ಇಸ್ಲಾಮಾಬಾದ್, ನ 18 : ವಿಶ್ವಸಂಸ್ಥೆಯ ವಿಶೇಷ ವಕೀಲರ ಪ್ರಧಾನ ಕಾರ್ಯದರ್ಶಿ (ಯುಎನ್ಎಸ್ ಜಿಎಸ್ಎ) ಆಗಿರುವ ನೆದರ್ ಲ್ಯಾಂಡ್ ನ ರಾಣಿ ಮ್ಯಕ್ಸಿಮಾ ನ 25 ರಿಂದ 27ರವರೆಗೆ ಪಾಕಿಸ್ತಾನಕ್ಕೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಮಗ್ರ ಆಥರ್ಿಕ ಅಭಿವೃದ್ಧಿಯ ಕುರಿತು ಚರ್ಚಿಸಲಿದ್ದಾರೆ. ಇಲ್ಲಿನ ವಿದೇಶಾಂಗ ಕಚೇರಿಯ ಮಾಹಿತಿ ಪ್ರಕಾರ, ಡಚ್ ರಾಣಿ ಮ್ಯಾಕ್ಸಿಮಾ, ಸಾರ್ವಜನಿಕ ಮತ್ತು ಖಾಸಗಿ ವಲಯದ ಪಾಲುದಾರರೊಂದಿಗೆ ಭೇಟಿಯ ಜೊತೆಗೆ, ಪಾಕಿಸ್ತಾನ ರಾಷ್ಟ್ರಪತಿ ಆರಿಫ್ ಅಲ್ವಿ ಮತ್ತು ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಕೂಡ ಭೇಟಿಯಾಗಿ ಚಚರ್ಿಸಲಿದ್ದಾರೆ. ಈ ಹಿಂದೆ 2016ರ ಫೆಬ್ರವರಿಯಲ್ಲಿ ಅವರು ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು.