ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ: ಗಜಾನನ ಮಂಗಸೂಳಿ
Environmental protection is everyone's responsibility: Gajanana Mangasuli
ಅಥಣಿ 11: ಅಥಣಿ ಪರಿಸರ ಸಂರಕ್ಷಣೆಯ ಹಿತ ದೃಷ್ಟಿಯಿಂದ ಪಟ್ಟಣದ ಹೊರವಲಯದ ಜ್ಯೋತಿಬಾ ದೇವಸ್ಥಾನದ ಆವರಣದಲ್ಲಿ ರೋಟರಿ ಉದ್ಯಾನವನ ಸ್ಥಾಪನೆ ಮಾಡುವ ಮೂಲಕ ಇಲ್ಲಿ 350ಕ್ಕೂ ಅಧಿಕ ವಿವಿಧ ಜಾತಿಯ ಗಿಡಗಳನ್ನು ಸಂರಕ್ಷಣೆ ಮಾಡುವ ಸಂಕಲ್ಪ ಹೊಂದಲಾಗಿದೆ ಎಂದು ರೋಟರಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಗಜಾನನ ಮಂಗಸೂಳಿ ಹೇಳಿದರು.
ಅವರು ಪಟ್ಟಣದ ಹೊರವಲಯದ ಅಬ್ಬಿಹಾಳ ರಸ್ತೆಯಲ್ಲಿರುವ ಜ್ಯೋತಿಬಾ ದೇವಸ್ಥಾನದ ಗುಡ್ಡದಲ್ಲಿ ರೋಟರಿ ಉದ್ಯಾನವನ ನಾಮಕರಣ ಹಾಗೂ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಮುಂದಿನ ಪೀಳಿಗೆಗೆ ಶುದ್ಧವಾದ ಗಾಳಿ ಮತ್ತು ನೀರು ದೊರಕಬೇಕಾದರೆ ಪರಿಸರವನ್ನು ಸಂರಕ್ಷಣೆ ಮಾಡುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದ ಅವರು ನಮ್ಮ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ, ಇಲ್ಲವೇ ತಂದೆ-ತಾಯಿಯ ಸ್ಮರಣೆಯ ಹೆಸರಿನಲ್ಲಿ ಗಿಡಗಳನ್ನು ನೆಟ್ಟು ಅವುಗಳನ್ನ ಪೋಷಿಸಬೇಕು. ಗಿಡಗಳನ್ನು ನೆಡುವುದು ಕೇವಲ ಫೋಟೋ ಕಾರ್ಯಕ್ರಮಕ್ಕೆ ಸೀಮಿತವಾಗದೇ ಅವುಗಳ ಬೆಳವಣಿಗೆಗೂ ಶ್ರಮಿಸಬೇಕು ಎಂದು ರೋಟರಿ ಸದಸ್ಯರಿಗೆ ಸಲಹೆ ನೀಡಿದರು. ಶ್ರೀ ಜ್ಯೋತಿಬಾ ದೇವಸ್ಥಾನದ ಆವರಣದಲ್ಲಿ ಪ್ರಶಾಂತವಾದ ವಾತಾವರಣ ಮತ್ತು ಶುದ್ಧವಾದ ಆಮ್ಲಜನಕ ದೊರಕುವ ಪವಿತ್ರ ಸ್ಥಾನವಾಗಿದೆ. ಇಲ್ಲಿ ಇನ್ನೂ ಭಕ್ತರ ಸಂಖ್ಯೆ ಹೆಚ್ಚಾಗುವ ನಿಟ್ಟಿನಲ್ಲಿ ದೇವಸ್ಥಾನದ ಜೀರ್ಣೋದ್ಧಾರ, ಮಕ್ಕಳ ಆಟಿಕೆ ಸಾಮಗ್ರಿಗಳನ್ನ ಅಳವಡಿಸುವುದು ಅಗತ್ಯವಾಗಿದೆ. ಈಗಾಗಲೇ ದೇವಸ್ಥಾನ ಕಮಿಟಿಯವರ ಅಪೇಕ್ಷೆಯಂತೆ ತಂತಿ ಬೇಲಿಯನ್ನು ರೋಟರಿ ಸಂಸ್ಥೆಯಿಂದ ನಿರ್ಮಿಸಲಾಗಿದ್ದು, ಮುಂಬರುವ ದಿನಗಳಲ್ಲಿ 3 ಲಕ್ಷ ರೂಪಾಯಿ ವೆಚ್ಚದಲ್ಲಿ ಆಟದ ಸಾಮಗ್ರಿಗಳನ್ನು ಅಳವಡಿಸಲಾಗುವುದು ಎಂದ ಅವರು ದೇವಸ್ಥಾನದ ಅಭಿವೃದ್ಧಿ ವಿಚಾರದಲ್ಲಿ ಎಲ್ಲರೂ ಪಕ್ಷಾತೀತ ಮತ್ತು ಜಾತ್ಯಾತೀತವಾಗಿ ಶ್ರಮಿಸೋಣ ಎಂದರು.
