ಗುರುವಿನ ಕೋಪ ಕಠಿಣ ವಾದಾರು ಅದರ ಫಲ ಅಮೂಲ್ಯವಾಗಿರುತ್ತದೆ : ಮೀನಾಕ್ಷಿ ಬಣ್ಣದ ಭಾವಿ
Even if a Guru's anger is harsh, its outcome is invaluable. — Meenakshi Bannada Bhavi
ಕೊಪ್ಪಳ 08: ತಂದೆಯ ಕೋಪ ತಾತ್ಕಾಲಿಕ ಆದರೆ ಅದರ ಪಾಠ ಶಾಶ್ವತ, ತಾಯಿಯ ಕೋಪ ಕ್ಷಣಿಕ ಆದರೆ ಅದರ ಪ್ರೀತಿ ಅನಂತ, ಅದೇ ರೀತಿ ಗುರುವಿನ ಕೋಪ ಕಠಿಣ ವಾದರೂ ಅದರ ಫಲ ಮಾತ್ರ ಅಮೂಲ್ಯವಾಗಿರುತ್ತದೆ ಎಂದು ಕೊಪ್ಪಳ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರಾದ ಮೀನಾಕ್ಷಿ ಬಣ್ಣದ ಭಾವಿ ಹೇಳಿದರು,
ಅವರು ನಗರದ ನಿರ್ಮಿತಿ ಕೇಂದ್ರದ ಬಡಾವಣೆಯಲ್ಲಿರುವ ಮಿಲ್ಲತ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ಅಲ್ಪಸಂಖ್ಯಾತ ಸಮುದಾಯದ ಪಬ್ಲಿಕ್ ಶಾಲೆ ಯಲ್ಲಿ ಏರಿ್ಡಸಿದ ಶಿಕ್ಷಕರ ದಿನಾಚರಣೆ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದರು,
ಮುಂದುವರೆದು ಮಾತನಾಡಿ ಅಹಂಕಾರಿ ಆದವನಿಗೆ ವಿದ್ಯೆಯು ಭಾರ ವಾದರೆ ,ವಿನಯ ಇರುವ ವ್ಯಕ್ತಿಗೆ ವಿದ್ಯೆ ಆಭರಣ ವಾಗಿರುತ್ತದೆ, ಶಿಕ್ಷಕ ಕೇವಲ ಶಿಕ್ಷಕರಲ್ಲ ನಮ್ಮ ಬೆಳಕು, ನಮ್ಮ ದಾರಿ, ನಮ್ಮ ಪ್ರೇರಣೆ ಕೂಡ ಹೌದು ಎಂದ ಅವರು ಗುರುಗಳ ಸೇವೆ ಸ್ಮರಣೀಯ ವಾಗಿದೆ, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿರುತ್ತದೆ,
ಶಿಕ್ಷಕ ಕೇವಲ ಪಾಠ ಬೋಧಿಸುವುದಷ್ಟೇ ಅಲ್ಲ ಉತ್ತಮ ವ್ಯಕ್ತಿತ್ವ ನಿರ್ಮಾಣ ಮಾಡುವ ಮಾರ್ಗದರ್ಶಕ ಕೂಡ ಆಗಿರುತ್ತಾರೆ ,ಶಿಕ್ಷಕರೇ ಉತ್ತಮ ಸಮಾಜ ನಿರ್ಮಾಣ ಮಾಡುವ ನಿರ್ಮಾಪಕರು ,ಅವರೆಲ್ಲರೂ ತೋರಿದ ಮಾರ್ಗದಲ್ಲಿ ನಾವುಗಳು ನಮ್ಮ ನಮ್ಮ ಬದುಕು ಕಟ್ಟಿಕೊಳ್ಳಬೇಕು ಎಂದು ಕೊಪ್ಪಳ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರಾದ ಮೀನಾಕ್ಷಿ ಬಣ್ಣದ ಭಾವಿ ಅಭಿಪ್ರಾಯ ಪಟ್ಟರು,
ಇದೆ ವೇಳೆ ಮಿಲ್ಲತ್ ಶಾಲೆಯ ಆರಂಭ ಸಂದರ್ಭ ದಲ್ಲಿನ ್ರ್ರಥಮ ಸಹ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದ ಅಜ್ಮೇರಿ ಬೇಗಂ ರೈಸ್ ರವರು ವಿಶೇಷ ಆಮಂತ್ರಿಕರಾಗಿ ಪಾಲ್ಗೊಂಡು ಸಂಸ್ಥೆ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ ಇಂದಿನ ಮಕ್ಕಳೇ ಈ ನಾಡಿನ ಭಾವಿ ಪ್ರಜೆಗಳಾಗಿದ್ದು ಮಕ್ಕಳ ಭವಿಷ್ಯ ಉಜ್ವಲ ಗೊಳಿಸುವ ಹೊಣೆಗಾರಿಕೆ ಶಿಕ್ಷಕರ ಮೇಲೆ ಇದೆ ಎಂದು ಹೇಳಿದರು,
ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಸೈಯದ್ ಗೌಸ್ ಪಾಷಾ ಖಾಜಿ ರವರು ವಹಿಸಿದ್ದರು ,ಆಡಳಿತ ಮಂಡಳಿ ಸದಸ್ಯ ಹಾಗೂ ಹಿರಿಯ ಪತ್ರಕರ್ತ ಎಂ ಸಾಧಿಕ್ ಅಲಿ ಪ್ರಾಸ್ತಾವಿಕವಾಗಿ ಮಾತನಾಡಿದರು ,
ಇದೆ ವೇಳೆ ಅತಿಥಿಗಳಿಗೆ ಶಾಲೆಯ ಪರವಾಗಿ ಸನ್ಮಾನಿಸಲಾಯಿತು. ಶಾಲೆಯ ಮುಖ್ಯ ಶಿಕ್ಷಕ ಮೊಹಮ್ಮದ್ ಅಜೀಜ್ ರೆವಡಿ ರವರು ಆರಂಭದಲ್ಲಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು, ಶಾಲೆಯ ಸಹ ಶಿಕ್ಷಕರು ವಿದ್ಯಾರ್ಥಿ ವೃಂದದವರು ಮತ್ತು ಪಾಲಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು,
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 