ಡಾ. ವಿ.ಕೃ. ಗೋಕಾಕ್ ಅವರ 117ನೇ ಜನ್ಮದಿನಾಚರಣೆ
Dr. V.K. Gokak's 117th Birth Anniversary Celebration
ಹಾವೇರಿ, ಆ.10: ಡಾ. ವಿ.ಕೃ. ಗೋಕಾಕ್ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಆಶ್ರಯದಲ್ಲಿ ನಗರದ ಗುರುಭವನದ ಎದುರಿನ ಗೋಕಾಕರ ಪ್ರತಿಮೆಗೆ ಮಾಲಾರೆ್ಣ ಮಾಡುವ ಮೂಲಕ ಡಾ. ವಿ.ಕೃ. ಗೋಕಾಕ್ ಅವರ 117ನೇ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.
ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ದೊರಕುವಲ್ಲಿ ಗೋಕಾಕರ ಪಾತ್ರ ಬಹಳ ದೊಡ್ಡದು. ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಅದ್ಭುತ ಪ್ರಭುತ್ವ ಹೊಂದಿದ್ದ ಗೋಕಾಕರು ಕನ್ನಡ ಭಾಷೆಯ ಸತ್ವವನ್ನು ವಿಶ್ವದೆತ್ತರಕ್ಕೆ ಪರಿಚಯಿಸಿದವರು ಎಂದು ಟ್ರಸ್ಟ್ ಸದಸ್ಯ ಲಿಂಗರಾಜ ಸೊಟ್ಟಪ್ಪನವರ ಹೇಳಿದರು.
ಹಿರಿಯ ನ್ಯಾಯವಾದಿ ಎಸ್.ಜೆ. ಹೊನ್ನಪ್ಪ ಮಾತನಾಡಿ, ಗೋಕಾಕರ ಸಾಹಿತ್ಯವನ್ನು ಎಲ್ಲರಿಗೂ ಪರಿಚಯಿಸುವಂತಾಗಬೇಕು. ಒಬ್ಬ ಕನ್ನಡ ಪ್ರೇಮಿಯಾಗಿ ಟ್ರಸ್ಟ್ನ ಚಟುವಟಿಕೆಗಳಿಗೆ ಸದಾ ಸ್ಪಂದಿಸುವುದಾಗಿ ತಿಳಿಸಿದರು.
ಇನ್ನೋರ್ವ ಅತಿಥಿ ಪೃಥ್ವಿರಾಜ್ ಬೆಟಗೇರಿ ಮಾತನಾಡಿ, ಗೋಕಾಕರ ಸಮುದ್ರಗೀತೆಗಳು ಇಂದಿಗೂ ಹೊಸ ಕವಿಗಳಿಗೆ ಸ್ಫೂರ್ತಿ ನೀಡುತ್ತಿವೆ. ಅವುಗಳ ಕುರಿತು ಹೆಚ್ಚಿನ ಅಧ್ಯಯನ ನಡೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ಪಿ.ಕೆ. ಕರ್ಜಗಿ, ಮೊಹಮ್ಮದ್ ಫೈಜಾನ್, ಮುತ್ತುರಾಜ ಮಾದರ, ಮೌನೇಶ್ ಅರ್ಕಸಾಳಿ, ಶ್ರೀನಿವಾಸರಾವ್ ಹಂಚಾಟೆ, ಈರಣ್ಣ ಬೆಳವಡಿ, ಡಾ. ಜಗನ್ನಾಥ ಗೇನಣ್ಣವರ, ಅಲೆಮಾರಿ ಜನಾಂಗದ ಶೆಟ್ಟಿ ವಿಭೂತಿ ಹಾಗೂ ಟ್ರಸ್ಟ್ ಅಧ್ಯಕ್ಷ ಸತೀಶ್ ಕುಲಕರ್ಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಮನೆ ಮನೆಗಳ ಮೇಲೆ ಕನ್ನಡ ಬಾವುಟ ಅಭಿಯಾನ–2026’: 5 ಸಾವಿರ ಕನ್ನಡ ಧ್ವಜಗಳ ಉಚಿತ ವಿತರಣೆ
ಉತ್ತರ ವಲಯ ಪೊಲೀಸರಿಂದ ರೌಡಿ ನಿಗ್ರಹಕ್ಕೆ ಕಠಿಣ ಕ್ರಮ : 23 ರೌಡಿಗಳ ಗಡಿಪಾರು
6.85 ಕೆ.ಜಿ. ಗಾಂಜಾ ಮಿಶ್ರಿತ ಚಾಕಲೇಟ್ ಪ್ಯಾಕೆಟ್ಗಳ ವಶ: ಓರ್ವ ಆರೋಪಿ ಬಂಧನ
ಕಳೆದುಹೋಗಿದ್ದ 57 ಮೊಬೈಲ್ ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ: ವಾರಸುದಾರರಿಗೆ ವಾಪಸ್
ಬಹುಕೋಟಿ ವಂಚನೆ : ನೀಲಣ್ಣವರ, ಪತ್ನಿ ಸೇರಿ ಆಪ್ತರ ಕಚೇರಿ, ನಿವಾಸಗಳ ಮೇಲೆ ಇಡಿ ದಾಳಿ 