿಂದ ಮನವಿ
ಸಂಬರಗಿ, 04 : ಕಳೆದ ವರ್ಷ ಮಹಾರಾಷ್ಟ್ರ ಸಕ್ಕರೆ ಕಾರ್ಖಾನೆ ನೀಡರುವ ದರ ನೀಡಿ ಕಳೆದ ವರ್ಷದ 500 ರೂ. ಎರಡನೇ ಕಂತ ಹಾಗೂ ರೈತರ ಕಬ್ಬಿಗೆ ಪ್ರತಿ ಟನ್‌ಗೆ ರೈತರಿಗೆ ರಿಯಾಯಿತಿ ದರದಲ್ಲಿ 10 ಕೆ.ಜಿ ಸಕ್ಕರೆ ಹಾಗೂ ರಿಯಾಯಿತಿ ದರದಲ್ಲಿ ರೈತರಿಗೆ ಬೀಜ ಗೊಬ್ಬರವನ್ನು ನೀಡಬೇಕೆಂದು ರೈತ ಸಂಘದ ಅಥಣಿ ತಾಲೂಕಾ ಅಧ್ಯಕ್ಷ ಮಹಾದೇವ ಮಡಿವಾಳ ಇವರ ನೇತೃತ್ವದಲ್ಲಿ ಬಸವೇಶ್ವರ ಶುಗರ‌್ಸ ಬಳ್ಳಿಗೇರಿ ವ್ಯವಸ್ಥಾಪಕರಾದ ಅಶೋಕ ಪವಾರ ಇವರಿಗೆ ಮನವಿ ಸಲ್ಲಿಸಲಾಯಿತು.
ಕಾರ್ಖಾನೆ ಪ್ರಾರಂಭವಾಗಿ ಮೂರನೇ ವರ್ಷ ಪ್ರಾರಂಭವಾಗಿದೆ. ಕಾರ್ಖಾನೆ ಮೂರನೆ ವರ್ಷದಲ್ಲಿ ಇದ್ದು, ಸದಸ್ಯರಿಗೆ ಸಕ್ಕರೆ ನೀಡಿಲ್ಲ, ಉಚಿತವಾಗಿ ಸಕ್ಕರೆಯನ್ನು ನೀಡಬೇಕು. ಅದೇ ಪ್ರಕಾರ ಕಳೆದ ವರ್ಷ ಎರಡನೇ ಕಂತನ್ನು ರೈತರ ಖಾತೆಗೆ ಜಮಾ ಮಾಡಿ ರೈತರಿಗೆ ಕಬ್ಬಿನ ಜೀಜ, ಗೊಬ್ಬರ ನೀಡಬೇಕೆಂದು ಅವರು ಅಗ್ರಹಿಸಿದರು. ಕಬ್ಬಿನ ದರದಲ್ಲಿ ಕರ್ನಾಟಕ, ಮಹಾರಾಷ್ಟ್ರ ಎಂಬ ಯಾವುದೇ ತಾರತಮ್ಯ ಇರಬಾರದು. ಎರಡೂ ರಾಜ್ಯದ ಗಡಿಭಾಗದಲ್ಲಿ ಇರುವ ರೈತರಿಗೆ ಕಬ್ಬಿನ ದರವನ್ನು ನೀಡಬೇಕು. ಕಾರ್ಖಾನೆಯ ತೂಕದ ಅಳತೆ ಸರಿಯಾಗಿರಬೇಕು. ಈ ವಿಷಯದ ಮನವಿಯನ್ನು ನೀಡಿದರು. ಈ ಸಮಸ್ಯೆ ಶೀಘ್ರದಲ್ಲಿ ಪರ್ಯಾಗೊಳಿಸಬೇಕು. ಇಲ್ಲವಾದರೆ ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಈ ವೇಳೆ ಮಹಮ್ಮದ ಜಮಾದಾರ, ರಾಮಗೌಡಾ ಪಾಟೀಲ, ರಮೇಶ ಕುಂಬಾರ, ಕಿರಣ ಮಿಸಾಳ, ದಗಡು ಮಿಸಾಳ, ಬಾಳಪ್ಪ ಕೋಳೆಕರ, ಮಲ್ಲಿಕಾರ್ಜುನ ಶೇಗಣೆ, ಭೀಮು ಮಿಸಾಳ ಸೇರಿದಂತಹ ರೈತ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 