ಪ್ರಕೃತಿ, ಯೋಗ, ಸಾಧನದಿಂದ ಸರ್ವವೂ ಸಾಧ್ಯವಿದೆ : ಅದೃಶ್ಯ ಕಾಡಸಿದ್ಧೇಶ್ವರರು
Everything is possible through nature, yoga, and spiritual practice: Adrushya Kadasiddheshwara
ಲೋಕದರ್ಶನ ವರದಿ
ರಬಕವಿ-ಬನಹಟ್ಟಿ 27: ನಿಸರ್ಗದಲ್ಲಿ ಸರ್ವ ರೋಗಗಳಿಗೂ ಅದರದ್ದೇ ಆದ ಉಪಶಮನ ಕ್ರಮಗಳಿವೆ. ಅವುಗಳನ್ನು ಅರಿತು, ಕ್ರಮಬದ್ಧವಾಗಿ ಅಳವಡಿಕೆ ಮಾಡಿಕೊಂಡಲ್ಲಿ ಎಂತದೇ ದೈಹಿಕ ಸಮಸ್ಯೆಗಳಿಂದ ಮುಕ್ತರಾಗಲು ಸಾಧ್ಯವಿದೆ. ಪ್ರಕೃತಿ, ಯೋಗ, ಸಾಧನಗಳನ್ನು ಅಳವಡಿಸಿಕೊಂಡರೆ ಯಾವುದೇ ತರಹದ ಖಾಲೆಗಳಿಂದ ಮುಕ್ತರಾಗಿರಬಹುದು. ಬನಹಟ್ಟಿಯಲ್ಲಿ ಸುಸಜ್ಜಿತ ನಿಸರ್ಗ ಚಿಕಿತ್ಸಾ ಆರೋಗ್ಯ ಕೇಂದ್ರ ಸ್ಥಾಪನೆಯಾಗುತ್ತಿರುವುದು ಈ ಭಾಗದ ಜನತೆಗೆ ವರದಾನವಾಗಿದೆ ಎಂದು ಕನ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಶ್ರೀಗಳು ನುಡಿದರು.
ವೈದ್ಯಕೀಯ ಕ್ಷೇತ್ರದಲ್ಲಿ ನುರಿತ ವೈದ್ಯರಾಗುವ ಕನಸು ಹೊತ್ತ ವಿದ್ಯಾರ್ಥಿಗಳು ಇದೇ ಶೈಕ್ಷಣಿಕ ವರ್ಷದಲ್ಲಿ ಆರಂಭವಾಗುತ್ತಿರುವ ಸುಶೀಲಾದೇವಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ವೈದ್ಯಕೀಯ ಕಾಲೇಜಲ್ಲಿ ಪ್ರವೇಶಾತಿ ಪಡೆದು ಸಮಾಜಕ್ಕೆ ಸೇವೆಸಲ್ಲಿಸುವ ವೈದ್ಯರಾಗಬೇಕು. ಹಾಳು ಮೂಳು ತಿನ್ನುವುದನ್ನು ನಿಲ್ಲಿಸಿ, ಮನೆಯಲ್ಲೇ ತಯಾರಿಸಿದ ಪಾರಂಪರಿಕ ಆಹಾರ ಸೇವಿಸುವುದರಿಂದ ಅರ್ಧ ರೋಗ ತಡೆಗಟ್ಟಲು ಸಾಧ್ಯ.
ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಪದ್ಧತಿ ಇಡೀ ವಿಶ್ವಕ್ಕೆ ಭಾರತ ನೀಡಿದ ಹೆಮ್ಮೆಯ ಕೊಡುಗೆಯಾಗಿದ್ದು, ಪ್ರಸಕ್ತ ದಿನಗಳಲ್ಲಿ ಪಾಶ್ಚಾತ್ಯರು ಯಾವುದೇ ಅಡ್ಡ ಪರಿಣಾಮಗಳಿಲ್ಲದ ನಿಸರ್ಗ ಚಿಕತ್ಸೆಯತ್ತ ಚಿತ್ತ ಹರಿಸುತ್ತಿದ್ದು, ವಿಶ್ವದೆಲ್ಲೆಡೆ ನಮ್ಮ ಸನಾತನ ಚಿಕಿತ್ಸಾ ಪದ್ಧತಿ ಜನಪ್ರೀಯವಾಗಿದೆ. ನಾವು ನಮ್ಮತನ ಕಳೆದುಕೊಳ್ಳದೇ ಪ್ರಾಚೀನ ವೈದ್ಯಕೀಯ ಪದ್ಧತಿಯ ಬಳಕೆ ಮಾಡಿಕೊಂಡು ಸದೃಢರಾಗಬೇಕೆಂದು ಕರೆ ನೀಡಿದರು.
ಶಾಸಕ ಸಿದ್ದು ಸವದಿ ವೈದ್ರಾಗಬೇಕೆಂ ಕನಸು ಹೊತ್ತ ಯುವ ಪೀಳಿಗೆಗೆ ನೆರವಾಗುವತ್ತ ಇದೇ ಶೈಕ್ಷಣಿಕ ವರ್ಷದಿಂದ ಆರಂಭಗೊಳ್ಳುತ್ತಿರುವ ಮಹಾವಿದ್ಯಾಲಯಕ್ಕೆ ಪ್ರವೇಶಾತಿ ಮಾಡಿಕೊಂಡು ನಿಮ್ಮ ಕನಸು ನನಸಾಗಿಸಿಕೊಳ್ಳಿ ಎಂದರು. ನಿಸರ್ಗ ವಿರುದ್ಧದ ನಮ್ಮ ಜೀವನಕ್ರಮ ಬದಲಿಸಿಕೊಂಡು ನಿಸರ್ಗದತ್ತ ಕ್ರಮಗಳಲ್ಲೇ ಬದುಕಿದರೆ ಯಾವ ರೋಗಗಳಿಗೂ ಬಲಿಯಾಗುವುದಿಲ್ಲ. ಡಾ.ಪರಶುರಾಮ ರಾವಳ ನಮ್ಮ ಪ್ರದೇಶದ ಜನತೆಗೆ ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಪ್ರಾರಂಭಿಸಿರುವುದು ಈ ಭಾಗದ ಜನತೆಗೆ ವರವಾಗಿದೆಯೆಂದರು.
ಉದ್ಘಾಟನಾ ಸಮಾರಂಭದಲ್ಲಿ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪರಶುರಾಮ ರಾವಳ, ಪೂನಂ ರಾವಳ, ಚಿತ್ರನಟ, ನಿರ್ದೇಶಕ ಮಹೇಶ ರಾವಳ, ಲತಾ ಪರಶುರಾಮ ರಾವಳ, ನಂದಕುಮಾರ ರಾವಳ, ಮಹಾವಿದ್ಯಾಲಯದ ವ್ಯವಸ್ಥಾಪಕ ವಿಜಯಕುಮಾರ ನಿಂಬರಗಿ, ಶ್ರೀದೇವಿ ಮಿಣಜಗಿ ಹಾಗೂ ಆಸ್ಪತ್ರೆಯ ಎಲ್ಲ ಸಿಬ್ಬಂದಿಗಳಿದ್ದರು.
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ
ನೀಟ್: ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ, ಮೃತ ವಿದ್ಯಾರ್ಥಿಗಳ ಆತ್ಮಕ್ಕೆ ಶಾಂತಿ ಕೋರಿ ಕ್ಯಾಂಡಲ್ ಪ್ರತಿಭಟನೆ
1991ರ ಆರ್ಥಿಕ ಸುಧಾರಣೆಗಳನ್ನು ಶ್ಲಾಘಿಸಿದ ಖರ್ಗೆ; ಸಮಗ್ರ ಅಭಿವೃದ್ಧಿಗೆ ಎರಡನೇ ಹಂತದ ಉದಾರೀಕರಣಕ್ಕೆ ಕರೆ 