‘ಮನುಷ್ಯನಿಗೆ ಶಿಕ್ಷಣ, ಸಂಸ್ಕಾರ ಪ್ರಮುಖವಾದದ್ದು’
Education and culture are important for a human being'
ಲೋಕದರ್ಶನ ವರದಿ
‘ಮನುಷ್ಯನಿಗೆ ಶಿಕ್ಷಣ, ಸಂಸ್ಕಾರ ಪ್ರಮುಖವಾದದ್ದು’
ಬೀಳಗಿ 07: ಮನುಷ್ಯನಿಗೆ ಶಿಕ್ಷಣ, ಸಂಸ್ಕಾರ ಪ್ರಮುಖವಾದದ್ದು. ಶಿಕ್ಷಣವಂತರಿಗೆ ಸಮಾಜದಲ್ಲಿ ದೊಡ್ಡ ಗೌರವವಿದೆ. ತಾಯಿ-ತಂದೆಯಾದವರು ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ, ಒಳ್ಳೆಯ ನಡತೆ, ನಡಾವಳಿ ಕಲಿಸಿದರೆ. ಆ ಕುಟುಂಬದ ಏಳಿಗೆ ಸಾಧ್ಯವಾಗುತ್ತದೆ ಎಂದು ಶಾಸಕ ಜೆ ಟಿ ಪಾಟೀಲ ಅಭಿಪ್ರಾಯ ವ್ಯಕ್ತಪಡೆಸಿದರು.
ಪಟ್ಟಣದ ತಾಲೂಕು ಆಡಳಿತ, ತಾಪಂ, ಪಪಂ, ಸಮಾಜ ಕಲ್ಯಾಣ ಇಲಾಖೆ ಬೀಳಗಿ ಇವರ ಸಹಯೋಗದಲ್ಲಿ ತಹಶೀಲ್ದಾರ ಕಾರ್ಯಾಲಯದ ಹೊರ ಆವರಣದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಮಹರ್ಷಿ ವಾಲ್ಮೀಕಿಯವರು ರಚಿಸಿದ ರಾಮಾಯಣದಂತ ಗ್ರಂಥ ವಿಶ್ವದ ಮನುಕುಲದ ಬದಲಾವಣೆಗೆ ಪ್ರೇರಣೆಯಾಗಿದೆ. ಇವರ ಆದರ್ಶಗಳನ್ನು ಪ್ರತಿಯೊಬ್ಬರು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಡಾ.ಬಿ.ಆರ್.ಅಂಬೇಡ್ಕರ್ ಆಸೆಯಂತೆ ಪಜಾ, ಪಪಂ ಜನಾಂಗ ಶಿಕ್ಷಣವಂತರಾಗಿಲ್ಲ. ಪ್ರತಿಯೊಂದು ಕುಟುಂಬ ಬಲಿಷ್ಟವಾಗಬೇಕಾದರೆ ಆ ಕುಟುಂಬದಲ್ಲಿ ವಿದ್ಯಾವಂತ ಮಕ್ಕಳು ಹುಟ್ಟಬೇಕು. ಆಗ ಸಮಾಜದ ಏಳಿಗೆ ಸಾಧ್ಯ. ಸರಕಾರ ಮಕ್ಕಳಿಗೆ ವಿದ್ಯಾ ಕೊಡುವ ಸಲುವಾಗಿ ಅನೇಕ ಯೋಜನೆಗಳನ್ನು ನೀಡುತ್ತಿದೆ. ಊಟ, ವಸತಿ, ವಿದ್ಯಾರ್ಥಿ ವೇತನ ನೀಡುತ್ತಿದೆ ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಎಚ್.ಅರ್.