ದಿನವೂ ಹೊಸದನ್ನು ಕಲಿಯುವ ಬದುಕೇ ಶಿಕ್ಷಣ: ಡಾ.ಅಶೋಕ ಡಿಸೌಜಾ

ದಿನವೂ ಹೊಸದನ್ನು ಕಲಿಯುವ ಬದುಕೇ ಶಿಕ್ಷಣ: ಡಾ.ಅಶೋಕ ಡಿಸೌಜಾ  Education is a life of learning something new every day: Dr. Ashoka D'Souza

ದಿನವೂ ಹೊಸದನ್ನು ಕಲಿಯುವ ಬದುಕೇ ಶಿಕ್ಷಣ: ಡಾ.ಅಶೋಕ ಡಿಸೌಜಾ  

ಬೆಳಗಾವಿ 07: ಬದುಕೇ ಶಿಕ್ಷಣ ನಾವು ದಿನವೂ ಹೊಸದನ್ನು ಕಲಿಯುತೇವೆ ಅದರಿಂದ ನಮ್ಮ ಜ್ಞಾನ ವಿಸ್ತಾರವಾಗುತ್ತದೆ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಡಾ.ಅಶೋಕ ಡಿಸೌಜಾ ನುಡಿದರು.  

ಅವರು ಗುರುವಾರ ನಗರದ ಕೆ ಎಲ್ ಇ ಸಂಸ್ಥೆಯ ಲಿಂಗರಾಜ ಮಹಾವಿದ್ಯಾಲಯದ ಕ್ರೀಡಾ ಹಾಗೂ ಇತರ ಸಂಘಗಳನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಸಮಾಜವನ್ನು ಪ್ರೀತಿಸಬೇಕು ಸಮಾಜದ ಬೆಳವಣಿಗಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಅಭಿಪ್ರಾಯಪಟ್ಟರು.  

ಕ್ರೀಡಾ ಹಾಗೂ ಸಾಂಸ್ಕೃತಿಕ ಸಂಘಗಳು ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ಆರೋಗ್ಯ ಮತ್ತು ಶಿಸ್ತು ರೂಪಿಸುವಲ್ಲಿ ಪ್ರಮುಖಪಾತ್ರವಹಿಸುತ್ತವೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು  

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ ಎಚ್‌.ಎಸ್‌.ಮೇಲಿನಮನಿ ವಿದ್ಯಾರ್ಥಿಗಳು ಕಠಿಣ ತಪಸ್ಸು ಪರಿಶ್ರಮದಿಂದ ಸಾಧನೆಗೈಯಲು ಸಾಧ್ಯವಾಗುತ್ತದೆ. ಅದಕ್ಕಾಗಿ ನಿರಂತರ ಅಭ್ಯಾಸ ಮಾಡಬೇಕೆಂದರೂ. ಪ್ರತಿದಿನ ಹೊಸದನ್ನು ಕಲಿಯಬೇಕು ಅದನ್ನು ಇತರೊಂದಿಗೆ ಹಂಚಿಕೊಳ್ಳಬೇಕೆಂದು ತಿಳಿಸಿದರು. ವಿದ್ಯಾರ್ಥಿಗಳಲ್ಲಿ ನಂಬಿಕೆ ಇರಬೇಕು ಬದುಕನ್ನು ಪ್ರೀತಿಸಬೇಕೆಂದು ತಿಳಿಸಿದರು.  

ದೈಹಿಕ ಶಿಕ್ಷಣ ನಿರ್ದೇಶಕ ಡಾ ಸಿ ರಾಮಾರಾವ, ಡಾ ಜಿ ಎನ್ ಶೀಲಿ, ಡಾ ಎಚ್ ಎಮ್ ಚನ್ನಪ್ಪಗೋಳ ಹಾಗೂ ಎಲ್ಲ ಸಿಬ್ಬಂದಿ ಉಪಸ್ಥಿತರಿದ್ದರು.  

ಮಲ್ಲಿಕಾರ್ಜುನ ಪಾಟೀಲ ಸ್ವಾಗತಿಸಿದರು, ಲಕ್ಷ್ಮೀ ಶಿವಣ್ಣವರ ಸ್ವಾಗತಿಸಿದರು, ಸುಹಾನಿ ಮಗದುಮ ಅತಿಥಿಗಳನ್ನು ಪರಿಚಯಿಸಿದರು, ನಿಖಿತಾ ಬೆದರೆ ವಂದಿಸಿದರು. ಸಿದ್ದನಗೌಡ ಪಾಟೀಲ ಮತ್ತು ಸುಹಾನಿ ಮಗದುಮ ವಂದಿಸಿದರು.