ವಿಪರಿತ ಚಳಿಗೆ ಜನ ಜೀವನ ಅಸ್ತವ್ಯಸ್ತ
Extreme cold disrupts people's lives
ಲೋಕದರ್ಶನ ವರದಿ
ಮಾಂಜರಿ 11: ಚೀಕೋಡಿ ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಕಳೆದ ವಾರದಿಂದ ವಿಪರಿತ ಚಳಿ ಬೀಸಲಾರಂಭಿಸಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆಯಲ್ಲದೇ ವ್ಯಾಪಾರ ವಹಿವಾಟುಗಳು ಕೂಡಾ ಕುಂಠಿತಗೊಂಡಿವೆ.
16 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಇದರಿಂದ ಜನರು ಮನೆಯಿಂದ ಹೊರ ಬರಲು ಹಿಂದೇಟು ಹಾಕುತ್ತಿದ್ದಾರೆ. ಥಂಡಿ ಹೊಡೆತಕ್ಕೆ ಬೆಳಗಿನ ವ್ಯಾಪಾರ ವಹಿವಾಟುಗಳು ಸ್ಥಗಿತಗೊಂಡಿದ್ದು, ಇದರಿಂದ ವ್ಯಾಪಾರಸ್ಥರು ಸ್ವಲ್ಪ ಮಟ್ಟಿಗೆ ನಷ್ಟ ಅನುಭವಿಸುತ್ತಿರುವ ಚಿತ್ರಣ ಪಟ್ಟಣದಲ್ಲಿ ಕಾಣ ಸಿಗುತ್ತಿದೆ.
ವಿಪರಿತ ಇನ್ನು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಚಳಿಯಿಂದ ತೀವ್ರ ತೊಂದರೆಯನ್ನು ಅನುಭವಿಸುತ್ತಿದ್ದು, ಬೆಳಗ್ಗೆ ಮನೆಯಿಂದ ಹೊರಟು ಬಸ್ ನಿಲ್ದಾಣ ಅಥವಾ ತಮ್ಮ ಶಾಲಾ ಕಾಲೇಜುಗಳನ್ನು ಮುಟ್ಟು ವಷ್ಟರಲ್ಲಿ ಮೈ ನಡುಕ ಆರಂಭಗೊಂಡಿರುತ್ತದೆ. ಆ ಪ್ರಮಾಣದಲ್ಲಿ ತಾಪಮಾನ ಕುಸಿದಿದೆ.
ತಾಲೂಕಿನಲ್ಲಿ ಕಡಲೆ ಬೆಳೆಯು ಅತ್ಯಂತ ಪ್ರಮುಖವಾಗಿದೆ. ಇಷ್ಟೊಂದು ಚಳಿಯಿದ್ದರೂ ಕೂಡ ರೈತರು ಕೃಷಿ ಕೂಲಿ ಕಾರ್ಮಿಕರ ಜೊತೆಗೆ ತೆರಳಿ ಕಡಲೆ ಬೆಳೆಗೆ ಕ್ರಿಮಿನಾಶಕ ಸಿಂಪರಣೆಯಲ್ಲಿ ತೊಡಗಿಕೊಂಡಿದ್ದಾರೆ. ಮುಖ್ಯವಾಗಿ ಕಡಲೆ ಬೆಳೆಯೂ ಹುಳಿಯ ರೂಪ ಹೊಂದಿದ್ದರಿಂದ ಮಧ್ಯಾಹ್ನದ ವೇಳೆಗೆ ಬೆಳೆಯಲ್ಲಿ ಅಡಕವಾಗಿರುವ ಕಸವನ್ನು ತೆಗೆಯಲು ಬರುವುದಿಲ್ಲ. ಹೀಗಾಗಿ ರೈತರು ಬೆಳಗಿನ ಜಾವವೇ ಕೃಷಿ ಕಾಯಕದಲ್ಲಿ ತೊಡಗಿಕೊಳ್ಳಬೇಕಾದ ಅನಿವಾರ್ಯತೆಯಿದೆ.
