ಶಿಕ್ಷಣ ಮತ್ತು ಕೌಶಲ್ಯತೆ ವಿದ್ಯಾರ್ಥಿಗಳ ಬದುಕಿಗೆ ಸಹಕಾರಿ -ಪ್ರಕಾಶ ಕೋಳಿವಾಡ

ಶಿಕ್ಷಣ ಮತ್ತು ಕೌಶಲ್ಯತೆ ವಿದ್ಯಾರ್ಥಿಗಳ ಬದುಕಿಗೆ ಸಹಕಾರಿ -ಪ್ರಕಾಶ ಕೋಳಿವಾಡ  Education and skills are helpful for students' lives - Prakash Koliwada

               ರಾಣೆಬೆನ್ನೂರು  14 : ಇಂದಿನ ವಿದ್ಯಾರ್ಥಿಗಳು ಕೇವಲ ಶಿಕ್ಷಣಕಷ್ಟೇ ತಮ್ಮ ಜೀವನ ಮುಡುಪಾಗಿಟ್ಟು ನಂತರ ಹಂತ ಹಂತವಾಗಿ, ಶಿಕ್ಷಣದ ಜೊತೆಗೆ ಕೌಶಲ್ಯ ಭರಿತ ಶಿಕ್ಷಣದ ಕಡೆ ಗಮನಹರಿಸಬೇಕು ಅಂದಾಗ ಮಾತ್ರ ಜೀವನದಲ್ಲಿ ಯಶಸ್ವಿ ಕಾಣಲು ಸಾಧ್ಯವಾಗುವುದು ಎಂದು ಶಾಸಕ ಪ್ರಕಾಶ್ ಕೋಳಿವಾಡ ಹೇಳಿದರು. ಅವರು ನಗರ ಹೊರ ವಲಯದ ಕಮದೋಡ ಬಳಿಯ ರೈನ್ಬೋ ವಸತಿಯುತ ಶಿಕ್ಷಣ ಸಂಸ್ಥೆಯಲ್ಲಿ, ಆಯೋಜಿಸಲಾಗಿದ್ದ ಶಾಲೆಯ 19ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.   ಶಿಕ್ಷಣದಲ್ಲಿ ಜ್ಞಾನ ವಿಜ್ಞಾನ ಮತ್ತು ತಂತ್ರಜ್ಞಾನ ಅಳವಡಿಸಿಕೊಂಡು ಪರಿಪೂರ್ಣ ಜ್ಞಾನಾರ್ಜನೆ ಪಡೆಯಬೇಕು ಅದರಿಂದ ಎಲ್ಲ ಮತ್ತು ಯಾವುದೇ ಕ್ಷೇತ್ರದಲ್ಲಿಯೂ ತಮ್ಮ ಅಭಿವೃದ್ಧಿಯನ್ನು ಸಾಧಿಸಿ ಆರ್ಥಿಕ ಸಮಾನತೆಯ ಜೊತೆಗೆ ದೇಶದ ಅಭಿವೃದ್ಧಿಗೆ ಮುನ್ನಡೆ ಸಾಧಿಸಿದಂತಾಗುತ್ತದೆ ಎಂದರು.     ಶಿಕ್ಷಣ ಸಂಸ್ಥೆಯು ಅತ್ಯಂತ ಪ್ರಭುದ್ಧವಾಗಿ, ಸುಂದರ ಪರಿಸರದಲ್ಲಿ, ಉತ್ತಮ ವಾತಾವರಣವನ್ನು ಕಲ್ಪಿಸಿ, ನೈಜ ಶಿಕ್ಷಣವನ್ನು ನೀಡುವ ಉದ್ದೇಶ ಸಂಸ್ಥೆಯ ಸಂಸ್ಥಾಪಕರು ಹೊಂದಿದ್ದಾರೆ.

