ಡಾ. ವೀರೇಂದ್ರ ಹೆಗ್ಗಡೆಯವರ 78ನೇ ಜನ್ಮದಿನ: ವಿಶೇಷ ಸಂಕಲ್ಪ ಪೂಜಾ

ಡಾ. ವೀರೇಂದ್ರ ಹೆಗ್ಗಡೆಯವರ 78ನೇ ಜನ್ಮದಿನ: ವಿಶೇಷ ಸಂಕಲ್ಪ ಪೂಜಾ Dr. Veerendra Heggade's 78th Birthday: Special Sankalpa Puja

ಧಾರವಾಡ 26: ಶ್ರೀ ಕ್ಷೇತ್ರ ಧರ್ಮಸ್ಥಳದ ಡಾ. ವೀರೇಂದ್ರ ಹೆಗ್ಗಡೆಯವರ 78ನೇ ಜನ್ಮದಿನದ ಅಂಗವಾಗಿ ನಗರದ ಸಾಧನಕೇರಿಯ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಮಂಗಳವಾರ ವಿಶೇಷ ಸಂಕಲ್ಪ ಪೂಜಾ ನೆರವೇರಿಸಲಾಯಿತು.  

ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಪುಂಡಲೀಕ ಹಡಪದ ಮಾತನಾಡಿ, ನಾಡಿನ ಧಾರ್ಮಿಕ, ಶೈಕ್ಷಣಿಕ, ಆರೋಗ್ಯ ಕ್ಷೇತ್ರಕ್ಕೆ ಡಾ.ವೀರೇಂದ್ರ ಹೆಗ್ಗಡೆ ಅವರು ನೀಡಿರುವ ಕೊಡುಗೆ ಅತ್ಯಮೂಲ್ಯ ವಾದುದು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಹಲವಾರು ಸಮಾಜ ಮುಖಿ ಕಾರ್ಯಗಳನ್ನು ಅನುಷ್ಠಾನಗೊಳಿಸಿ ಜನಕಲ್ಯಾಣಕ್ಕೆ ಶ್ರಮಿಸುತ್ತಿದ್ದಾರೆ.ಹೆಗ್ಗಡೆ ಅವರು ರಾಜ್ಯ ಕಂಡ ಮಾದರಿಯ ವ್ಯಕ್ತಿತ್ವದವರು ಎಂದು ಬಣ್ಣಿಸಿದರು.  ಮುಮ್ಮಿಗಟ್ಟಿ ಗ್ರಾಪಂ ಉಪಾಧ್ಯಕ್ಷ ವಿಠ್ಠಲ ಭಟ್ಟಂಗಿ, ಚಿಕ್ಕಮಲ್ಲಿಗವಾಡ ಗ್ರಾಪಂ ಸದಸ್ಯೆ ಪವಿತ್ರ ತಳವಾರ ಮಾತನಾಡಿ, ಡಾ.ವೀರೇಂದ್ರ ಹೆಗ್ಗಡೆ ಅವರ ಸಾಧನೆ ಮತ್ತು ಕೊಡುಗೆಗಳನ್ನು ಸ್ಮರಿಸಿದರು.ವರಸಿದ್ಧಿ ವಿನಾಯಕ ದೇವಸ್ಥಾನದ ಕಮೀಟಿ ಅಧ್ಯಕ್ಷ ಎಸ್‌.ವಿ. ಕಂಬಿ, ಖಜಾಂಚಿ ವಸಂತ ಕಿಲ್ಲೇದ, ಕಾರ್ಯದರ್ಶಿ ರಾಜು ಸೂರ್ಯವಂಶಿ ವೇದಿಕೆಯಲ್ಲಿದ್ದರು.ವಲಯ ಮೇಲ್ವಿಚಾರಕ ಮಂಜುನಾಥ ಎಲ್‌., ಒಕ್ಕೂಟದ ಅಧ್ಯಕ್ಷೆ ಜ್ಯೋತಿ,ಸಾವಿತ್ರಿ ಹೊನ್ನಪ್ಪನವರ, ಸುವಿಧ ಸಹಾಯಕರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.