ನಿರಾಣಿ ಮಾತನಾಡಿ, ಮಹರ್ಷಿ ವಾಲ್ಮಿಕಿಯವರು ಕೇವಲ ಒಂದು ಸಮಾಜಕ್ಕೆ ಸಿಮೀತವಾಗದೆ ಇಡಿ ವಿಶ್ವದ ಮನಕುಲಕ್ಕೆ ಪರಂಪರೆಯಿಂದ ಕೂಡಿದ ರಾಮಾಯಣ ಗ್ರಂಥದ ಮೂಲಕ ಸತ್ವ, ವ್ಯಕ್ತಿತ್ವ, ಆದರ್ಶ, ಮಾನವೀಯ ಮೌಲ್ಯಗಳನ್ನು, ವಿಚಾರ, ಆಚಾರಗಳನ್ನು, ಸಹೋದರತ್ವವನ್ನು ತಿಳಿಸಿಕೊಟ್ಟಿದ್ದಾರೆ. ಪ್ರತಿಯೊಬ್ಬ ಮನುಷ್ಯ ಜೀವನದಲ್ಲಿ ಮಹಾಗ್ರಂಥ ರಾಮಾಯಣವನ್ನು ಓದಿ ಸೌಹಾರ್ದತೆಯನ್ನು ಬೆಳೆಸಿಕೊಂಡಾಗ ಅವನ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮಕ್ಕಿಂತ ಮೊದಲು ಇಲ್ಲಿಯ ವೀರ ಸಿಂಧೂರ ಲಕ್ಷ್ಮಣ ವೃತ್ತದಿಂದ ನೂರಾರು ಸುಮಂಗಲಿಯರ ಸಮ್ಮೂಖದಲ್ಲಿ ವಾಧ್ಯ ವೃಂದದೊಂದಿಗೆ ಕುಂಬಮೇಳವು ಮಹರ್ಷಿ ವಾಲ್ಮೀಕಿಯವರ ಭಾವಚಿತ್ರದ ಮೆರವಣಿಗೆಯು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಿನಿ ವಿಧಾನಸೌಧವರೆಗೆ ಆಗಮಿಸಿ ಸಮಾರಂಭವಾಗಿ ಮಾರ್ಪಟಟಿತು.
ವಾಲ್ಮೀಕಿ ನಾಯಕ ಮಹಾಸಭಾ ತಾಲೂಕಾ ಅಧ್ಯಕ್ಷ ಟಿ ವೈ ಜಾನಮಟ್ಟಿ ಮಾತನಾಡಿ, ಒಂದು ಸಮುದಾಯ ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಬೆಳೆಯಬೇಕಾದರೆ ಮುಖ್ಯವಾಗಿ ಉತ್ತಮ ಶಿಕ್ಷಣ, ಸಂಸ್ಕಾರ ಬೇಕು. ನಮ್ಮ ಸಮಾಜದ ಜೊತೆ ಉಳಿದ ಸಮಾಜವನ್ನು ನಾವು ಗೌರವಿಸಬೇಕು ಎಂದರು.
ತಹಶೀಲ್ದಾರ ವಿನೋದ ಹತ್ತಳ್ಳಿ, ಬಿಇಒ ಆರ್.ಆರ್.ಆದಾಪುರ ಮಾತನಾಡಿದರು. ಆರ್.ಜಿ.ಸನ್ನಿ ಉಪನ್ಯಾಸ ನೀಡಿದರು.
ಪಪಂ ಅಧ್ಯಕ್ಷ ಮುತ್ತು ಭೋರ್ಜಿ, ಉಪಾಧ್ಯಕ್ಷೆ ಕಲಾವತಿ ಗಡ್ಡದವರ, ತಾಪಂ ಇಒ ಎಸ್.ಎಸ್.ಪಾಟೀಲ, ಸಿಪಿಐ ಹಣಮಂತ ಸಣಮನಿ, ಪಪಂ ಮುಖ್ಯಾಧಿಕಾರಿ ದೇವೇಂದ್ರ ಧನಪಾಲ್, ಸಮಾಜ ಕಲ್ಯಾಣ ಇಲಾಖೆ ಎಡಿ ಸಿ.ಎಸ್.ಗಡ್ಡದೇವರಮಠ, ವೀರ ಸಿಂಧೂರ ಲಕ್ಷ್ಮಣ ಟ್ರಸ್ಟ್ ಅಧ್ಯಕ್ಷ ಶಂಕರ ತಳವಾರ ಇತರರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 