ಲಯನ್ಸ್‌ ಶಾಲೆಯಲ್ಲಿ ಡಾ ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮ ದಿನಾಚರಣೆ.

ಲಯನ್ಸ್‌ ಶಾಲೆಯಲ್ಲಿ  ಡಾ ಸರ್ವಪಲ್ಲಿ  ರಾಧಾಕೃಷ್ಣನ್ ಜನ್ಮ ದಿನಾಚರಣೆ.  Dr. Sarvepalli Radhakrishnan's birthday celebration at Lions School

ರಾಣೇಬೆನ್ನೂರು 25: ಸಮಾಜದಲ್ಲಿ ಗುರುಗಳಿಗೆ ಅತ್ತುನ್ಯತವಾದ ಗೌರವ ಸ್ಥಾನಮಾನಗಳಿವೆ. ಅವುಗಳಿಗೆ ಧಕ್ಕೆ ಬಾರದ ರೀತಿಯಲ್ಲಿ ತಮ್ಮ ವೃತ್ತಿ ಬದುಕು ಜೀವನದುದ್ದಕ್ಕೂ ಸಾಗಿಸುವ ಗುಣ ಧರ್ಮವನ್ನು ಬೆಳೆಸಿಕೊಳ್ಳಬೇಕಾಗಿದೆ ಎಂದು ಲಯನ್ಸ್‌  ಸೇವಾ ಸಂಸ್ಥೆಯ  ಅಧ್ಯಕ್ಷ ಅಮೋಘ ಬದಾಮಿ  ಹೇಳಿದರು.  

ಅವರು ಇತ್ತೀಚೆಗೆ, ಲಯನ್ ಶಾಲಾ ಸಭಾ ಭವನದಲ್ಲಿ ಲಯನ್ಸ್‌ ಕ್ಲಬ್  ಆಯೋಜಿಸಿದ್ದ, ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನೋತ್ಸವದ ಶಿಕ್ಷಕರ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸಮಾಜದ ಮುಖ್ಯ ವಾಹಿನಿಗೆ ತರುವ ಗುರುತರವಾದ ಜವಾಬ್ದಾರಿ ಶಿಕ್ಷಕರಿಂದ ಮಾತ್ರ ಸಾಧ್ಯ. ಪವಿತ್ರ ವೃತ್ತಿ, ನಿವೃತ್ತಿಯ ನಂತರವೂ, ಸಹ  ವೃತ್ತಿಯಲ್ಲಿರುವವರಸ್ಟೇ ಗೌರವಕ್ಕೆ ಪಾತ್ರರಾಗಬೇಕಾದ ಅಗತ್ಯವಿದೆ ಎಂದರು.     

ನಿವೃತ್ತ  ಶಿಕ್ಷಕರಾದ ಎಚ್‌.ಆರ್‌.ವೆಂಕಣ್ಣನವರ, ಶ್ರೀಮತಿ ಅಕ್ಕಮಹಾದೇವಿ ಆರ್‌. ಪಿ., ಹೆಚ್‌.ಸಿ.ಬಿದರಿ, ಮಾಲತೇಶ ಸಂಕಣ್ಣನವರ, ಮೊದಲಾದವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.  

ವೇದಿಕೆಯಲ್ಲಿ ಕಾರ್ಯ ದರ್ಶಿ  ಶಿವಪ್ಪ ಗುರಿಕಾರ, ಕೋಶಾಧ್ಯಕ್ಷ ನಂದೀಶ್ ಆರ್, ಮಾಜಿ ಅಧ್ಯಕ್ಷರಾದ ಬಿ.ಎನ್‌. ಪಾಟೀಲ, ಎಲ್‌.ಜಿ.ಶೆಟ್ಟರ್, ಜಯಣ್ಣ ಮುಚುಡಿ, ಬಸವರಾಜ ಬಡಿಗೇರ, ಡಾ. ಸಂಜಯ ನಾಯಕ, ಹುಚ್ಚಪ್ಪ ಹಳೆಮನಿ, ಕೊಟ್ರೇಶಪ್ಪ ಎಮ್ಮಿ, ಅಶೋಕ ಹೊಟ್ಟಿಗೌಡ್ರ, ಕಿರಣಕುಮಾರ್ ಅಂತರವಳ್ಳಿ, ಸಂದೀಪ್ ಹಲಗೇರಿ, ರಘುನಂದ ಸಾಲಿ, ವ್ಹಿ.ಎಸ್‌. ಹಿರೇಮಠ, ಶಿವಾನಂದ ಸುಣಗಾರ, ಸೇರಿದಂತೆ ಶಾಲೆಯ ಶಿಕ್ಷಕ ಶಿಕ್ಷಕೀಯರು. ಮತ್ತು ಇತರರು ಉಪಸ್ಥಿತರಿದ್ದರು. ಶ್ರೀಮತಿ ರಜನಿ ಕುಲಕರ್ಣಿ ಪ್ರಾರ್ಥಿಸಿದರು. ಆರ್‌. ವಿ. ಸುರಗೊಂಡ, ಸ್ವಾಗತಿಸಿ, ಪ್ರಭು ಲಿಂಗಪ್ಪ ಹಲಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು.  

ಎಂ. ಹೆಚ್‌. ಪಾಟೀಲ ನಿರೂಪಿಸಿ, ಎಂ.ಜಿ. ಮಣ್ಣಮ್ಮನವರ ವಂದಿಸಿದರು. ನಂತರ ನಡೆದ ಶಾಲಾ ಮಕ್ಕಳ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮವು ಪಾಲಕರ ಗಮನ ಸೆಳೆದವು.