ಮಾಜಿ ಸೈನಿಕರ ಜಿಲ್ಲಾ ಘಟಕದ ವತಿಯಿಂದ ಶಾಸಕ ರಾಘವೆಂದ್ರ ಹಿಟ್ನಾಳರವರ ಸ್ವಗೃಹದಲ್ಲಿ ಅವರ 47ನೇ ಜನ್ಮದಿನಾಚರಣೆ

ಮಾಜಿ ಸೈನಿಕರ ಜಿಲ್ಲಾ ಘಟಕದ ವತಿಯಿಂದ ಶಾಸಕ ರಾಘವೆಂದ್ರ ಹಿಟ್ನಾಳರವರ ಸ್ವಗೃಹದಲ್ಲಿ ಅವರ 47ನೇ ಜನ್ಮದಿನಾಚರಣೆ Ex-Servicemen District Unit celebrates MLA Raghavendra Hitnal's 47th birthday at his home

ಲೋಕದರ್ಶನ ವರದಿ

ಕೊಪ್ಪಳ 20 : ಕೊಪ್ಪಳ ಜಿಲ್ಲಾ ಮಾಜಿ ಸೈನಿಕರ ಸಂಘದ ಶ್ರೇಯೋಭಿವೃದ್ಧಿಗಾಗಿ ನಗರಕ್ಕೆ ಹತ್ತಿರದ ಚುಕನಕಲ್ಲ ಗ್ರಾಮದಲ್ಲಿ ಎರಡು ಎಕರೆ ಜಮೀನು ಸರ್ವೆ ನಂಬರ್ 452ರಲ್ಲಿ ಇತ್ತೀಚೆಗೆ ಜಿಲ್ಲಾ ಆಡಳಿತದಿಂದ ಮುಂಜೂರು ಮಾಡಲಾಗಿದ್ದು. ಈ ಜಾಗದಲ್ಲಿ ನಿವೃತ್ತ ಜಿಲ್ಲಾ ಮಾಜಿ ಸೈನಿಕರ ಹಾಗೂ ಉಪನಿದೇರ್ಶಕರ ಕಾರ್ಯಾಲಯ, ಸಿ.ಎಸ್‌.ಡಿ ಕ್ಯಾಂಟೀನ್, ಮಾಜಿ ಸೈನಿಕರಿಗೆ ಆಸ್ಪತ್ರೆ ಸೇರಿದಂತೆ ಇತರೆ ಚಟುವಟಿಕೆಗಳಿಗಾಗಿ ನಿವೇಶನವನ್ನು ಮುಂಜೂರಾತಿಗೆ ಸಹಕಾರ ಮಾಡಿರುವ ಶಾಸಕ ರಾಘವೇಂದ್ರ ಹಿಟ್ನಾಳ ರವರಿಗೆ ಮಾಜಿ ಸೈನಿಕರ ಸಂಘದಿಂದ ಅಭಿನಂದನೆ ಸಲ್ಲಿಸಲಾಯಿತು. 

ಈ ನಿವೇಶನದ ಮುಂಜೂರಾತಿಗಾಗಿ ಸಂಸದರಾದ ರಾಜಶೇಖರ ಹಿಟ್ನಾಳ, ಜಿಲ್ಲಾಧಿಕಾರಿಗಳಾದ ಸುರೇಶ ಹಿಟ್ನಾಳ, ಸಹಾಯಕ ಆಯುಕ್ತರಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿರವರು, ತಹಶೀಲ್ದಾರ ವಿಠ್ಠಲ ಚೌಗಲೆ, ನಿವೃತ್ತ ಮಾಜಿ ಸೈನಿಕರ ಕಲ್ಯಾಣಕ್ಕಾಗಿ ಶ್ರಮವಹಿಸಿದ್ದು ಮುಂದೆ ಈ ಮೇಲಿನೆ ಚಟುವಟಕೆಗಳಿಗಾಗಿ ಅನುದಾನವನ್ನು ಬಿಡುಗಡೆ ಮಾಡುವುದಾಗಿ ಶಾಸಕ ರಾಘವೇಂದ್ರ ಹಿಟ್ನಾಳರವರು ಭರವಸೆ ನೀಡಿದ್ದು ಮಾಜಿ ಸೈನಿಕರ ಬಹುದಿನದ ನೀರೀಕ್ಷೆ ಸಾಕಾರಗೊಳ್ಳುವ ಹಂತದಲ್ಲಿದ್ದು ಇದಕ್ಕೆ ಮಾರುತಿ ಗೊಂದಿ ಅಧ್ಯಕ್ಷರು ನಿವೃತ್ತ ಮಾಜಿ ಸೈನಿಕರ ಸಂಘ, ಜಿಲ್ಲಾ ಘಟಕ ಹರ್ಷ ವ್ಯಕ್ತಪಡಿಸಿದ್ದಾರೆ.  

ಮಾಜಿ ಸೈನಿಕರ ಜಿಲ್ಲಾ ಘಟಕದ ವತಿಯಿಂದ ಶಾಸಕ ರಾಘವೆಂದ್ರ ಹಿಟ್ನಾಳರವರ ಸ್ವಗೃಹದಲ್ಲಿ ಅವರ 47ನೇ ಜನ್ಮದಿನಾಚಣೆಯನ್ನು ಅವರಿಂದ ಕೇಕ್ ಕತ್ತರಿಸುವ ಮೂಲಕ ಆಚರಿಸಿ ಶಾಸಕರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಸೈನಿಕರ ಕಟ್ಟಡ ಮತ್ತು ಇತರ ಮೂಲಭೂತ ಸೌಕರ್ಯಗಳಿಗಾಗಿ ಶೀಘ್ರವಾಗಿ ಅನುದಾನವನ್ನು ಬಿಡುಗಡೆ ಮಾಡುವ ಭರವಸೆಯನ್ನು ಶಾಸಕರು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾಜಿ ಸೈನಿಕರ ಸಂಘದ ಅಧ್ಯಕ್ಷರಾದ ಮಾರುತಿ ಗೊಂದಿ, ಪ್ರಧಾನ ಕಾರ್ಯದರ್ಶಿ ನಿಂಗಪ್ಪ ಗಾಣಿಗೇರ, ಪದಾಧಿಕಾರಿಗಳಾದ ಶಿವಾನಂದ ಪೂಜಾರ, ವಾಸಪ್ಪ ಚೆಲ್ಲಾ, ಹೇಮಂತಪ್ಪ ಆರೇರ, ಬಸವರಾಜ ಮಠದ, ಇಂದುಧರ ಸೊಪ್ಪಿಮಠ, ಶ್ರೀಮತಿ ಬಸಮ್ಮ ಕುರ್ಲಿ, ಜಯಶ್ರೀ ಚನ್ನಳ್ಳಿ ಹಾಗೂ ಸರ್ವ ಸದಸ್ಯರು, ಮಾಜಿ ಸೈನಿಕರ ಸಂಘದ ವೀರನಾರಿಯರು ಉಪಸ್ಥಿರಿದ್ದರು.