ಬೆಳಗಾವಿ

ಡಾ. ಸಾಬಣ್ಣ ತಳವಾರ ಆಗ್ರಹ

ಡಾ. ಸಾಬಣ್ಣ ತಳವಾರ ಆಗ್ರಹ

ಬೆಳಗಾವಿ 24 : ಸರಕಾರದ ಆದೇಶಕ್ಕೆ ಅನುಸಾರವಾಗಿ ಹಿಂದೂ ತಳವಾರ ಸಮುದಾಯದವರಿಗೆ ಪರಿಶಿಷ್ಠ ಪಂಗಡದ ಜಾತಿ ಪ್ರಮಾಣಪತ್ರ ನೀಡಲು ಎಲ್ಲ ಜಿಲ್ಲಾಧಿಕಾರಿ, ತಹಶೀಲ್ದಾರರಿಗೆ ಕಟ್ಟುನಿಟ್ಟಾಗಿ ಆದೇಶಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಡಾ. ಸಾಬಣ್ಣ ತಳವಾರ ಸರಕಾರವನ್ನು ಆಗ್ರಹಿಸಿದ್ದಾರೆ. 

ಹಲವಾರು ವರ್ಷಗಳ ಹೋರಾಟದ ಫಲವಾಗಿ ಎಲ್ಲ ಕ್ಷೇತ್ರದಿಂದ ಹಿಂದೂಳಿದ ತಳವಾರ ಸಮುದಾಯವನ್ನು ಪರಿಶಿಷ್ಠ ಪಂಗಡದ ಪಟ್ಟಿಯಲ್ಲಿ ಕೇಂದ್ರ ಸರಕಾರ ಆದೇಶ ಹೊರಡಿಸಿದ ರಾಜ್ಯ ಸರಕಾರ ಸಹ ಇದೇ ರೀತಿ ಕ್ರಮವಹಿಸಿದೆ. ಆದರೆ ಯಾದಗಿರಿ, ಶಹಾಪುರ, ಸುರಪುರ ಹಾಗೂ ಕಾಳಗಿ ತಾಲೂಕಿನ ತಹಶೀಲ್ದಾರರು ತಳವಾರ ಸಮುದಾಯದವರಿಗೆ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣಪತ್ರ ನೀಡುತ್ತಿಲ್ಲ. ಈ ಕುರಿತು ವಿಚಾರಿಸಿದರೆ ಕೆಲ ಗುಂಪುಗಳು ಬೆದರಿಕೆ ಹಾಕುತ್ತಿವೆ. ಈ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಅವರೂ ಸಹ ಆದೇಶ ಮಾಡಿರುತ್ತಾರೆ. 

ಈ ಕುರಿತು ಸರಕಾರ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕೆಂದು ಡಾ. ತಳವಾರ ವಿಧಾನಮಂಡಳದ ಅಧಿವೇಶನದಲ್ಲಿ ಆಗ್ರಹಿಸಿದ್ದಾರೆ.

ಸುದ್ದಿ ಓದಿ