ಚಾಲಕ ಹುಸೇನ್ ಸಾಬ್ ಪ್ರೇಮ: ಕನ್ನಡ ರಥವಾದ ಕೆಎಸ್‌ಆರ್ಟಿಸಿ ಬಸ್
Driver Hussain Saab's love: KSRTC bus, Kannada chariot
ಚಾಲಕ ಹುಸೇನ್ ಸಾಬ್ ಪ್ರೇಮ: ಕನ್ನಡ ರಥವಾದ ಕೆಎಸ್‌ಆರ್ಟಿಸಿ ಬಸ್
ವರದಿ : ವೀರೇಶ ಈ ಸ್ಟಾಂಪಿನ
ಯಲಬುರ್ಗಾ 02 : ಕನ್ನಡ ರಾಜ್ಯೋತ್ಸವವನ್ನು ಎಲ್ಲೆಡೆ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ನಡುವೆ ಪಟ್ಟಣದ ಕೆ.ಎಸ್.ಆರಿ್ಟ.ಸಿ ಯಲಬುರ್ಗಾ ಘಟಕದ ಸಿಬ್ಬಂದಿ ಹುಸೇನ್ ಸಾಬ್ ಬೂದಿ ಅವರು ಸಾರಿಗೆ ಬಸ್ ಅನ್ನು ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ವಿಶಿಷ್ಟವಾಗಿ ತಮ್ಮ ಸ್ವಂತ ಖರ್ಚಿನಿಂದ ಬಸ್ಸನ್ನು ಅಲಂಕಾರ ಮಾಡಿದ್ದಾರೆ. ಕನ್ನಡಮಯವಾಗಿ ಮಿಂಚುತ್ತಿದ್ದ ಈ ಬಸನ್ನು ನೋಡಲು ಜನರು ನಾ ಮುಂದು ತಾಮುಂದು ಎಂದು ಜನ ಮುಗಿಬಿದ್ದಾರೆ. ಇನ್ನೊಂದು ವಿಶೇಷ. ಬಣ್ಣಬಣ್ಣದ ಬಲೂನ್ಗಳಿಂದ ಬಸ್ ಅಲಂಕರಿಸಲಾಗಿತ್ತು. ಬಸ್ ಒಳಗಡೆ ಎಲ್ಲಿ ನೋಡಿದರೂ ಕನ್ನಡಮಯ. ಕನ್ನಡ ನಾಡು, ನುಡಿ ಮತ್ತು ಭಾಷೆಗಾಗಿ ದುಡಿದ ಕವಿಗಳು, ಕಲಾವಿದರು, ವೀರಯೋಧರು, ಕನ್ನಡದ ಮೇರು ನಟರು, ಸಾಹಿತಿಗಳು ಹೀಗೆ ಪ್ರತಿಯೊಬ್ಬರ ಫೋಟೋವನ್ನು ಹಾಕಲಾಗಿದೆ. ಈ ಮೂಲಕ ಜನರಿಗೆ ಜಾಗೃತಿ ಸಹ ಮೂಡಿಸಲಾಯಿತು. ಕೊಪ್ಪಳ, ಹಂಪಿ, ಐಹೊಳೆ, ಬಾದಾಮಿ, ಪಟ್ಟದಕಲ್ಲು, ವಿಜಯನಗರದ ಅರಸರು, ಕನ್ನಡದ ಸಂತರು ಹೀಗೆ ಪ್ರಮುಖ ಎಲ್ಲ ಮಹನೀಯರ ಚಿತ್ರಗಳನ್ನು ಅಂಟಿಸಲಾಗಿತ್ತು. ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿಗಳನ್ನು ತಂದುಕೊಟ್ಟ ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ದ.ರಾ.ಬೇಂದ್ರೆ, ಕುವೆಂಪು, ವಿ.ಕೃ. ಗೋಕಾಕ, ಯು.ಆರ್.ಅನಂತಮೂರ್ತಿ, ಗೀರೀಶ್ ಕಾರ್ನಾಡ ಮತ್ತು ಚಂದ್ರಶೇಖರ ಕಂಬಾರ ಅವರು ಈ ಪ್ರಶಸ್ತಿಗಳನ್ನು ಪಡೆದ ವರ್ಷ, ಯಾವ ಸಾಧನೆಗೆ ಈ ಗೌರವ ಬಂದಿದೆ ಎನ್ನುವ ಮಾಹಿತಿ ಹೊಂದಿದ್ದ ಪೋಸ್ಟರ್ಗಳು ಬಸ್ನೊಳಗೆ ರಾರಾಜಿಸುತ್ತಿದ್ದವು. ಬಸ್ ಚಾಲಕ ಹುಸೇನ್ ಸಾಬ್ ಬೂದಿ ಅವರ ಧರ್ಮಪತ್ನಿ ಸಲ್ಮಾ ಬೇಗಂ ಬೂದಿ, ಮಕ್ಕಳು ಅಬ್ದುಲ್ ರೆಹಮಾನ ಬೂದಿ ,ಖಜಾವಲಿ ಬೂದಿ ಅವರು ಸಾತ್ ನೀಡಿದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 