ಬರದ ಆತಂಕ: ರಾಜ್ಯವನ್ನು ಬರಪೀಡಿತ ಎಂದು ಘೋಷಿಸಲು ಮನವಿ
Drought concerns: Appeal to declare the state drought-hit
ಬ್ಯಾಡಗಿ 10: ಕಳೆದ ಬಾರಿ ಅತಿವೃಷ್ಠಿಯಿಂದ ನಲುಗಿದ್ದ ರೈತರು ಈ ಬಾರಿ ಬರಗಾಲದ ಆತಂಕ ಎದುರಿಸುತ್ತಿದ್ದಾರೆ. ಮಳೆ ಕೊರತೆಯಿಂದ ಬಿತ್ತಿದ ಬೆಳೆಗಳು ಒಣಗುತ್ತಿವೆ. ನಮ್ಮ ರಾಜ್ಯವನ್ನು ಬರಗಾಲ ಪೀಡಿತ ರಾಜ್ಯವನ್ನಾಗಿ ಘೋಷಿಸಬೇಕು ಎಂದು ತಾಲ್ಲೂಕು ರೈತ ಹೋರಾಟಸಮಿತಿ ತಹಶೀಲ್ದಾರ ಚಂದ್ರಶೇಖರ ನಾಯ್ಕ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಶುಕ್ರವಾರ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ರೈತ ಹೋರಾಟ ಸಮಿತಿ ಅಧ್ಯಕ್ಷ ಮುರಿಗೆಪ್ಪ ಶೆಟ್ಟರ ಮಾತನಾಡಿರಾಜ್ಯ ಸರ್ಕಾರ ಬರಗಾಲದ ಪರಿಸ್ಥಿತಿ ಎದುರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.
ಮುಂಗಾರು ಕುಠಿತಗೊಂಡಿದೆ. ಶೇ 55 ರಷ್ಟು ಮಳೆ ಕೊರತೆ ಇದೆ ಎಂದು ಹವಾಮಾನ ವರದಿಯಿಂದ ಗೊತ್ತಾಗಿದೆ. ರಾಜ್ಯದ ಹಲವು ಜಿಲ್ಲೆಗಳನ್ನು ಬರಗಾಲ ಪೀಡಿತ ಜಿಲ್ಲೆಗಳೆಂದು ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.ರಾಜ್ಯವು ಹಿಂದೆಂದೂ ಕಾಣದ ಬರ ಪರಿಸ್ಥಿತಿ ಎದುರಿಸುತ್ತಿದೆ. ಅನೇಕ ರೈತರು ಎರಡ್ಮೂರು ಬಾರಿ ಬಿತ್ತಿ ಹಾನಿ ಅನುಭವಿಸಿದ್ದಾರೆ. ಕೆಲವೊಂದು ಪ್ರದೇಶಗಳಲ್ಲಿ ಸರಿಯಾಗಿ ಬಿತ್ತನೆ ಮಾಡಿದ ಪೈರುಗಳು ಹುಟ್ಟದೇ ಇರುವುದರಿಂದ ಹೊಲಗಳನ್ನು ಹರಗಿದ್ದಾರೆ. ಪ್ರತಿ ಎಕರೆಗೆ 30 ಸಾವಿರ ರೂ.ಗಳ ಪರಿಹಾರ ಒದಗಿಸಬೇಕು. ದನಕರುಗಳಿಗೆ ನೀರಿನ ವ್ಯವಸ್ಥೆ ಮಾಡಬೇಕು.
ಕೂಲಿ ಕಾರ್ಮಿಕರು ಗೂಳೆ ಹೋಗದಂತೆ ಕೆಲಸ ನೀಡಬೇಕು. ಕಳೆದ ವರ್ಷದ ಫಸಲ ಭೀಮಾ ಯೋಜನೆಯಲ್ಲಿಯ ತಾರತಮ್ಯ ಪರಿಹರಿಸಿ ರೈತರಿಗೆ ಬೆಳೆವಿಮೆ ಮುಟ್ಟಿಸಲು ಸರ್ಕಾರ ಮುಂದಾಗಬೇಕು. ಈ ಎಲ್ಲ ಕಾರ್ಯಗಳ ಹಿನ್ನೆಲೆಯಲ್ಲಿ ರಾಜ್ಯವನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂದರು. ಈ ಸಂದರ್ಭದಲ್ಲಿ ರೈತ ಹೋರಾಟ ಸಮಿತಿಯ ನಿಂಗಪ್ಪ ಮಾಗೋಡ, ಈರ್ಪ ಸಂಕಣ್ಣನವರ, ಎಸ್.ಎಂ.ಗೊಲ್ಲರಹಳ್ಳಿಮಠ,ಗೋಣೆಪ್ಪ ಸಂಕಣ್ಣನವರ, ಬಸಪ್ಪ ಶಿವಣ್ಣನವರ, ಹನುಮಂತಪ್ಪ ಹರಮಗಟ್ಟಿ, ಬಿ.ಎಂ.ಪಾಟೀಲ, ಚಂದ್ರಶೇಖರ ಮಾಗೋಡ, ಚಂದ್ರ್ಪ ಸಂಕಣ್ಣನವರ, ಬಸವರಾಜ ಸಂಕಣ್ಣನವರ ಸೇರಿದಂತೆ ಇತರರಿದ್ದರು.
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ
ಚಂದ್ರಪುರ ಅರಣ್ಯದಲ್ಲಿ ಕಾಡುಪ್ರಾಣಿ ದಾಳಿಗೆ ಯುವಕ ಬಲಿ
ಅಧಿಕಾರ ದರ್ಪ : ಖಾನಾಪುರ ತಹಸೀಲ್ದಾರ್ ವಿರುದ್ಧ ಶಿಸ್ತುಕ್ರಮಕ್ಕೆ ಪಿಡಿಒಗಳಿಂದ ಡಿಸಿ, ಚು. ಆಯೋಗಕ್ಕೆ ದೂರು
ಗಗನಯಾನ ಮಿಷನ್ಗಾಗಿ ಮಹತ್ವದ ಪ್ಯಾರಾಶೂಟ್ ಏರ್ಡ್ರಾಪ್ ಪರೀಕ್ಷೆಯನ್ನು ಇಸ್ರೋ ಯಶಸ್ವಿಯಾಗಿ ನಡೆಸಿತು
ಗದಗದಲ್ಲಿ ಮಾನಸಿಕ ಅಸ್ವಸ್ಥ ಯುವತಿಯ ಮೇಲೆ ಅತ್ಯಾಚಾರ ಆರೋಪ
ಹಿಡಕಲ್ ಜಲಾಶಯದ ನೀರಿನಲ್ಲಿ ವೃದ್ದೆಯ ಶವ ಪತ್ತೆ : ಹಳೇಗುಡನಟ್ಟಿ ಬಳಿ ಘಟನೆ 