ಧಾರವಾಡ ಕೃಷಿ ವಿವಿಯಲ್ಲಿ ಡಾ. ಆರ್.ಕೆ. ಹೆಗಡೆ ಸ್ಮಾರಕ ಉಪನ್ಯಾಸ
Dr. R.K. Hegde Memorial Lecture at the University of Agricultural Sciences, Dharwad
ಲೋಕದರ್ಶನ ವರದಿ
ಧಾರವಾಡ 11: ಕೃಷಿ ವಿಶ್ವವಿದ್ಯಾಲಯದ ಸಸ್ಯ ರೋಗಶಾಸ್ತ್ರ ವಿಭಾಗದ ವತಿಯಿಂದ ವಿಶ್ವಪ್ರಸಿದ್ಧ ಕೃಷಿ ವಿಜ್ಞಾನಿ ಹಾಗೂ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಮಾಜಿ ದ್ವಿತೀಯ ಕುಲಪತಿಗಳಾದ ದಿವಂಗತ ಡಾ. ಆರ್.ಕೆ. ಹೆಗಡೆ ಅವರ ಸ್ಮರಣಾರ್ಥ 20ನೇ ಸ್ಮಾರಕ ಉಪನ್ಯಾಸ ಸರಣಿ ಕಾರ್ಯಕ್ರಮವನ್ನು 2026ರ ಜುಲೈ 9ರಂದು ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಮಹಾರಾಷ್ಟ್ರದ ಅಕೋಲಾದ ಡಾ. ಪಂಜಾಬರಾವ್ ದೇಶಮುಖ ಕೃಷಿ ವಿದ್ಯಾಪೀಠದ ಮಾಜಿ ವಿಸ್ತರಣಾ ಶಿಕ್ಷಣ ನಿರ್ದೇಶಕರಾದ ಡಾ. ರಾಜೇಂದ್ರ ಎಂ. ಗಾಡೆ ಅವರು “ತೋಟಗಾರಿಕಾ ಬೆಳೆಗಳಲ್ಲಿ ಫೈಟೋಫ್ಥೋರಾ ರೋಗಗಳು ಮತ್ತು ಅವುಗಳ ನಿರ್ವಹಣೆ ಹಿ ವಿಶೇಷವಾಗಿ ಸಿಟ್ರಸ್ ಬೆಳೆಗಳ ಪರಿಪ್ರೇಕ್ಷ್ಯದಲ್ಲಿ” ಎಂಬ ವಿಷಯದ ಕುರಿತು ಸ್ಮಾರಕ ಉಪನ್ಯಾಸ ನೀಡಿದರು.
ಅವರು ಸಿಟ್ರಸ್ ಬೆಳೆಗಳಲ್ಲಿ ಕಾಣಿಸಿಕೊಳ್ಳುವ ಫೈಟೋಫ್ಥೋರಾ ರೋಗಗಳ ಗುರುತಿಸುವಿಕೆ ವಿಧಾನಗಳು, ಉತ್ಪಾದನಾ ನಷ್ಟಗಳು, ಆಣ್ವಿಕ ತಂತ್ರಜ್ಞಾನಗಳು, ಕೃತಕ ಬುದ್ಧಿಮತ್ತೆ ಆಧಾರಿತ ರೋಗನಿರ್ಣಯ ಸಾಧನಗಳು ಹಾಗೂ ಸಮಗ್ರ ನಿರ್ವಹಣಾ ಕ್ರಮಗಳ ಕುರಿತು ವಿವರಿಸಿದರು. ಮಹಾರಾಷ್ಟ್ರ ಮತ್ತು ಕರ್ನಾಟಕದ ಸಿಟ್ರಸ್ ಬೆಳೆ ಪ್ರದೇಶಗಳಲ್ಲಿ ಈ ರೋಗದ ಮಹತ್ವವನ್ನು ಅವರು ವಿಶೇಷವಾಗಿ ಉಲ್ಲೇಖಿಸಿದರು. ಸಂಶೋಧಕರು ಹಾಗೂ ವಿಸ್ತರಣಾ ಕಾರ್ಯಕರ್ತರು ರೈತರಿಗೆ ಪರಿಸರ ಸ್ನೇಹಿ ಮತ್ತು ಶಾಶ್ವತ ನಿರ್ವಹಣಾ ಕ್ರಮಗಳನ್ನು ತಲುಪಿಸುವಲ್ಲಿ ಈ ಉಪನ್ಯಾಸ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಲಪತಿ ಡಾ. ಎಂ. ವಿ. ಮಂಜುನಾಥ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ದಿವಂಗತ ಡಾ. ಆರ್.ಕೆ. ಹೆಗಡೆ ಅವರೊಂದಿಗೆ ಹೊಂದಿದ್ದ ಅನುಭವಗಳನ್ನು ಹಂಚಿಕೊಂಡರು. ರೈತ ಸಮುದಾಯಕ್ಕೆ ಕೀಟ ಮತ್ತು ರೋಗಗಳ ತ್ವರಿತ ಹಾಗೂ ಪರಿಣಾಮಕಾರಿ ನಿರ್ವಹಣೆಯ ಕುರಿತು ಮಾರ್ಗದರ್ಶನ ನೀಡುವ ಮೂಲಕ ಆರ್ಥಿಕ ನಷ್ಟವನ್ನು ಕಡಿಮೆ ಮಾಡಲು ಸಸ್ಯ ಸಂರಕ್ಷಣಾ ತಜ್ಞರು ಮುಂದಾಗಬೇಕು ಎಂದು ಅವರು ಕರೆ ನೀಡಿದರು.
ಮಹಾರಾಷ್ಟ್ರದಲ್ಲಿ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡ್ಡಿ; ಎಸ್ಸಿಆರ್ 25 ರೈಲುಗಳ ಮಾರ್ಗ ಬದಲಾವಣೆ
ಖಾನಾಪೂರ ಶಾಸಕ ಹಲಗೇಕರ ಅಡ್ಡ ಮತದಾನ ಮಾಡಿದರಾ?, ಅಂಜಲಿ ನಿಂಬಾಳಕರ್ ಮಾತಿನ ಮರ್ಮವೇನು
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ
ಚಂದ್ರಪುರ ಅರಣ್ಯದಲ್ಲಿ ಕಾಡುಪ್ರಾಣಿ ದಾಳಿಗೆ ಯುವಕ ಬಲಿ
ಅಧಿಕಾರ ದರ್ಪ : ಖಾನಾಪುರ ತಹಸೀಲ್ದಾರ್ ವಿರುದ್ಧ ಶಿಸ್ತುಕ್ರಮಕ್ಕೆ ಪಿಡಿಒಗಳಿಂದ ಡಿಸಿ, ಚು. ಆಯೋಗಕ್ಕೆ ದೂರು
ಗಗನಯಾನ ಮಿಷನ್ಗಾಗಿ ಮಹತ್ವದ ಪ್ಯಾರಾಶೂಟ್ ಏರ್ಡ್ರಾಪ್ ಪರೀಕ್ಷೆಯನ್ನು ಇಸ್ರೋ ಯಶಸ್ವಿಯಾಗಿ ನಡೆಸಿತು 