ಕಡಲೆ ಬೆಳೆಗೆ ಈ ಚಳಿ ಉತ್ತಮ
ಈ ಚಳಿ ಮನುಷ್ಯನಿಗೆ ಒಳ್ಳೆಯದಲ್ಲ. ಮನುಷ್ಯ ನನ್ನ ರೋಗಕ್ಕೆ ತುತ್ತಮಾಡುತ್ತದೆ. ಇನ್ನು ಕಡಲೆ ಬೆಳೆಗೆ ಈ ಚಳಿ ಉತ್ತಮ. ಹಿಂಗಾರು ಬೆಳೆ ಕೇವಲ ವಾತಾವರಣದ ಮೇಲೆ ಬರುವ ಬೆಳೆ ಆಗಿದ್ದರ ಪರಿಣಾಮ ಅನುಕೂಲ ಎನ್ನುತ್ತಾರೆ ರೈತ ಸಾಗರ್ ಘಾಟಿಗೆ ಅವರು.
ವಿಪರೀತ ಈ ರೀತಿಯ ಥಂಡಿನಾ ಥಂಡಿ ನಾವು ನೋಡಿರಲಿಲ್ಲ.
ನಾಲ್ಕಾರು ದಿನದಿಂದ ವಿಪರೀತ ಥಂಡಿ ಬಿದ್ದಿದೆ. ಬೆಳಗ್ಗೆ ಬೇಗ ಎದ್ದು ಕಾಲೇಜಿಗೆ ಹೊಗಬೇಕು. ಮನೆಯಿಂದ ಬಸ್ ನಿಲ್ದಾಣಕ್ಕೆ ಬರುವಷ್ಟರಲ್ಲಿ ಸಾಕಾಗಿ ಹೋಗುತ್ತಿದೆ ಎಂದು ವಿದ್ಯಾರ್ಥಿಗಳು ಹೇಳುತ್ತಿದ್ದಾರೆ.
ಈ ಬಾರಿ ಚಳಿ ಪ್ರಮಾಣ ಹೆಚ್ಚಾಗಿದೆ. ನಾಗರಿಕರು ಸ್ಟೇಟರ್, ಟೋಪಿ, ಕೈ ಕವಚದಂತಹ ವಸ್ತುಗಳನ್ನು ಬಳಸಬೇಕು. ಇನ್ನು ಬೆಚ್ಚಗಿನ ನೀರನ್ನು ಬಳಕೆ ಮಾಡುವುದು ಉತ್ತಮ. ಚಳಿ ಪ್ರಮಾಣ ಕಡಿಮೆಯಾದಾಗ ಮಾತ್ರ ಚಿಕ್ಕ ಮಕ್ಕಳನ್ನು ಹೊರಗಡೆ ಬಿಡುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.
ಡಾ. ರೋಹನ್ ಪಾಟೀಲ್ ವೈದ್ಯಾ
ಮಾಂಜರಿ
ಅತಿಯಾದ ಶೀತಗಾಳಿಯಿಂದ ಸಾರ್ವಜನಿಕರ ಆರೋಗ್ಯದಲ್ಲಿ ಏರುಪೇರು ಶೀತ, ನೆಗಡಿ, ಕೆಮ್ಮಿನಿಂದ ಬಳಲುತ್ತಿರುವ ಚಿಕ್ಕ ಮಕ್ಕಳು
ಬೆಳಗಿನ ಜಾವಾ ಅನ್ಯ ಊರುಗಳಿಗೆ ತೆರಳಬೇಕಾದ ಪ್ರಯಾಣಿಕರು ಅಥವಾ ವಿದ್ಯಾರ್ಥಿಗಳು ರಸ್ತೆ ಪಕ್ಕದಲ್ಲಿ ಹಾಕಿದ ಉರಿಯ ಬಳಿ ನಿಂತು ಮೈ ಬೆಚ್ಚಗೆ ಮಾಡಿಕೊಳ್ಳುವ ದೃಶ್ಯಗಳು ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಸಾಮಾನ್ಯ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 