ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಣವೇ ಪ್ರಮುಖ ಸಾಧನ: ವಿದ್ಯಾಧರ ಸವದಿ
Education is the most important tool in a student's life: Vidyadhar Savadi
ಲೋಕದರ್ಶನ ವರದಿ
ರಬಕವಿ-ಬನಹಟ್ಟಿ 08: ವಿದ್ಯಾರ್ಥಿಗಳ ಜೀವನದಲ್ಲಿ ಶಿಕ್ಷಣವೇ ಪ್ರಮುಖ ಸಾಧನವಾಗಿದ್ದು, ಶಿಕ್ಷಣದಿಂದ ವ್ಯಕ್ತಿತ್ವ ರೂಪಿಸುವ ಜೊತೆಗೆ ಸಮಾಜದ ಅಭಿವೃದ್ಧಿಗೂ ಕಾರಣವಾಗುತ್ತದೆಂದು ಯುವ ಧುರೀಣ ವಿದ್ಯಾಧರ ಸವದಿ ಹೇಳಿದರು.
ತಾಲೂಕಿನ ನಾವಲಗಿ ಗ್ರಾಮದ ಕರ್ನಾಟಕ ಪಬ್ಲಿಕ್ ಪಿಯೂ ಕಾಲೇಜು ದ್ವಿತೀಯ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಹಾಗೂ ವಾಚನಾಲಯ ಮತ್ತು ವಿಜ್ಞಾನ ಪ್ರಯೋಗಾಲಯ ಉದ್ಘಾಟಿಸಿ ಮಾತನಾಡಿ, ಶಿಕ್ಷಣದಿಂದ ಪಡೆದ ಜ್ಞಾನ ಭವಿಷ್ಯದ ದಿಕ್ಕನ್ನು ನಿರ್ಧರಿಸುತ್ತದೆ. ವಿದ್ಯಾರ್ಥಿಗಳು ಕೇವಲ ಅಂಕಗಳತ್ತ ಮಾತ್ರ ಗಮನ ನೀಡದೆ ಜ್ಞಾನ, ಸಂಸ್ಕಾರ, ಜೀವನ ಮೌಲ್ಯಗಳನ್ನು ಅರಿಯುವತ್ತ ಆಸಕ್ತರಾಗಬೇಕೆಂದರು.
ಡಿಡಿಪಿಯೂ ಪುಂಡಲೀಕ ಕಾಂಬಳೆ ಜೀವನದಲ್ಲಿ ಎದುರಾಗುವ ಸವಾಲುಗಳಿಗೆ ಹೆದರದೇ ಮೆಟ್ಟಿ ನಿಲ್ಲುವ ಧೈರ್ಯ ಹೊಂದಬೇಕು. ಗುರಿ ತಲುಪಲು ನಿರಂತರ ಪರಿಶ್ರಮ ಬೇಕು. ಇಂದಿನ ತಂತ್ರಜ್ಞಾನದ ಯುಗದಲ್ಲಿ ಕೌಶಲ್ಯತೆ ಜೊತೆಗೆ ಸತತ ಓದುವ ಹವ್ಯಾಸ ಹೊಂದಿದಾಗ ಮಾತ್ರ ಜ್ಞಾನದ ವೃದ್ಧಿ ಸಾಧ್ಯವೆಂದರು.
ಗ್ರಾಪಂ ಮಾಜಿ ಅಧ್ಯಕ್ಷೆ ರೇಖಾ ಕಾಂತಿ, ಗುರು ಮರಡಿಮಠ, ಎಸ್.ಡಿ.ಎಂ.ಸಿ. ಉಪಾಧ್ಯಕ್ಷ ಬಸವರಾಜ ಗಣಿ, ಪ್ರಾಚಾರ್ಯ ಶರತ್ಚಂದ್ರ ಜಂಬಗಿ, ರೇಖಾ ಕದಂ, ಗಂಗಪ್ಪ ಅಮ್ಮಲಜೇರಿ, ಆರ್.ಎಚ್.ಮೇಲಿನಮನಿ, ಎಂ.ಸಿ.ನರೇಗಲ್, ಬಿ.ಬಿ.ಕುಂಬಾರ, ಐ.ಪಿ.ಬಾವಲತ್ತಿ, ಆರ್.ಎಚ್. ದಾಸರ, ದಾನಪ್ಪ ಆಸಂಗಿ, ಹಣಮಂತ ಮಗದುಮ, ಮುತ್ತಪ್ಪ ಅಂಗಡಿ, ಜಿ.ಎಸ್.ಮಾಳಗಿ, ಈರ್ಪ ಕಡಕಭಾವಿ, ಶೃತಿ ಹಾರೂಗೇರಿ, ಕಾಡೇಶ ಕಂಪು, ಮಲ್ಲಪ್ಪ ಮುಗಳಖೋಡ ಮುಂತಾದವರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 