ಅಪೂರ್ಣ ಕಟ್ಟಡ ಪೂರ್ಣಗೊಳಿಸಲು ಪ್ರತಿಯೊಬ್ಬರ ಸಹಕಾರ ಅಗತ್ಯ-ಪಟೇಲ್
Everyone's cooperation is needed to complete the unfinished building - Patel
ಕೊಪ್ಪಳ 16: ಅಪೂರ್ಣಗೊಂಡಿರುವ ಮಸೀದಿ ಕಟ್ಟಡ ಪೂರ್ಣಗೊಳಿಸಿ ಇಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಸಮಾಜದ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ ಎಂದು ಸಮಾಜದ ಹಿರಿಯ ಮುಖಂಡ ಹಾಗೂ ಕೊಪ್ಪಳ ನಗರಸಭೆಯ ಮಾಜಿ ಅಧ್ಯಕ್ಷ ಅಮ್ಜದ್ ಪಟೇಲ್ ಅಭಿಪ್ರಾಯಪಟ್ಟರು ,ಅವರು ಶನಿವಾರ ನಗರದ ಕಿನ್ನಾಳ ರಸ್ತೆ ಯಲ್ಲಿರುವ ಖಬರ್ ಸ್ಥಾನ ಆಡಳಿತ ಮಂಡಳಿ ಸಮಿತಿ ಸದಸ್ಯರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ ಸರ್ಕಾರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ವಕ್ಫ್ ಇಲಾಖೆಯ ಅನುದಾನ ಪಡೆಯಲು ಸಂಬಂಧಿಸಿದ ಇಲಾಖೆಯ ಸಚಿವ ಜಮೀರ್ ಅಹ್ಮದ್ ಖಾನ್ ರವರಿಗೆ ಮತ್ತು ಸ್ಥಳೀಯ ಶಾಸಕರಾದ ಕೆ ರಾಘವೇಂದ್ರ ಹಿಟ್ನಾಳ ರವರಿಗೆ ಮನವರಿಕೆ ಮಾಡಿ ಅವರಿಂದ ವಿಶೇಷ ಅನುದಾನ ಪಡೆದು ಆದಷ್ಟು ಬೇಗನೆ ಅಪೂರ್ಣಗೊಂಡಿರುವ ಮಸೀದಿ ಕಟ್ಟಡ ಪೂರ್ಣಗೊಳಿಸಿ ಬಳಿಕ ಇಲ್ಲಿ ಕಾಂಪೌಂಡ್ ಗೋಡೆಗೆ ವಾಣಿಜ್ಯ ಸಂಕೀರ್ಣ ನಿರ್ಮಿಸಿ ಅಭಿವೃದ್ದಿ ಪಡಿಸಲು ಎಲ್ಲರೂ ಶ್ರಮಿಸೋಣ ಇದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಅದರ ತಕ್ಕಂತೆ ನಾವೆಲ್ಲರೂ ಕಾರ್ಯ ಮಾಡೋಣ ಶ್ರಮಿಸೋಣ ಎಂದು ಸಮಾಜದ ಹಿರಿಯ ಮುಖಂಡ ಹಾಗೂ ಕೊಪ್ಪಳ ನಗರಸಭೆಯ ಮಾಜಿ ಅಧ್ಯಕ್ಷ ಅಮ್ಜದ್ ಪಟೇಲ್ ಹೇಳಿದರು, ಸಭೆಯಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷರು ಹಾಗೂ ಕೊಪ್ಪಳ ನಗರ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸೈಯದ್ ಜುಲ್ಲು ಖಾದರ್ ಖಾದ್ರಿ ರವರು ವಹಿಸಿದ್ದರು, ಸದರಿ ಸಭೆಯಲ್ಲಿ ಎಂ ಮಾನ್ವಿ ಪಾಶಾ, ಖಾದರ್ ಸಾಬ್ ಕುದುರೆಮೋತಿ, ಮುನೀರ್ ಸಿದ್ದಿಕೀ ,ಆದಿಲ್ ಪಟೇಲ್ ಸೇರಿದಂತೆ ಗೌಸ್ ಸಾಬ್ ಸರದಾರ ಅಲ್ಲದೆ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು,
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 