ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ:ರೋಶನ ಡೋಣಿ
Environmental protection is everyone's responsibility: Roshan Doni
ತಾಳಿಕೋಟಿ 05: ಪ್ರಕೃತಿ ನಮಗೆ ಬದುಕಲು ಎಲ್ಲವನ್ನು ಉಚಿತವಾಗಿ ನೀಡಿದೆ. ಆದರೆ ನಾವು ಪ್ರಕೃತಿಗೆ ಕಸ ಕಡ್ಡಿ ವಿಷಕಾರಿ ಗಾಳಿ ಮತ್ತು ಮಾಲಿನ್ಯವನ್ನೇ ನೀಡುತ್ತಿದ್ದೇವೆ ಇದು ನಿಲ್ಲಬೇಕು ಪರಿಸರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ನಿವೃತ್ತ ಶಿಕ್ಷಕ ರೋಷನ ಡೋಣಿ ಹೇಳಿದರು. ಪಟ್ಟಣದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಸ್ಥಳೀಯ ಜಮಾತೆ ಇಸ್ಲಾಮಿ ಹಿಂದ್ ಸಂಘಟನೆ ಹಾಗೂ ಹಸಿರು ಸಂಪದ ಬಳಗ ಇವರ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡ ಪರಿಸರ ಜಾಗೃತಿ ಜಾಥಾದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಪರಿಸರ ಎಂದರೆ ಕೇವಲ ಕಾಡು ಮೇಡುಗಳಲ್ಲ ನಾವು ಉಸಿರಾಡುವ ಗಾಳಿ ಕುಡಿಯುವ ನೀರು ವಾಸಿಸುವ ಭೂಮಿ ಇವೆಲ್ಲವೂ ಪರಿಸರವೇ ಆಗಿದೆ.
ಇವತ್ತು ನಾವು ಅತಿಯಾದ ಪ್ಲಾಸ್ಟಿಕ್ ಬಳಕೆ ಜೊತೆಗೆ ವಿಷಕಾರಿ ಗುಟ್ಕಾ ತಿಂದು ಎಲ್ಲೆಂದರಲ್ಲಿ ಉಗಿಯುವುದರಿಂದ ಪರಿಸರಕ್ಕೆ ಹಾನಿಯಾಗುತ್ತಿದೆ ಇದನ್ನು ತಡೆಯಲು ನಾವು ಸ್ವತಃ ನಮ್ಮಿಂದಲೇ ಈ ಕೆಲಸವನ್ನು ಆರಂಭಿಸಬೇಕಾಗಿದೆ ಎಂದರು. ಹಸಿರು ಸಂಪದ ಬಳಗದ ಸದಸ್ಯ ಗುಂಡೂರಾವ್ ಧನಪಾಲ ಮಾತನಾಡಿ ನಮಗೆ ಸೌರಮಂಡಲದಲ್ಲಿ ವಾಸಿಸಲು ಇರುವ ಏಕೈಕ ಗ್ರಹ ಅದು ಭೂಮಿಯಾಗಿದೆ. ಇದರ ಮೇಲೆ ಜೀವಿಸುವ ಜೀವಿಗಳು ಚೆನ್ನಾಗಿ ಬದುಕಬೇಕೆಂದರೆ ಅವರ ಸುತ್ತಮುತ್ತಲಿನ ಪರಿಸರ ಹಸಿರಾಗಿರಬೇಕು ಆದರೆ ಇಂದು ನೈಸರ್ಗಿಕ ವಿಕೋಪ ಹಾಗೂ ಯುದ್ಧಗಳಿಂದ ಪರಿಸರ ನಾಶವಾಗುತ್ತಿದ್ದರೆ ಇನ್ನೊಂದು ಕಡೆ ಮನುಷ್ಯನ ಅತಿಯಾದ ಆಸೆಯಿಂದಾಗಿ ಪರಿಸರ ದಿನದಿಂದ ದಿನೆ ನಾಶವಾಗುತ್ತಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 