ರೈತರ ಜಮೀನುಗಳಿಗೆ ಸೋಲಾರ್ ತಂತಿಬೆಲೆಗಳನ್ನು ಅಳವಡಿಸಿಕೊಡಿ ರೈತ ಮುಖಂಡ ಕಿರಣ ಗಡಿಗೋಳ ಆಗ್ರಹ

ರೈತರ ಜಮೀನುಗಳಿಗೆ ಸೋಲಾರ್ ತಂತಿಬೆಲೆಗಳನ್ನು ಅಳವಡಿಸಿಕೊಡಿ ರೈತ ಮುಖಂಡ ಕಿರಣ ಗಡಿಗೋಳ ಆಗ್ರಹ Farmer leader Kiran Gadigola demands installation of solar power grids on farmers' lands

ಲೋಕದರ್ಶನ ವರದಿ 

ಬ್ಯಾಡಗಿ 27:  ಸತತವಾಗಿ ರೈತರು ಅತಿವೃಷ್ಟಿ ಹಾಗೂ ಅನಾವೃಷ್ಟಿ ಪ್ರಗಾಲದಿಂದ ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ ಇದರ ಮಧ್ಯ ರೈತನು ಕಷ್ಟಪಟ್ಟು ಬೆಳೆದ ಅಲ್ಪಸ್ವಲ್ಪ ಬೆಳೆಯನ್ನು ಕಾಡುಪ್ರಾಣಿಗಳಾದ ಹಂದಿ, ಜಿಂಕೆ ಮಂಗಗಳು ಹಾಳು ಮಾಡುತ್ತಿದ್ದು ಫಸಲಿಗೆ ಬಂದ ಬೆಳೆಗಳು ನಾಶವಾಗುತ್ತಿವೆ ಆದ್ದರಿಂದ ಕಾಡುಪ್ರಾಣಿಗಳಿಂದ ರಕ್ಷಣೆ ಮಾಡಲು ಅರಣ್ಯ ಪ್ರದೇಶದ ಸುತ್ತಮುತ್ತಲೂ ಇರುವ ರೈತರ ಜಮುನಗಳಿಗೆ ಉಚಿತವಾಗಿ ಸೋಲಾರ್ ತಂತಿಬೇದಿಗಳನ್ನು ಅಳವಡಿಕೆ ಮಾಡಿಕೊಡಬೇಕೆಂದು ರೈತ ಮುಖಂಡ ಕಿರಣ್ ಕುಮಾರ್ ಗಡಿಗೋಳ ಆಗ್ರಹಿಸಿದ್ದಾರೆ. ಪಟ್ಟಣದ ಅರಣ್ಯ ವಲಯ ಅಧಿಕಾರಿಗಳಿಗೆ ರೈತರೊಂದಿಗೆ  ಮನವಿ ಪತ್ರ ನೀಡುವ ಮೂಲಕ ಮಾತನಾಡಿದವರು ರೈತರು ಕಷ್ಟ ಪಟ್ಟ ಬೆಳೆದ ಬೆಳೆಗಳು ನಾಶವಾದರೆ ಸಂಪೂರ್ಣ ನಷ್ಟವನ್ನು ಅರಣ್ಯ ಇಲಾಖೆಯ ಭರಿಸಬೇಕು ಹಾಗೂ ತಮ್ಮ ಅರಣ್ಯ ಪ್ರದೇಶದ ಸುತ್ತಮುತ್ತಲು ಆಳವಾದ ಗುಂಡಿ ಮತ್ತು ತಂತಿ ಬೇಲಿ ಅಳವಡಿಸಿ ಕಾಡು ಪ್ರಾಣಿಗಳಿಂದ ರಕ್ಷಣೆ ಮಾಡಬೇಕು ಎಂದು ಆಗ್ರಹಿಸಿದರು ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದರು.ಈ ಸಂದರ್ಭದಲ್ಲಿ ರೈತರುಗಳಾದ ಕಲವೀರ​‍್ನ ಬ್ಯಾಡಗಿ.ಬಸಪ್ಪ ಅಂಗರಗಟ್ಟಿ.ಚಂದ್ರ​‍್ಪ ನಲ್ಲಿಕೊಪ್ಪ.ನಾಗರಾಜ ಕರೂರ . ನಾಗಪ್ಪ ಕರೂರ.ತೀರಕಪ್ಪ ಕರೂರ.ಎಲ್ಲಪ್ಪ ಕರೂರ.ರಾಜಪ್ಪ ಅಂಗರಗಟ್ಟಿ.ಪರಮೇಶ ಮಣ್ಣವಡ್ಡರ.ನವೀನ ಅಂಗರಗಟ್ಟಿ.ಪರಮೇಶ ದೊಡ್ಮನಿ.ಹಾಗೂ ಅನೇಕ ರೈತರು ಉಪಸ್ಥಿತರಿದ್ದರು