ಮೃತರ ಇಚ್ಛೆಯಂತೆ ದೇಹದಾನ ಮಾಡಿದ ಕುಟುಂಬ

ಮೃತರ ಇಚ್ಛೆಯಂತೆ ದೇಹದಾನ ಮಾಡಿದ ಕುಟುಂಬ  Family donates body in accordance with the deceased's wishes


ವಿಜಯಪುರ ಸೆ.22: ದೇಹದಾನದ ಮಹತ್ವದ ಕುರಿತು ಜನರಲ್ಲಿ ಜಾಗೃತಿ ಹೆಚ್ಚುತ್ತಿರುವ ಸಂದರ್ಭದಲ್ಲಿ, ನಿವೃತ್ತ ಪ್ರಾಂಶುಪಾಲ ಸಿದ್ದಣ್ಣ ಶಿವಪ್ಪ ಕನಮಡಿ (88) ಅವರ ಕುಟುಂಬಸ್ಥರು ಮೃತರ ಇಚ್ಛೆಯಂತೆ ಅವರ ಪಾರ್ಥಿವ ಶರೀರವನ್ನು ಬಿ.ಎಲ್‌.ಡಿ.ಇ ಆಸ್ಪತ್ರೆಗೆ ದಾನ ಮಾಡಿದ್ದಾರೆ.  

ನಗರದ ಚಾಲುಕ್ಯ ನಗರ ನಿವಾಸಿಯಾಗಿದ್ದ ಸಿದ್ದಣ್ಣ ಶಿವಪ್ಪ ಕನಮಡಿ ಅವರು ಬಿ.ಎಲ್‌.ಡಿ.ಇ. ಆರ್ಟ್ಸ ಕಾಲೇಜು ಹಾಗೂ ಮಹಿಳಾ ಕಲಾ ಮಹಾವಿದ್ಯಾಲಯದ ಪ್ರಥಮ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಶನಿವಾರ ನಿಧನರಾದ ಅವರ ಪಾರ್ಥಿವ ಶರೀರವನ್ನು ಕುಟುಂಬಸ್ಥರು ಬಿ.ಎಲ್‌.ಡಿ.ಇ. ಆಸ್ಪತ್ರೆಗೆ ದಾನ ಮಾಡಿದರು.  

ಈ ಸಂದರ್ಭದಲ್ಲಿ ಆಸ್ಪತ್ರೆಯ ಅಂಗರಚನಾಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಆರ್‌.ಎಸ್‌. ಬುಲಗೌಡ ಅವರು ಪಾರ್ಥಿವ ಶರೀರವನ್ನು ಸ್ವೀಕರಿಸಿ ಕುಟುಂಬಸ್ಥರಿಗೆ ಕೃತಜ್ಞತೆ ಸಲ್ಲಿಸಿದರು.  ಸಂತಾಪ: ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅವರು ಭಾನುವಾರ ಮೃತರ ಅಂತಿಮ ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.