ಸಮಾರಂಭದ ಸಾನಿಧ್ಯ ವಹಿಸಿದ್ದ ಶೆಟ್ಟರ ಮಠದ ಮರುಳುಸಿದ್ದ ಸ್ವಾಮೀಜಿ ಮಾತನಾಡಿ, ಕೊರೋನಾ ಸಂದರ್ಭದಲ್ಲಿ ಆಕ್ಸಿಜನ್ ಕೊರತೆಯಿಂದ ಅನೇಕ ಜನರು ಪ್ರಾಣವನ್ನು ಕಳೆದುಕೊಂಡ ಸಂದರ್ಭವನ್ನು ನಾವೆಲ್ಲರೂ ನೋಡಿದ್ದೇವೆ. ಮುಂದಿನ ಜನಾಂಗಕ್ಕೆ ಶುದ್ಧವಾದ ಗಾಳಿ ನೀರು ಆಹಾರ ದೊರಕಬೇಕಾದರೆ ಪ್ರತಿಯೊಬ್ಬರೂ ಗಿಡಮರಗಳನ್ನು ನೆಟ್ಟು ಅವುಗಳನ್ನು ಬೆಳೆಸಬೇಕೆಂದು ಕರೆ ನೀಡಿದರು. ಮುಖಂಡರಾದ ಶಿವಾನಂದ ದಿವಾನಮಳ ಪ್ರಾಸ್ತಾವಿಕವಾಗಿ ಮಾತನಾಡಿ, ದೇವಸ್ಥಾನದ ಆವರಣದಲ್ಲಿ ರೋಟರಿ ಸಂಸ್ಥೆ ಹಾಗೂ ಸಾಮಾಜಿಕ ಅರಣ್ಯ ವಲಯದ ಅಧಿಕಾರಿಗಳ ಮೂಲಕ ವಿವಿಧ ಗಿಡದ ಮರಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಿರುವುದು ಮಹತ್ವದ ಕಾಯಕವಾಗಿದೆ. ರೋಟರಿ ಸಂಸ್ಥೆಗೆ ಹಾಗೂ ಸಾಮಾಜಿಕ ಅರಣ್ಯ ವಲಯದ ಅಧಿಕಾರಿಗಳಿಗೆ ದೇವಸ್ಥಾನ ಅಭಿವೃದ್ಧಿ ಸಮಿತಿ ಸದಸ್ಯರನ್ನು ಅಭಿನಂದಿಸಿದರು. ್ಳ
ಈ ಸಂದರ್ಭದಲ್ಲಿ ರೋಟರಿ ಸಂಸ್ಥೆಯ ಅಧ್ಯಕ್ಷ ಸಚಿನ ದೇಸಾಯಿ, ಇನ್ನರ್ ವ್ಹಿಲ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷೆ ಪೂರ್ಣಿಮಾ ಪಾಂಗಿ, ಇನ್ನರ್ ವ್ಹಿಲ್ ಸಂಸ್ಥೆಯ ಅಧ್ಯಕ್ಷೆ ಸುನೀತಾ ದೇಸಾಯಿ, ಸಾಮಾಜಿಕ ಅರಣ್ಯ ವಲಯ ಅಧಿಕಾರಿ ಪ್ರಶಾಂತ್ ಗೌರಾಣಿ, ಉಪ ವಲಯ ಅರಣ್ಯ ಅಧಿಕಾರಿ ಎಸ್ ಎಂ, ಮುಂಜಿ, ಎ ಬಿ ಕುಂಬಾರ, ದೇವಸ್ಥಾನ ಕಮಿಟಿಯ ಅಧ್ಯಕ್ಷ ಬಸವರಾಜ ಮಾಧಗುಡಿ, ಸುನಿಲ್ ದೇಸಾಯಿ, ಗುರುಲಿಂಗ ಬಾಷಿಂಗಿ, ಬಾಬು ಚಮಕೇರಿ, ಗೀರೀಶ್ ದಿವಾನಮಳ, ಕುಮಾರ ಗೋಟ್ಟಿ, ಸಂದೀಪ ಪಾಟೀಲ, ರೋಟರಿ ಸಂಸ್ಥೆಯ ಸದಸ್ಯರಾದ ಮೇಘರಾಜ ಪರಮಾರ, ಅರುಣ ಸೌದಾಗರ, ಶೇಖರ ಕೋಲಾರ, ಅರುಣ ಯಲಗುದ್ರಿ, ಶ್ರೀಕಾಂತ ಅಥಣಿ, ಡಾ. ಪಿ ಪಿ ಮಿರಜ, ಡಾ. ಆನಂದ ಗುಂಜಿಗಾವಿ, ರಮೇಶ ಬುಲಬುಲೆ, ಸುರೇಶ್ ಬಳ್ಳೊಳ್ಳಿ, ಬಾಹುಬಲಿ ಯಂಡೋಳಿ, ಬಾಹುಬಲಿ ಆಸ್ಕಿ, ಸುನಿಲ್ ದೇಸಾಯಿ, ಅವಿನಾಶ ಜಾದವ, ಡಾ. ಆನಂದ್ ಕುಲಕರ್ಣಿ, ಡಾ. ಸಚಿನ್ ಮಿರಜ, ಬಾಳಪ್ಪಣ್ಣ ಬುಕಿಟಗಾರ, ತೃಪ್ತಿ ಕುಲಕರ್ಣಿ, ಸುಮೇತ ಮಿರಜ, ವೈಶಾಲಿ ಮಠಪತಿ, ಶೋಭಾ ಕೋಲಾರ, ಪ್ರಭಾವತಿ ಬಳ್ಳೊಳ್ಳಿ, ಮಧು ಮಂಗಸುಳಿ, ಭಾರತಿ ಕೋರೆ, ರೂಪಾಲಿ ಆಸ್ಕಿ, ಪದ್ಮಾ ಅಥಣಿ, ರೇಣುಕಾ ಸೌದಾಗರ, ಅರಣ್ಯ ಇಲಾಖೆಯ ವೀಕ್ಷಕ ಸಂಪತ್ ಜಾಧವ, ಶಿವಾಜಿ ಕಾಳೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 