              ಇಲ್ಲಿನ ವಾತಾವರಣ ತಮಗೆ ಅತ್ಯಂತ ಸಂತೋಷ ತಂದಿದೆ ಎಂದರು. ಮುಖ್ಯ ಅತಿಥಿಯಾಗಿದ್ದ, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ  ( ಆಡಳಿತ) ಉಪ ನಿರ್ದೇಶಕ ಮೋಹನ್ ಎನ್‌.ದಂಡಿನ ಅವರು, ಸಮಾಜದಲ್ಲಿ ಸಮಾನತೆ ಕಾಣಬೇಕಾದರೆ, ಇಂದಿನ ವಿದ್ಯಾರ್ಥಿಗಳು ಕಷ್ಟಪಟ್ಟು ಓದದೇ, ಸಂಪೂರ್ಣವಾಗಿ ಇಷ್ಟಪಟ್ಟು ಓದಿದಾಗ ಮಾತ್ರ ಸಂಪೂರ್ಣ ಯಶಸ್ವಿ ಕಾಣಲು ಸಾಧ್ಯವಾಗುವುದು. ವಿದ್ಯಾರ್ಥಿ ಜೀವನದಲ್ಲಿ ಪಾಲಕರ, ಮತ್ತು ಶಿಕ್ಷಕರ ಜವಾಬ್ದಾರಿ ತುಂಬಾ ಇದೆ. ಶಿಕ್ಷಕರು ಮತ್ತು ಪಾಲಕರ ಭಾವನೆಯನ್ನು ಅರ್ಥ ಮಾಡಿಕೊಂಡು ತಾವು  ತಮ್ಮ ವಿಷಯದ ಬಗ್ಗೆ ಸಂಪೂರ್ಣ ತಿಳಿದುಕೊಂಡು  ಅಧ್ಯಯನ ಮಾಡಿ ಆಯಾ  ವಿಷಯಗಳಲ್ಲಿ ಪರಿಪೂರ್ಣ ಪ್ರಗತಿ ಮತ್ತು ಯಶಸ್ವಿಗಳಿಸಲು ಮುಂದಾಗಬೇಕು ಎಂದು ದಂಡಿನ್ ವಿದ್ಯಾರ್ಥಿ ಸಮುದಾಯಕ್ಕೆ ಕರೆ ನೀಡಿದರು.    ವಿದ್ಯಾರ್ಥಿಗಳಿಗೆ ಸಾಧನೆ ಮತ್ತು  ಶಿಕ್ಷಣದ ಮಹತ್ವ ವಿಷಯವಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಶ್ಯಾಮ ಸುಂದರ ಅಡಿಗ ಅವರು ಉಪನ್ಯಾಸ ನೀಡಿದರು. ನಿವೃತ್ತ  ಪ್ರಾಂಶುಪಾಲ, ಪ್ರೋ.ಎಸ್‌. ಎನ್‌. ಕಟ್ಟಿಮನಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.  

             ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಅಧ್ಯಕ್ಷ ಸುರೇಶ್ ಸಿ.ಟಿ., ಉಪಾಧ್ಯಕ್ಷ ಲಲಿತಾ ಸುರೇಶ್, ಕಾರ್ಯದರ್ಶಿ ಮಾಲತೇಶ್ ಐ.ಕೆ., ಕೋಶಾಧ್ಯಕ್ಷ ನಾಗರಾಜ್ ಎಸ್‌. ಕೆ, ಸದಸ್ಯರಾದ ವೀರಣ್ಣ ಸಿ.ಟಿ, ಶಾರದಾ ವೀರಣ್ಣ, ಶಾಂತಮ್ಮ ಐ.ಕೆ, ಬಸವರಾಜ ಎಸ್‌. ಟಿ, ರಾಘವೇಂದ್ರ ಬಿ.ಕೆ, ಶಿಲ್ಪಾ ಎಂ. ಕೆ., ಎಸ್‌. ಎಂ, ಸುಜಾತಾ ಎಸ್‌. ಸಿ, ಸೇರಿದಂತೆ ಮತ್ತಿತರರು ಇದ್ದರು.       ಶೈಕ್ಷಣಿಕ ಸಾಧನೆ ಮೆರೆದ, ಪಿ ಬಿಲ್ಲಾಳ, ರಿತಿಕ್ಷ ಪಾಟೀಲ, ಶ್ರಾವ್ಯ ಬಾಪುಗೌಡ, ತನುಷ ಹಿರೇಮಠ, ಚೇತನ್ ಇ. ಎಂ, ರಾಘವೇಂದ್ರ ಟಿ, ಹರ್ಷಿತಾ ಆರ್‌. ಎಚ್, ನರೇಂದ್ರ ಸಿಂಗ್, ಸಾಕ್ಷಿ. ದಿವ್ಯ ಎಸ್‌. ಕೆ, ಮೊದಲಾದವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ಆರಂಭದಲ್ಲಿ ಸುಶ್ಮಿತಾ ಸಂಗಡಿಗರು ಪ್ರಾರ್ಥಿಸಿದರು. ದೀಕ್ಷಾ ಮತ್ತು ಜ್ಯೋತಿಕಾ ಸ್ವಾಗತಿಸಿ, ಗಾಯಿತ್ರಿ- ಭೂಮಿಕಾ ನಿರೂಪಿಸಿ ಆಯುಷ್ ಭುವನ್ ವಂದಿಸಿದರು. ನಂತರ ವಿದ್ಯಾರ್ಥಿಗಳಿಂದ ನಡೆದ ನಾಟಕ,ನಾಟಕ ರೂಪಕ, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮವ ಸಾರ್ವಜನಿಕರ ಗಮನ ಸೆಳೆದವು.