ಜಾತ್ರೆಯ ಯಶಸ್ಸಿಗೆ ಹಿರಿಯರ ಶ್ರಮ: ವಸಂತ ಪಡಗದ

 ಜಾತ್ರೆಯ ಯಶಸ್ಸಿಗೆ ಹಿರಿಯರ ಶ್ರಮ: ವಸಂತ ಪಡಗದ  Elders' efforts behind the fair's success: Vasantha Padagada

ಲೋಕದರ್ಶನ ವರದಿ 

  ಗದಗ  22: ನಗರದ ಗ್ರಾಮ ದೇವಿಯರ ಜಾತ್ರಾ ಮಹೋತ್ಸವ ಅತ್ಯಂತ ಸಂಭ್ರಮದಿಂದ ನಡೆಯುತ್ತಿದ್ದು, ಇದರ ಯಶಸ್ಸಿಗೆ ಹಿರಿಯರು ಹಾಗೂ ಮಾರ್ಗದರ್ಶಕರು ಅಪಾರ ಶ್ರಮ ವಹಿಸುತ್ತಿದ್ದಾರೆ ಎಂದು ಬಿಜೆಪಿ ಯುವ ಮುಖಂಡ ವಸಂತ ಪಡಗದ ಹೇಳಿದರು.  

ಶುಕ್ರವಾರ ಒಕ್ಕಲಗೇರಿ ಓಣಿಯಲ್ಲಿರುವ ಶ್ರೀ ದ್ಯಾಮವ್ವ ದೇವಿ ಹಾಗೂ ದುರ್ಗಮ್ಮ ದೇವಿಯರ ಹರಿಜಾತ್ರೋತ್ಸವದ ನಾಲ್ಕನೇ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಮಹಾಪ್ರಸಾದಕ್ಕೆ ಭಕ್ತಿಸೇವೆಯಾಗಿ ಅಕ್ಕಿ ಸಮರ​‍್ಿಸಿದ ಹಿನ್ನೆಲೆಯಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.  

ಸುಮಾರು 18 ವರ್ಷಗಳ ಸುದೀರ್ಘ ಅವಧಿಯಿಂದ ನಡೆಯುತ್ತಿರುವ ಈ ಐತಿಹಾಸಿಕ ಜಾತ್ರೆಯ ಯಶಸ್ಸಿಗಾಗಿ ಗುರು-ಹಿರಿಯರು ತಮ್ಮ ವೈಯಕ್ತಿಕ ಕೆಲಸ-ಕಾರ್ಯಗಳನ್ನು ಬದಿಗೊತ್ತಿ ಹಗಲಿರುಳು ಶ್ರಮಿಸುತ್ತಿದ್ದಾರೆ. ವಿಶೇಷವಾಗಿ ಒಕ್ಕಲಿಗರ ಓಣಿಯ ಜಾತ್ರಾ ಮಹೋತ್ಸವ ರಾಜ್ಯಾದ್ಯಂತ ಅಪಾರ ಪ್ರಸಿದ್ಧಿ ಪಡೆದಿದೆ ಎಂದರು.  

ಪವಿತ್ರ ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ನಡೆಯುವ ಸಣ್ಣಪುಟ್ಟ ಮನಸ್ತಾಪಗಳು ಹಾಗೂ ವೈಯಕ್ತಿಕ ಭಿನ್ನಾಭಿಪ್ರಾಯಗಳು ಹಿರಿಯರ ನಿಸ್ವಾರ್ಥ ಶ್ರಮಕ್ಕೆ ಧಕ್ಕೆ ತರುವಂತಾಗಬಾರದು. ಎಲ್ಲರೂ ಒಗ್ಗಟ್ಟಿನಿಂದ ಜಾತ್ರೆಯ ಯಶಸ್ಸಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.  

ಪ್ರಸ್ತುತ ನಡೆಯುತ್ತಿರುವ ಗ್ರಾಮ ದೇವಿಯರ 10 ದಿನಗಳ ಜಾತ್ರಾ ಮಹೋತ್ಸವ ಜಿಲ್ಲೆಯಲ್ಲಿ ಮಾತ್ರವಲ್ಲದೆ ರಾಜ್ಯಾದ್ಯಂತ ಗಮನ ಸೆಳೆಯುತ್ತಿದೆ. ಪ್ರತಿನಿತ್ಯ ಸಾವಿರಾರು ಭಕ್ತರು ಆಗಮಿಸಿ ಅನ್ನಪ್ರಸಾದ ಸ್ವೀಕರಿಸುತ್ತಿದ್ದು, ಮಹಾಪ್ರಸಾದ ಸೇವೆಯ ಅಚ್ಚುಕಟ್ಟುತನ ಮತ್ತು ಸಂಘಟನೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇಂತಹ ಅದ್ಭುತ ಧಾರ್ಮಿಕ ವಾತಾವರಣವನ್ನು ಕಾಪಾಡಿಕೊಂಡು ಹೋಗುವುದು ಎಲ್ಲರ ಹೊಣೆ ಎಂದು ವಸಂತ ಪಡಗದ ಹೇಳಿದರು.  

ಕಾರ್ಯಕ್ರಮದಲ್ಲಿ ನರೇಗಲ್‌ನ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಓಂಕಾರೇಶ್ವರ ಮಠದ ಫಕೀರೇಶ್ವರ ಸ್ವಾಮೀಜಿ, ನೀಲಮಂತಾಯ ಅಸುಂಡಿ, ಕೋಟ್ರ​‍್ಪ ಕಮತರ, ಫಕೀರ​‍್ಪ ಹೆಬಸೂರ, ಶಂಕರ​‍್ಪ ಖನೋಜ, ಐ.ಎಸ್‌. ಪೂಜಾರ, ಸದಾಶಿವಯ್ಯ ಮದರಿಮಠ, ಪ್ರೀತಿ ಶಿವಪ್ಪಯ್ಯನಮಠ, ಕೃಷ್ಣ ಪರಾಪುರ, ಮಹಾಂತೇಶ ನೆಲವಡಿ, ವಿನೋದ ಮೊರಬದ, ಎಚ್‌.ಕೆ. ಮುಲ್ಲಾ, ಅಬ್ದುಲ್ ಮುನಾಫ್ ಮುಲ್ಲಾ, ಎಫ್‌.ಪಿ. ಮರಿಗೌಡರ, ರಾಮಣ್ಣ ಭರಮಣ್ಣವರ ಸೇರಿದಂತೆ ಹಲವರು ಉಪಸ್ಥಿತರಿದ್ದರು.  

ವಾಣಿ ಅಸುಂಡಿ ಸ್ವಾಗತಿಸಿದರು. ಬಾಹುಬಲಿ ಜೈನರ್ ನಿರೂಪಿಸಿದರು. ಫೋಟೋಗದಗದಲ್ಲಿ ನಡೆಯುತ್ತಿರುವ ಹರಿಜಾತ್ರೋತ್ಸವದ ಮಹಾಪ್ರಸಾದಕ್ಕೆ ಅಕ್ಕಿ ಸೇವೆ ಸಲ್ಲಿಸಿದ ವಸಂತ ಪಡಗದ ಗೆಳೆಯ